


ಸಿದ್ಧಾಪುರ ನಗರದ ಉದ್ಯಮಿ,ಸಂಘಪರಿವಾರದಲ್ಲಿ ಗುರುತಿಸಿಕೊಂಡಿದ್ದ ದಿನೇಶ್ ಪಟೇಲ್ ಎನ್ನುವ ಮಾರ್ವಾಡಿ ಮೇಲೆ ಹಲ್ಲೆ ಮಾಡಿದ ಆರೋಪಿ ತನ್ವೀರ್ ಹುಸೇನ್ ಸಾಬ್ ಹವ್ಯಾಸಿ ಅಪರಾಧಿ ಎನ್ನುವುದು ಬಹಿರಂಗವಾಗಿದೆ.
ಕಾಂಗ್ರೆಸ್ ಸದಸ್ಯ ಎನ್ನುವ ಈತ ಬಿ.ಜೆ.ಪಿ. ಲೆಟರ್ ಹೆಡ್ ಇಟ್ಟುಕೊಂಡು ಕೆಲವು ಅಧಿಕಾರಿಗಳಿಗೆ ಕಿರುಕುಳ ಕೊಟ್ಟ ಪ್ರಕರಣ ಸೇರಿದಂತೆ ಅನೇಕ ಪ್ರಕರಣಗಳ ಆರೋಪಿಯಾಗಿರುವ ತನ್ವೀರ್ ಹುಸೇನ್ ಸಾಬ್ ಸಹೋದರ ಬಿ.ಜೆ.ಪಿ.ಯ ಪದಾಧಿಕಾರಿ ಎನ್ನಲಾಗಿದೆ!.

ಇಂದು ಬೆಳಿಗ್ಗೆ ಸಮಯದಲ್ಲಿ ನಿರ್ಮಾಣ ಕಾಮಗಾರಿಗೆ ಮಾಲು ತಯಾರಿಸುತಿದ್ದ ದಿನೇಶ್ ಪಟೇಲ್ ಜೊತೆ ಜಗಳ ತೆಗೆದ ತನ್ವೀರ್ ಕಬ್ಬಿಣದ ರಾಡ್ ನಿಂದ ಹೊಡೆದೇ ಬಿಟ್ಟ. ಈ ವಿಷಯ ತಿಳಿದು ದಿಢೀರ್ ಜಮಾಯಿಸಿದ ನಗರದ ಬಿ.ಜೆ.ಪಿಯ ಎರಡೂ ಬಣಗಳು ಪೊಲೀಸ್ ಠಾಣೆಯೆದುರು ವಿಚಾರ ವಿನಿಮಯ ನಡೆಸಿದರು.
ಸಣ್ಣ-ಪುಟ್ಟ ವಿಚಾರಗಳಿಗೂ ಜಗಳ ತೆಗೆಯುವ ಈತನ ಮೇಲೆ ಕೆಲವು ಪ್ರಕರಣಗಳಿದ್ದು ಮೂವರು ಹೆಂಡತಿಯರಿಗೆ ಡೈವರ್ಸ್ ಮಾಡಿರುವ ವಿಷಯವೂ ಸೇರಿ ಕೌಟುಂಬಿಕ ಮತ್ತು ಸಾಮಾಜಿಕವಾಗಿ ಈತನ ಬಗ್ಗೆ ಸದಾಭಿಪ್ರಾಯ ಇಲ್ಲ ಎನ್ನಲಾಗಿದೆ.
ತನ್ವೀರ್ ನಿಂದ ಹೊಡೆಸಿಕೊಂಡ ದಿನೇಶ್ ಕೂಡಾ ಸಂಘದ ಸಂಪರ್ಕದಿಂದಾಗಿ ಕೆಲವು ವಿಷಯಗಳಲ್ಲಿ ಅತಿ ಎನ್ನುವ ದೂರುಗಳಿವೆ.
