

ಯಾಕಿಷ್ಟು ನಿಧಾನ, ಏನೇನೋ ಪ್ರಧಾನ! ಈ ಅನುಭವ ಮೊದಲೇ ಇದ್ದಿದ್ದರೆ..,.
ಇಷ್ಟೆಲ್ಲಾ ಕಾಯಬೇಕಿರಲಿಲ್ಲ. . ನೋಯಬೇಕಿರಲಿಲ್ಲ ಕೂಡಾ.
ಎಸ್ಟೊಂದು ಕನಸು ಎಸ್ಟೆಲ್ಲಾ ಕಲ್ಪನೆ ಅವಿರತ ಧಾವಂತ!
ಈಗ ತುಸು ನಿಧಾನ. ಮಾತಿಗೆ ಲಯ, ಬುದ್ಧಿಗೆ ಭಯ. ಇಷ್ಟೆಲ್ಲಾ ಯೋಚನೆ ಮೊದಲೇ ಸುಳಿದಿದ್ದರೆ…..
ಬಿರುಗಾಳಿ ತಂಗಾಳಿ ಯಾಗಿ ಬದಲಾಗುತಿತ್ತೇನೋ?
ಮಳೆ ಸೋನೆಯಾಗಿ ತೊ ನೆಯುತಿತ್ತೇನೋ?
ಈಗಲೂ ಕಾಲ ಮಿಂಚಿಲ್ಲ….. ಮತ್ತೆ ಬರುವ ಗಾಳಿ ಸಿಹಿಗಾಳಿ ಆಗಲಿದೆ.
ಮಳೆ ಮಧುರ ಕಾವ್ಯವಾಗಲಿದೆ. ಮತ್ತೆ ಹಸಿರು ಮೆಲ್ಲನೆ ಎದ್ದು… ಶ್ರಾವಣ ಬರಲಿಕ್ಕಿದೆ.
ನಿಲ್ಲಿ ಅಲ್ಲೆಲ್ಲೋ ಮಾವು ಚಿಗುರಿದ ಸದ್ದು… ಜೊತೆಗೆ ಕೋಗಿಲೆಯ ಕುಹೂ ಕುಹೂ….
ಸದ್ಯ ಇಷ್ಟು ಸಾಕು ಆತ್ಮಹತ್ಯೆಯ ಯೋಚನೆ ಕೈಬಿಡಲು…
ಮತ್ತೆ ಮಳೆಯಾಗಲಿದೆ ಭೂಮಿಯ ಬೆವರ ಕಂಪು ಸೂಸುವ ಮುನ್ಸೂಚನೆ…
ಚೆ.. ಸಂಯಮ ತಪ್ಪಿದರೆ ಅವಕಾಶ ವೆಲ್ಲಿ?
ಈ ಹಗ್ಗ ಪಾಶವಾಗುವ ಮೊದಲು ಹಸಿರ ಹಾವಾಗಿತ್ತು. ಹೆದರಿದವರೆಸ್ಟು ಜನ ಇದೇ ಹಾವೆಂದು!
ಹಗ್ಗ ಹಾವಾಗುವುದು. ಹಾವು ಹಗ್ಗವಾಗುವುದು ಈಶ್ವರನ ನಾಡಿನ ಮಹಿಮೆ…
ನಾವು ಪರಶುರಾಮ ಸೃಷ್ಟಿಯ ನಾಡಿನ ಜನರಂತೆ!
ಕಡಿದ ಮಗು ವಿಗ್ನ ನಾಶಕ! ಸತ್ತ ತಾಯಿ ಯಲ್ಲಮ್ಮ ನಾಗುವ ವಿಸ್ಮಯ ವಿದೆ ಇಲ್ಲಿ.
ಯಾಕೆ ಆತ್ಮನ ಹತ್ಯೆ ಮಾಡುತಿದ್ದೀರಿ… ಹುಚ್ಚಪ್ಪ ಗಳಿರಾ…
ಮಾನವ ಜನ್ಮ ಬಲು ದೊಡ್ಡದು, ಉರುಳಿಗೆ ಬಲಿಯಾಗುವ ಮೂಖ ಪ್ರಾಣಿಗಳಾಗದಿರಿ
. ಮತ್ತೆ ಬರಲಿದೆ ಚೈತ್ರಾ….. ಚೈತ್ರದ ಪ್ರೇಮಾಂಜಲಿ…
-ಕನ್ನೇಶ್ವರ ನಾಯ್ಕ ಕೋಲಶಿರ್ಸಿ
