


ಅಮೃತ ೨.೦ ಯೋಜನೆಯ ವಾಟರ್ ಫಾರ್ ವುಮೆನ್ ಅಡಿಯಲ್ಲಿ ಮಹಿಳಾ ಸ್ವ ಸಹಾಯ ಸಂಘಗಳಿಗೆ ನೀಡುವ ಪ್ರಾತ್ಯಕ್ಷಿಕೆ ಮತ್ತು ತರಭೇತಿ ಕಾರ್ಯಾಗಾರ ನಗರದ ಹಂಜಿಗೆಬೈಲ್ ಗುಡ್ಡದಲ್ಲಿ ನಡೆಯಿತು. ಶುದ್ಧ ಮತ್ತು ಸುರಕ್ಷಿತ ಕುಡಿಯುವ ನೀರಿನ ಪ್ರಕ್ರೀಯೆ ಮತ್ತು ಮಾಲಿಕತ್ವ ಭಾವನೆ ಹೊಂದಲು ಸಹಾಯಕವಾಗುವಂತೆ ಮಾಹಿತಿ ನೀಡಲಾಯಿತು. ಪ.ಪಂ. ಮುಖ್ಯಾಧಿಕಾರಿ ಜಗಧೀಶ್ ನಾಯ್ಕ ಈ ಕಾರ್ಯಕ್ರಮ ಉದ್ಘಾಟಿಸಿ ಪ್ರಾಸ್ಥಾವಿಕ ನುಡಿಗಳನ್ನಾಡಿದರು. ಸಂಪನ್ಮೂಲ ವ್ಯಕ್ತಿ ಪ್ರಶಾಂತ್ ಆಚಾರ್ಯ ತಿಳುವಳಿಕೆ ನೀಡಿದರು. ಸಮೂದಾಯ ಸಂಘಟನಾಧಿಕಾರಿ ರಮೇಶ್ ಕೆ.ಎಸ್. ಕಾರ್ಯಕ್ರಮಕ್ಕೆ ಸ್ವಾಗತಿಸಿ, ನಿರೂಪಿಸಿದರು. ಕಿರಿಯ ಆರೋಗ್ಯ ನಿರೀಕ್ಷಕಿ ಲಕ್ಷ್ಮೀ ವಂದಿಸಿದರು. ೩೦ ಕ್ಕೂ ಹೆಚ್ಚು ಮಹಿಳೆಯರು ಪಾಲ್ಗೊಂಡಿದ್ದರು.
