ಶಿವಮೊಗ್ಗದ ಅರಸಾಳು( ಮಾಲ್ಗುಡಿ ನಿಲ್ದಾಣ) ರೈಲು ನಿಲ್ದಾಣದಲ್ಲಿ ಹಳ್ಳಿ ಜನರಿಂದ ಶಂಕರ್ ನಾಗ್ ಹುಟ್ಟು ಹಬ್ಬದಾಚರಣೆ:
ಖ್ಯಾತ ನಟ, ನಿರ್ದೇಶಕ, ಸಿನಿ ತಂತ್ರಜ್ಞ ಹಾಗೂ ನಾಡು ಅಭಿವೃದ್ಧಿ ವಿಷಯದಲ್ಲೂ ತನ್ನದೇ ಕಲ್ಪನೆ ಹೊಂದಿದ್ದ ದಿ.ಶಂಕರ್ ನಾಗ್ ಜನ್ಮದಿನಾಚರಣೆಯನ್ನ ಅರಸಾಳು ಜನರು ಅದ್ಧೂರಿಯಿಂದ ಆಚರಿಸಿದರು. ಶಿವಮೊಗ್ಗ ಜಿಲ್ಲೆ ರಿಪ್ಪನ್ ಪೇಟೆ ಹೋಬಳಿಯಲ್ಲಿನ ಐತಿಹಾಸಿಕ ಅರಸಾಳು ರೈಲ್ವೇ ನಿಲ್ದಾಣವನ್ನ ಕೇಂದ್ರವಾಗಿರಿಸಿ ಅಂದು ಓಡಾಡುತ್ತಿದ್ದ ಮೀಟರ್ ಗೇಜ್ ರೈಲು, ಸುತ್ತಲ ಹಳ್ಳಿ ಸೊಬಗನ್ನ ಮಾಲ್ಗುಡಿ ಡೇಸ್ ( ಕೃತಿಯಾಧಾರಿತ) ಧಾರಾವಾಗಿ ಕಂತುಗಳನ್ನಾಗಿಸಿದ್ದ ಅಪರೂಪದ ನಟನ ನೆನಪಿಗೆ ಈ ರೈಲು ನಿಲ್ದಾಣದಲ್ಲಿ, ಭಾರತೀಯ ರೈಲ್ವೇ ಇಲಾಖೆ ಮಾಲ್ಗುಡಿ ಮ್ಯೂಸಿಯಂ ಮಾಡಿದೆ. ಈ ನಿಲ್ದಾಣ ಮಾಲ್ಗುಡಿ ನಿಲ್ದಾಣವೇ ಆಗಬೇಕು ಎಂಬುದು ಕೂಡ ಇಲ್ಲಿನ ಜನರ ಒತ್ತಾಯವಾಗಿದೆ. ತಾಂತ್ರಿಕ ಕಾರಣದಿಂದ ಸಫಲವಾಗಿಲ್ಲ.