

೨೦೨೪ ರ ಜನೇವರಿಯಲ್ಲಿ ಉದ್ಘಾಟನೆಗೊಳ್ಳಲಿರುವ ರಾಮಮಂದಿರದ ಹಿನ್ನೆಲೆಯಲ್ಲಿ ನಡೆಯುತ್ತಿರುವ ಶೌರ್ಯಜಾಗರಣ ಯಾತ್ರೆಯ ಮೆರವಣಿಗೆ ಮತ್ತು ಸಭಾ ಕಾರ್ಯಕ್ರಮ ಅ.೧೪ ರ ಮಧ್ಯಾಹ್ನ ಸಿದ್ಧಾಪುರದಲ್ಲಿ ನಡೆಯಲಿದೆ ಎಂದು ಸಿದ್ಧಾಪುರ ತಾಲೂಕಾ ಭಜರಂಗದಳ ಸಂಚಾಲಕ ಅಣ್ಣಪ್ಪ ಜಿ.ನಾಯ್ಕ ತಿಳಿಸಿದರು.
ನಗರದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು ಶನಿವಾರ ಮಧ್ಯಾಹ್ನ ೨-೩೦ ಕ್ಕೆ ಗಂಗಾಮಾತಾ ದೇವಾಲಯದಿಂದ ಹೊರಟು ಹೊಸುರು ಸರ್ಕಲ್ ಭಗತ್ ಸಿಂಗ್ ವೃತ್ತದ ಮೂಲಕ ಹಾಯ್ದು ನೆಹರೂ ಮೈದಾನದಲ್ಲಿ ಸಮಾವೇಶವಾಗಲಿದೆ.
೫-೩೦ ರ ಸಭಾ ಕಾರ್ಯಕ್ರಮದಲ್ಲಿ ಚೈತನ್ಯ ರಾಜಾರಾಮ ಕ್ಷೇತ್ರದ ಬ್ರಹ್ಮಾನಂದ ಭಾರತೀ ಸ್ವಾಮೀಜಿ ದಿವ್ಯಸಾನಿಧ್ಯದಲ್ಲಿ ಅಂಕಣಕಾರ ಆದರ್ಶ ಗೋಖಲೆ ಘನ ಉಪಸ್ಥಿತಿ ಇರಲಿದೆ. ಈ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಪಾಲ್ಗೊಳ್ಳಲು ಅವರು ಕೋರಿದರು. ಈ ವೇಳೆಮಾರುತಿ ಬಾಲಿಕೊಪ್ಪ, ಯಶವಂತ,ಗರೀಶ್ ಶೇಟ್, ಸಂಜುನಾಯ್ಕ,ದೇವರಾಜ್ ಸೇರಿದಂತೆ ಕೆಲವರಿದ್ದರು.

