

ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಶರನ್ನವರಾತ್ರಿ ಉತ್ಸವ ಸಿದ್ಧಾಪುರದಲ್ಲಿ ವಿಜೃಂಬಣೆ ಮತ್ತು ಅದ್ಧೂರಿಯಾಗಿ ನಡೆಯಲಿದೆ. ಈ ಬಗ್ಗೆ ಸುಳಿವು ನೀಡಿರುವ ಸಂಘಟಕರು ಇಂದು ಈ ಬಗ್ಗೆ ಮಾಧ್ಯಮಗೋಷ್ಠಿ ನಡೆಸಿ ವಿವರ ನೀಡಿದರು.
ಅ.೧೬ ರಿಂದ ಪ್ರತಿದಿನ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಮೊದಲ ದಿನ ಸುಗಮ ಸಂಗೀತ ಮತ್ತು ಭಕ್ತಿ ಸಂಗೀತ ಕಾರ್ಯಕ್ರಮ, ೧೭ ರಂದು ನಮ್ಮನಿಮ್ಮೊಳಗೊಬ್ಬ ನಾಟಕ, ಮೂರನೇ ದಿನ ೧೮ ರಂದು ಹಿಂದೂಸ್ಥಾನಿ ಮತ್ತು ಸುಗಮ ಸಂಗೀತ ಗಳ ನೃತ್ಯ ಸಂಜೆ ೧೯ ರಂದು ೩೬ ಅಲ್ಲ ೬೩ ನಗೆ ನಾಟಕ ೨೪ ರಂದು ಸತ್ಯವಾನ್ ಸಾವಿತ್ರಿ ಯಕ್ಷಗಾನ ಸೇರಿದ ಸಾಂಸ್ಕೃತಿಕ ಕಾರ್ಯಕ್ರಮಗಳು ಶಂಕರಮಠದಲ್ಲಿ ನಡೆಯಲಿವೆ ಎಂದು ದೊಡ್ಮನೆ ವಿಜಯ ಹೆಗಡೆ ತಿಳಿಸಿದರು.

ಕವಿತೆಗಳ ಮೌಲ್ಯ ಕೆ.ಬಿ. ವೀರಲಿಂಗನಗೌಡ
ಭುವನಗಿರಿಯ ಭುವನೇಶ್ವರಿ ದೇವಸ್ಥಾನದಲ್ಲಿ ಅ.೧೫ ರಿಂದ ೨೩ ರ ವರೆಗೆ ಪ್ರತಿದಿನ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು ಈ ಶರನ್ನವರಾತ್ರಿ ಉತ್ಸವದಲ್ಲಿ ಪಾಲ್ಗೊಳ್ಳಲು ಸಾರ್ವಜನಿಕರನ್ನು ಆಮಂತ್ರಿಸಿದರು.
