


ಸಾಧನಾ ಪ್ರಶಸ್ತಿ ಪಡೆದ ನಿತ್ಯಾ ಹೆಗಡೆ
ಸಿದ್ದಾಪುರ: ಇಲ್ಲಿನ ಹೆಗ್ಗರಣಿ ಶ್ರೀ ಸ್ವಾಮಿ ವಿವೇಕಾನಂದ ಪ್ರೌಢಶಾಲೆಯ 10 ನೇ ತರಗತಿಯ ವಿದ್ಯಾರ್ಥಿನಿ ನಿತ್ಯಾ ಉಮಾಕಾಂತ ಹೆಗಡೆ ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ ನೀಡುವ ರಾಜ್ಯ ಮಟ್ಟದ “ಸಾಧನಾ ಪ್ರಶಸ್ತಿ”ಯನ್ನು ಪಡೆದಿದ್ದಾಳೆ.
ಮಕ್ಕಳ ದಿನಾಚರಣೆಯ ಅಂಗವಾಗಿ ನ.25 ರಂದು ಬಾಗಲಕೋಟೆಯಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ ನೀಡಲಾಗಿದೆ. ಈಕೆ ಪ್ರಾಥಮಿಕ ಶಾಲೆಯ 5ನೇ ತರಗತಿಯಲ್ಲಿದ್ದಾಗ ಝೀ ಕನ್ನಡ ವಾಹಿನಿಯ ಡ್ರಾಮಾ ಜ್ಯೂನಿಯರ್ಸ್ ಶೋನಲ್ಲಿ ಭಾಗವಹಿಸಿ ಜನಮನ ಸೆಳೆದಿದ್ದಳು. ಶಾಲೆಯಲ್ಲಿ ನಡೆಯುವ ಪ್ರತಿಭಾ ಕಾರಂಜಿಯಂತಹ ಅನೇಕ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹಳ ಪ್ರಶಸ್ತಿಗಳನ್ನೂ ಪಡೆದಿದ್ದಾಳೆ. ಪ್ರೌಢಶಾಲೆಯ ಪ್ರತಿಭಾ ಕಾರಂಜಿಯಲ್ಲಿ ಕೋಲಾಟ ಮತ್ತು ಡೊಳ್ಳು ಕುಣಿತದ ಸ್ಪರ್ಧೆಗಳಲ್ಲಿ ಮುಂದಾಳುವಾಗಿ ಕಾಣಿಸಿಕೊಂಡು ತಂಡವನ್ನು ಮುನ್ನಡೆಸಿ ಶಾಲೆಗೆ ಪ್ರಥಮ ಸ್ಥಾನಗಳನ್ನು ದೊರಕಿಸಿಕೊಟ್ಟಿರುತ್ತಾಳೆ. ಈಕೆಯ ಬಹುಮುಖ ಪ್ರತಿಭೆಯನ್ನು ಗುರುತಿಸಿ ರಾಜ್ಯ ಮಟ್ಟದ ಮಕ್ಕಳ ಪ್ರತಿಭಾ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಈಕೆ ಹೆಗ್ಗರಣಿ ಸಮೀಪದ ಹಳೆಹಳ್ಳದ ನಿವಾಸಿ ಉಮಾಕಾಂತ ಮತ್ತು ಆಶಾ ದಂಪತಿಗಳ ಪುತ್ರಿ.

