ಹೀಗೂ ಉಂಟೆ…?-ಬದ್ರುದ್ದೀನ್ ಫರೀದ್ ನಗರ ಹರೇಕಳವನ್ನು ಎತ್ತರಕ್ಕೇರಿಸಿದ ಛಲಗಾರ!

ಜಿಲ್ಲಾ_ರಾಜ್ಯೋತ್ಸವ_ಪ್ರಶಸ್ತಿ ಸ್ವೀಕಾರ

ಬದ್ರುದ್ದೀನ್ ಫರೀದ್ ನಗರ

ಹರೇಕಳವನ್ನು ಎತ್ತರಕ್ಕೇರಿಸಿದ ಛಲಗಾರ.. Baduru Harekala


ಹರೇಕಳ ಗ್ರಾಮ ಪಂಚಾಯತ್ ಅತ್ಯಂತ ಸಣ್ಣ ಪ್ರಾಯದಲ್ಲೇ ಹರೇಕಳ ಎನ್ನುವ ಕುಗ್ರಾಮದ ಅಧ್ಯಕ್ಷ ಗಾದಿಗೆ ಏರಿದವರು. ಇವರು ಅಧ್ಯಕ್ಷರಾದಾಗ ಗ್ರಾಮಕ್ಕೇನು ಮಾಡಿಯಾರು ಎಂದು ಆಡಿಕೊಂಡವರೇ ಹೆಚ್ಚು. ಆದರೆ ಅಂದು ಆಡಿಕೊಂಡವರು ಅವರ ಅವಧಿಯಲ್ಲಿ ಶರವೇಗದಲ್ಲಿ ಆದ ಗ್ರಾಮದ ಅಭಿವೃದ್ಧಿ ಕಂಡು ಕನಸೋ ನನಸೋ ಎಂದು ಗೊಂದಲದಲ್ಲಿದ್ದಾರೆ‌.

ತೀಕ್ಷ್ಣ ಮಾತುಗಳು, ಎಲ್ಲರೊಂದಿಗೂ ಬೆರೆಯುವ, ಯಾರನ್ನು ಬೇಕಾದರೂ ತನ್ನ ಮಾತಿನ ಬಲೆಗೆ ಸಿಲುಕಿಸಬಲ್ಲ ಮೃಧು ಸ್ವಭಾವ, ಅಭಿವೃದ್ಧಿಯ ಚಿಂತನೆಯೇ ಅವರಿಗೆ ಸಣ್ಣ ಪ್ರಾಯದಲ್ಲೇ ಸರ್ಕಾರಿ ಮಟ್ಟದ ಪ್ರಶಸ್ತಿಯತ್ತ ಕೊಂಡೊಯ್ದಿದೆ‌‌.

ರಾಜ್ಯದ ಸ್ಪೀಕರ್ ಯು.ಟಿ.ಖಾದರ್ ಅವರ ತಂದೆ ದಿ.ಯು‌‌.ಟಿ.ಫರೀದ್ ಅವರ ಹೆಸರುಳ್ಳ ಊರಿನ ಬದ್ರು ಬಗ್ಗೆ ಖಾದರ್ಗೂ ವಿಶೇಷ ಅಕ್ಕರೆ‌.‌ ಹಾಗೆಂದ ಮಾತ್ರಕ್ಕೆ ಅವರಿಗೆ ಯಾರದ್ದೋ ಪ್ರಭಾವದಿಂದ ಪ್ರಶಸ್ತಿ ಲಭಿಸಿಲ್ಲ‌. ಸರ್ಕಾರೀ ಅಧಿಕಾರಿಗಳೇ ಪಂಚಾಯತ್ ಮಟ್ಟದ ಸಾಧನೆ ಗುರುತಿಸಿ ಕೊಟ್ಟಿದ್ದಾರೆ. ಇದನ್ನು ನೋಡುವಾಗ ಅವರಿಗೆ ರಾಜ್ಯ ಮಟ್ಟದ ಪ್ರಶಸ್ತಿ ಬರಬೇಕಿತ್ತು ಎಂದು ಭಾವಿಸಿದರೂ ತಪ್ಪಿಲ್ಲ.

ವಾರ್ಷಿಕವಾಗಿ 15 ಲಕ್ಷ ಆದಾಯ, ಕೋಳಿಗೂಡು ಮಾದರಿ ಪಂಚಾಯತ್ ಈಗ ಸಂಪೂರ್ಣ ಬದಲಾಗಿದೆ‌‌‌. ಒಂದೂವರೆ ಕೋಟಿಯ ವಿದಾನಸೌಧ ಮಾದರಿಯ ಪಂಚಾಯತ್ ಕಟ್ಟಡ, ಸಭಾಂಗಣ, ಆಧುನಿಕ ಗ್ರಂಥಾಲಯ, ಅಂಚೆ ಕಚೇರಿ, ವೃಂದಾವನ, ಹವಾನಿಯಂತ್ರಿತ ವ್ಯವಸ್ಥೆ, ಶುದ್ಧ ಕುಡಿಯುವ ನೀರು, ಅಕ್ವೇರಿಯಂ, ಪ್ರತ್ಯೇಕ ಕೊಠಡಿಗಳು. ಅಂಗಳಕ್ಕೆ ಇಂಟರ್ ಲಾಕ್ ಬೇರೆ.

ಸ್ವಚ್ಚತೆಗೆ ಘಟಕ, ಜನರನ್ನು ಎಚ್ಚರಿಸಲು ಅಲ್ಲಲ್ಲಿ ಫಲಕಗಳು‌. ಗ್ರಾಮಕ್ಕೆಂದೇ ಒಂದು ಆಸ್ಪತ್ರೆ. ಇದೆಲ್ಲವನ್ನೂ ಮಾಡಿಸುವಲ್ಲಿ ಸಫಲರಾವರು. ಈ ಎಲ್ಲಾ ಕೆಲಸಕ್ಕೂ ಸರ್ಕಾರದ ಅನುದಾನ ಸಿಕ್ಕಿದೆ ಎಂದರೆ ಮೂರ್ಖತನ. ಸರ್ಕಾರಿ ಮಟ್ಟದಲ್ಲಿ ಸಿಕ್ಕ ಅನುದಾನಕ್ಕಿಂತಲೂ ಹೆಚ್ಚಿನ ಅನುದಾನವನ್ನು ದಾನಿಗಳ ಮೂಲಕ ಕ್ರೋಡೀಕರಿಸಿದ್ದು ಅವರ ಅಭಿವೃದ್ಧಿಯ ಕನಸು, ನಿರಂತರ ಪ್ರಯತ್ನಕ್ಕೆ ಪಂಚಾಯತ್ ಸದಸ್ಯರು ಸಂಪೂರ್ಣ ಸಹಕಾರ ನೀಡಿದ್ದಾರೆ ಎನ್ನುವುದನ್ನು ಅಲ್ಲಗಳೆಯುವಂತಿಲ್ಲ. ಪಂಚಾಯತ್ ಸದಸ್ಯರು, ಅಧಿಕಾರಿಗಳು, ಜನರ ಸಹಕಾರ ಸಿಗಬೇಕಾದರೆ ಸಹಾಯ ಯೋಚಿಸುವವರ ಬಗ್ಗೆ ವಿಶ್ವಾಸ, ಅಭಿಮಾನ ಹೊಂದಿರಬೇಕಾಗುತ್ತದೆ. ಅದೆಲ್ಲವನ್ನೂ ಬದ್ರುದ್ದೀನ್ ಸಂಪಾದಿಸಿದ್ದರು.

ಎರಡೂವರೆ ವರ್ಷಗಳ ಹಿಂದೆ ಅವರು ಅಧ್ಯಕ್ಷ ಗಾದಿಗೆ ಏರುವಾಗ ಇದ್ದ ಪಂಚಾಯತ್ ನೋಡಿದವರು ಇಂದಿನ ಪಂಚಾಯತ್ ನೋಡಿ ಅಚ್ಚರಿಗೊಳಗಾಗುತ್ತಿದ್ದಾರೆ. ಹರೇಕಳ ಗ್ರಾಮ ಪಂಚಾಯತ್ ಇಂದು ರಾಜ್ಯಕ್ಕೇ ಮಾದರಿಯಾಗಿದ್ದು, ಕೋಟಿಗಟ್ಟಲೆ ಅನುದಾನ ಇರುವ ನಗರಾಡಳಿಗಾರರಲ್ಲಿ ಅಸೂಯೆ ಮೂಡಿಸುವಂತಿದೆ. ಗ್ರಾಮಕ್ಕೆ ಮುಕುಟ ಎನ್ನುವಂತೆ ಇಲ್ಲಿನ ಇತಿಹಾಸ ಶಾಶ್ವತವಾಗಿಡುವ ಕೃತಿಯೂ ಹೊರಬಂದಿದೆ. ಈ ಕೃತಿಗಾಗಿ ಅವರು ತೋರಿಸಿದ ಉತ್ಸಾಹ ಇನ್ಯಾರಲ್ಲೂ ಕಾಣಲಸಾಧ್ಯ‌. ಓರ್ವ ಪ್ರಾಮಾಣಿಕ, ದಕ್ಷ, ಪ್ರಬುದ್ಧ ವ್ಯಕ್ತಿಯ ಕೈಗೆ ಆಡಳಿತ ಸಿಕ್ಕರೆ ಯಾವ ರೀತಿಯ ಬದಲಾವಣೆ ಕಾಣಬಹುದು ಎನ್ನುವುದಕ್ಕೆ ಹರೇಕಳ ಗ್ರಾಮ ಪಂಚಾಯತ್ ಕಚೇರಿ, ಅದರ ಹಿಂದಿರುವ ನಿಕಟಪೂರ್ವ ಅಧ್ಯಕ್ಷರಾದ ಬದ್ರುದ್ದೀನ್ ಪ್ರತ್ಯಕ್ಷ ನಿದರ್ಶನ. ಈ ಮೂಲಕ ಪ್ರಶಸ್ತಿಯ ಘನತೆಯೂ ಹೆಚ್ಚಿದಂತಾಗಿದೆ. ಇವರ ಮುಂದಿನ ಜೀವನ ಯಶಸ್ಸಿನಿಂದಲೇ ಕೂಡಿರಲಿ ಈ ಪ್ರಶಸ್ತಿ ಮುಂದಿನ ದಿನಗಳಲ್ಲಿ ಇತರ ಪಂಚಾಯತ್ ಅಧ್ಯಕ್ಷರುಗಳಿಗೆ ದಾರಿದೀಪ ಆಗಿರಲಿ ಎನ್ನುವ ಹಾರೈಕೆಯೊಂದಿಗೆ…

ಅನ್ಸಾರ್ ಇನೋಳಿ, ಪತ್ರಕರ್ತ

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಕದಂಬಜಿಲ್ಲೆಗಾಗಿ ಸಹಿಸಂಗ್ರಹಣೆ, ಕಾನಳ್ಳಿಯಲ್ಲಿ ಹಸ್ಲರ್‌ ಸಂಘಕ್ಕೆ ಚಾಲನೆ,ಸೋಮುವಾರ ಮಹಿಳಾ ಸಂವೇದನೆ ಕವಿಗೋಷ್ಠಿ‌

ನಿರಂತರ ಹೋರಾಟದಲ್ಲಿರುವ ಶಿರಸಿ ಕೇಂದ್ರಿತ ಪ್ರತ್ಯೇಕ ಕದಂಬ ಜಿಲ್ಲೆ ಹೋರಾಟ ಸಮೀತಿ ಈ ತಿಂಗಳಿಂದ ಸಿದ್ಧಾಪುರದ ಗ್ರಾಮೀಣ ಪ್ರದೇಶಗಳಲ್ಲಿ ಪ್ರತ್ಯೇಕ ಜಿಲ್ಲೆಗಾಗಿ ಸಹಿ ಸಂಗ್ರಹಣೆ...

ಧಾರ್ಮಿಕ, ಆರ್ಥಿಕ, ಶೈಕ್ಷಣಿಕ ಕೆಲಸಗಳಿಂದ ಸುಸ್ಥಿರ ಅಭಿವೃದ್ಧಿ… ಅರಶಿನಗೋಡು ಅಷ್ಟಬಂಧ ಹಾಗೂ ಬ್ರಹ್ಮಕಲಶೋತ್ಸವ ಸಂಪನ್ನ

ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಶಿಕ್ಷಣ ಮತ್ತು ಉದ್ಯೋಗ ಗಳಿಗೆ ಹೆಚ್ಚಿನ ಮಹತ್ವ ನೀಡಿದರೆ ಹೊಸ ಪೀಳಿಗೆ ಮಹತ್ವದ್ದನ್ನು ಸಾಧಿಸಲು ಸಾಧ್ಯ ಎಂದಿರುವ ಶಾಸಕ ಭೀಮಣ್ಣ ನಾಯ್ಕ...

ಬಿ.ಜೆ.ಪಿ. & ಕಾಂಗ್ರೆಸ್‌ ಗಳಿಂದ ತುಷ್ಟೀಕರಣದ ಸ್ಫರ್ಧೆ… ಕಾಂಗ್ರೆಸ್‌ ಬಸ್ಮಾಸುರ,ಬಿ.ಜೆ.ಪಿ. ಬಕಾಸುರ….

ಮುಸ್ಲಿಂ ಅಲ್ಪಸಂಖ್ಯಾತರನ್ನು ಒಲೈಸುವಲ್ಲಿ ಬಿ.ಜೆ.ಪಿ. ಮತ್ತು ಕಾಂಗ್ರೆಸ್‌ ಗಳು ಸ್ಫರ್ಧೆ ನಡೆಸಿದ್ದು ಅಪಾಯಕಾರಿ ನಡೆಗಳಲ್ಲಿ ಎರಡೂ ಪಕ್ಷಗಳೂ ಒಂದೇ ನಾಣ್ಯದ ಎರಡು ಮುಖಗಳಿಂತಿವೆ ಎಂದು...

ಬಹಿರಂಗ ಶುದ್ಧಿ ಜೊತೆಗೆ ಅಂತರಂಗ ಶುದ್ಧಿ ಮಹತ್ವ

ಸಿದ್ದಾಪುರದಲ್ಲಿ ಪವಿತ್ರ ರಂಜಾನ್ ಸಂಭ್ರಮಾಚರಣೆಸಿದ್ದಾಪುರ :31ಒಂದು ತಿಂಗಳ ಕಾಲ ಉಪವಾಸ ವ್ರತವನ್ನು ಆಚರಿಸಿದ ಮುಸ್ಲಿಮ್ ಬಾಂಧವರು ಪವಿತ್ರ ರಂಜಾನ್ (ಈದ್ ಉಲ್ ಫಿತ್ರ )ಹಬ್ಬವನ್ನು...

samajamukhi.net exclusive- ಇಂದು ಕರ್ನಾಟಕ….ಪತ್ರಕರ್ತ ವಿಶ್ವಾಮಿತ್ರ ಹೆಗಡೆ ವಿಧಿವಶ,ಶಿರಸಿಗೆ ಬಾರದ ಗೃಹಸಚಿವ,ಹಳದೋಟದಲ್ಲಿ ನಡೆಯಿತು ಸೇನಾವಿಧಿ!

ಶಿರಸಿಯ ಹಿರಿಯ ಪತ್ರಕರ್ತ ವಿಶ್ವಾಮಿತ್ರ ಹೆಗಡೆ ಭತ್ತಗುತ್ತಿಗೆ ಇಂದು ವಿಧಿವಶರಾಗಿದ್ದಾರೆ. ಪ್ರತಿಷ್ಠಿತ ಭತ್ತಗುತ್ತಿಗೆ ಕುಟುಂಬದ ವಿಶ್ವಾಮಿತ್ರ ಹೆಗಡೆ ಕನ್ನಡಪ್ರಭ,ವಿಶ್ವವಾಣಿ ಸೇರಿದಂತೆ ಕೆಲವು ಪತ್ರಿಕೆಗಳಲ್ಲಿ ಕೆಲಸಮಾಡಿದ್ದರು....

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *