

ಶಾಸಕರು,ಜನಪ್ರತಿನಿಧಿಯಾಗುವುದು ವಿರಳ ಅವಕಾಶ ಅಂಥ ಅವಕಾಶ ಪಡೆಯುವವರು ಅಸಾಮಾನ್ಯರಾಗಿರುವುದು ಸಾಮಾನ್ಯ. ಇಂಥ ವಿಶೇಶ ಶಾಸಕರಲ್ಲಿ ಶಿರಸಿ-ಸಿದ್ಧಾಪುರ ಕ್ಷೇತ್ರದ ಭೀಮಣ್ಣ ನಾಯ್ಕ ಒಬ್ಬರು.

ಭಾವ ಎಸ್ ಬಂಗಾರಪ್ಪನವರ ರಾಜಕೀಯ ಗರಡಿಯಲ್ಲಿ ಬೆಳೆದುಬಂದಿರುವ ಶಾಸಕ ಭೀಮಣ್ಣ ನಾಯ್ಕ ಕಳೆದ ೪೦ ವರ್ಷಗಳಿಂದ ಉತ್ತರ ಕನ್ನಡ ರಾಜಕಾರಣದಲ್ಲಿದ್ದಾರೆ.
ನಾಲ್ಕೈದು ದಶಕಗಳ ರಾಜಕೀಯ ಅನಭವದ ಭೀಮಣ್ಣ ನಾಯ್ಕ ಈ ವಿಧಾನಸಭೆಯನ್ನು ಮೊಟ್ಟಮೊದಲಿಗೆ ಪ್ರವೇಶಿಸಿದ್ದಾರೆ. ವಯಸ್ಸು ೬೦ ದಾಟಿದರೂ ಉತ್ತಮ ದೈಹಿಕ ಸದೃಢತೆ ಕಾಪಾಡಿಕೊಂಡಿರುವ ಭೀಮಣ್ಣ ಉತ್ತರ ಕನ್ನಡ ಜಿಲ್ಲೆಯ ಯಶಸ್ವಿ ಉದ್ಯಮಿ, ಅನೇಕ ಹೋಟೆಲ್ ಗಳು ಸಂಸ್ಥೆಗಳನ್ನು ಹೊಂದಿರುವ ಇವರ ಆಸಕ್ತಿಯ ಕ್ಷೇತ್ರ ಕೃಷಿ. ಜಿಲ್ಲೆಯ ದೊಡ್ಡ ಅಡಿಕೆ ಬೆಲೆಗಾರರಾಗಿರುವ ಬೀಮಣ್ಣ ನಾಯ್ಕ ರಾಜಕೀಯ,ಉದ್ಯಮಗಳ ಜೊತೆಗೆ ಪ್ರತಿದಿನ ತೋಟದ ಕೆಲಸ ನೋಡಿಕೊಳ್ಳುವ ಪ್ರಗತಿಪರ ಕೃಷಿಕ.
ಎಲ್ಲದಕ್ಕೂ ಶಾಸಕರ ಭಾವ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಸ್ಫೂರ್ತಿ ಮತ್ತು ಪ್ರೇರಣೆ ಎನ್ನುವ ಶಾಸಕರು ಶಿರಸಿಯ ಪ್ರತಿಷ್ಠಿತ ಸಂಸ್ಥೆ ಟಿ.ಎಸ್.ಎಸ್.ನ ನಂ೧ ವಿಕ್ರಿದಾರರು ಶಿರಸಿ ಎಂ.ಇ.ಎಸ್. ಶಿವಮೊಗ್ಗ ಶರಾವತಿ ಡೆಂಟಲ್ ಕಾಲೇಜು,ಶಕುಂತಲಾ ಶಿಕ್ಷಣ ಸಂಸ್ಥೆಗಳ ಪ್ರಮುಖರು.
ಕೃಷಿಯಲ್ಲಿ ಮಿಶ್ರಬೇಸಾಯ ಪದ್ಧತಿಯನ್ನು ಅಳವಡಿಸಿಕೊಂಡಿರುವ ಇವರು ನೂರಾರು ಎಕರೆಯಲ್ಲಿ ಅಡಿಕೆ ಬೆಳೆಯುತ್ತಾರೆ. ಎಂಥಾ ಒತ್ತಡದ ನಡುವೆಯೂ ಪ್ರತಿದಿನ ಜಮೀನು ತೋಟಕ್ಕೆ ತಪ್ಪದೆ ಹೋಗುವ ಇವರ ತೋಟದಲ್ಲಿ ಸಾಂಬಾರ ಬೆಳೆಗಳಾದ ವೆನಿಲ್ಲಾ, ಕಾಳುಮೆಣಸು,ವಿಳ್ಯದೆಲೆಗಳು ನಳನಳಿಸುತ್ತವೆ. ಸಾಂಪ್ರದಾಯಿಕ ಕೃಷಿ ಕುಟುಂಬದ ಇವರಿಗೆ ಅಪ್ಪನಿಂದ ಬಂದ ಆಸ್ತಿ ಎಂದರೆ ಕೃಷಿ ಜಮೀನು ಮತ್ತು ಕೃಷಿ ಆಸಕ್ತಿ.
ರಾಜಕೀಯ, ಉದ್ಯಮ ಕ್ಷೇತ್ರದ ಜೊತೆಗೆ ಕೃಷಿಗೆ ವಿಶೇಶ ಸಮಯ ನೀಡುವ ಇವರು ತಮ್ಮ ಅನುಭವದಿಂದ ಕೃಷಿ ತಜ್ಞರಾಗಿ ಹೆಸರುಮಾಡಿದ್ದಾರೆ. ರಾಜ್ಯ ವಿಧಾನಸಭೆಯ ಸದಸ್ಯರಲ್ಲಿ ಕೃಷಿ ಸಾಧನೆ ಮೂಲಕ ಗುರುತಿಸಿಕೊಂಡ ಬೆರಳೆಣಿಕೆಯ ಜನರಲ್ಲಿ ಇವರ ಹೆಸರು ಮೊದಲೆಂದರೆ ಆಶ್ಚರ್ಯವಲ್ಲ.ಕಳೆದ ನಾಲ್ವತ್ತು ವರ್ಷಗಳಿಂದ ರಾಜಕೀಯ, ಉದ್ಯಮ, ಕೃಷಿ ಕ್ಷೇತ್ರಗಳಲ್ಲಿ ಛಾಪು ಮೂಡಿಸಿರುವ ಶಿರಸಿ ಶಾಸಕರು ರೈತ ಪರ ಎನ್ನುವುದೂ ಅವರ ವೈಶಿಷ್ಟ್ಯವೇ.
_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
