

ಸಿದ್ಧಾಪುರ ತಾಲೂಕಿನ ಗೋಳಗೋಡ್ (ಅಕ್ಕುಂಜಿ) ಗೆಳೆಯರ ಬಳಗ ಡಿ. ೨೬ ರಂದು ಬಂಗಾರಪ್ಪ ಟ್ರೋಫಿ ಆಯೋಜಿಸಿದೆ. ದಿ.ಎಸ್. ಬಂಗಾರಪ್ಪ ಸ್ಮರಣಾರ್ಥ ಅವರ ಪುಣ್ಯತಿಥಿಯ ಡಿ.೨೬ ರಂದು ನಡೆಯಲಿರುವ ಬಂಗಾರಪ್ಪ ಟ್ರೋಫಿ ಪ್ರೋ ಕಬ್ಬಡ್ಡಿ ಲೀಗ್ ಆಗಿದ್ದು ಹರಾಜಿನಲ್ಲಿ ಭಾಗವಹಿಸಿ ಮಾಲಿಕತ್ವ ಪಡೆದ ತಂಡಗಳು ಈ ಪಂದ್ಯಾಟದಲ್ಲಿ ಭಾಗವಹಿಸಲಿವೆ. ಗೋಳಗೋಡಿನ ಬಸವೇಶ್ವರ ಮೈದಾನದಲ್ಲಿ ನಡೆಯಲಿರುವ ಈ ಟ್ರೋಫಿಯಲ್ಲಿ ರಾಜ್ಯದ ಪ್ರಮುಖ ತಂಡಗಳು ಭಾಗವಹಿಸುವ ನಿರೀಕ್ಷೆ ಇದೆ. ಈ ಬಗ್ಗೆ ಹೆಚ್ಚಿನ ಮಾಹಿತಿಗೆ ಗಂಗಾಧರ ಗೋಳಗೋಡು (೯೦೧೯೧೭೫೩೭೬, ಮತ್ತು ೮೯೭೧೨೩೭೦೧೪ (ಮಂಜು) ರನ್ನು ಸಂಪರ್ಕಿಸಲು ಕೋರಲಾಗಿದೆ.
https://www.facebook.com/reel/2274236092784427
