
ಕನ್ನಡ ಭಾಷೆ,ಇಲ್ಲಿಯ ನೆಲ-ಜಲಗಳ ಬಗ್ಗೆ ಹೊಸ ಪೀಳಿಗೆಗೆ ತಿಳುವಳಿಕೆ ನೀಡುವ ಮೂಲಕ ಭಾಷೆ ಮತ್ತು ನೆಲದ ಬಗ್ಗೆ ಅಭಿಮಾನ ಮೂಡಿಸಬೇಕು ಎಂದು ಶಾಸಕ ಭೀಮಣ್ಣ ನಾಯ್ಕ ಕರೆನೀಡಿದರು. ಕನ್ನಡ ರಾಜ್ಯೋತ್ಸವ ಮೆರವಣಿಗೆಗೆ ಚಾಲನೆ ನೀಡಿದ ನಂತರ ಐತಿಹಾಸಿಕ ನೆಹರೂ ಮೈದಾನದಲ್ಲಿ ರಾಜ್ಯೋತ್ಸವ ಸಂದೇಶ ನೀಡಿದ ಅವರು ಕರ್ನಾಟಕದಲ್ಲಿರುವವರೆಲ್ಲರೂ ಕನ್ನಡ ಕಲಿಯಬೇಕು ಕನ್ನಡ ಕಲಿಯುವ ಮೂಲಕ ಹೊರ ರಾಜ್ಯದವರೂ ಕನ್ನಡ ಕರ್ನಾಟಕ ಪ್ರೀತಿಸುವಂತಾಗಬೇಕು ಎಂದರು.
೫೦ ನೇ ಕರ್ನಾಟಕ ರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿದ ತಹಸಿಲ್ಧಾರ ಎಂ.ಆರ್.ಕುಲಕರ್ಣಿ ಕನ್ನಡ ಮನೆ,ಮನದ ಭಾಷೆಯಾಗಲಿ ಎಂದು ಆಶಿಸಿ ಅಖಂಡ ಕರ್ನಾಟಕ ಸ್ಥಾಪನೆಗೆ ಶ್ರಮಿಸಿದ ಪ್ರಮುಖರನ್ನು ಸ್ಮರಿಸಿದರು.
