ಕನ್ನಡ ನಾಡು-ನುಡಿಯ ಅಭಿಮಾನ ಬೆಳೆಸುವ ಮೂಲಕ ಭಾಷೆ ಉಳಿಸುವ ಕೆಲಸ ಈಗ ಹೆಚ್ಚಿನ ಮಹತ್ವದ್ದು ಎಂದು ಪ್ರತಿಪಾದಿಸಿರುವ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಆಯ್. ನಾಯ್ಕ ಗುರುಹಿರಿಯರಿಗೆ ಗೌರವ ಕೊಡುವ ಮೂಲಕ ನೆಲದ ಸಂಸ್ಕೃತಿ ಉಳಿಸುತ್ತಲೇ ಸಾಧನೆ ಮಾಡಿದ ಬಹುತೇಕರು ಸರ್ಕಾರಿ ಶಾಲೆಗಳಲ್ಲಿ ಕಲಿತವರು ಎನ್ನುವುದು ಹೆಗ್ಗಳಿಕೆ ಎಂದಿದ್ದಾರೆ.
ಇಂದು ಸಿದ್ಧಾಪುರ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಬಾಲಿಕೊಪ್ಪದಲ್ಲಿ ನಡೆದ ಮಕ್ಕಳ ಸಾಹಿತ್ಯ ಅವಲೋಕನ ಹಾಗೂ ವಿದ್ಯಾರ್ಥಿ ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿದ ಅವರು ಸರ್ಕಾರಿ ಶಾಲೆ ಮತ್ತು ಕನ್ನಡದ ಅನುಬಂಧ ಅನುಪಮ ಎಂದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಸಿದ್ದಾಪುರ ತಾಲೂಕಾ ಕ.ಸಾ.ಪ. ಮತ್ತು ಮಾದರಿ ಹಿ.ಪ್ರಾ.ಶಾಲೆ ಬಾಲಿಕೊಪ್ಪಗಳ ಸಂಯೋಜನೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಿ ಮಾತನಾಡಿದ ಪತ್ರಕರ್ತ ಕನ್ನೇಶ್ ಕೋಲಶಿರ್ಸಿ ವಿಶಾಲ ಮನೋಭಾವ, ವಿಶಾಲದೃಷ್ಟಿಕೋನಗಳಿಂದ ನಮ್ಮ ಕಲಿಕೆಯ ವ್ಯಾಪ್ತಿ ವಿಸ್ತರಿಸುತ್ತದೆ ಎಂದರು.
ಕವಿಯತ್ರಿ ಸುಧಾರಾಣಿ ಆರ್. ನಾಯ್ಕ ಮಕ್ಕಳ ಸಾಹಿತ್ಯ ಅವಲೋಕನ ಮಾಡಿದರು.ಮುಖ್ಯ ಅತಿಥಿ ಬಿ.ಆರ್.ಸಿ.ಸಮನ್ವಯಾಧಿಕಾರಿ ಚೈತನ್ಯಕುಮಾರ್ ಕೆ.ಎಂ.ಮಾತನಾಡಿದರು. ಮಕ್ಕಳು ಕವನ ಮತ್ತು ಕಥಾ ವಾಚನ ಮಾಡಿದರು. ಮುಖ್ಯಾಧ್ಯಾಪಕಿ ಸುಜಾತಾ ಶಾನ್ಭಾಗ್ ಸ್ವಾಗತಿಸಿದರು.ಶಿಕ್ಷಕಿ ಪದ್ಮಾವತಿ ನಾಯ್ಕ ನಿರೂಪಿಸಿದರು. ಕ.ಸಾ.ಪ. ಗೌರವ ಕಾರ್ಯದರ್ಶಿ ಅಣ್ಣಪ್ಪ ನಾಯ್ಕ ವಂದಿಸಿದರು. ಟಿ.ಕೆ.ಎಂ. ಅಜಾದ್ ಉಪಸ್ಥಿತರಿದ್ದರು.