


ತನ್ನ ಅಭಿನಯದಿಂದ ಜನಮನಗೆದ್ದ ಶಿರಸಿ ತಾಲೂಕಿನ ಬರೂರಿನ ನಾಗರಾಜ್ ನಾಯ್ಕ ವಿಜಯ ಕರ್ನಾಟಕದ ಕಿರು ಚಿತ್ರೋತ್ಸವದಲ್ಲಿ ಅತ್ಯುತ್ತಮ ನಟ ಪ್ರಶಸ್ತಿ ಪಡೆದಿದ್ದಾರೆ. ಬರೂರಿನ ಬಡ ಕುಟುಂಬದ ನಾಗರಾಜ್ ರಂಗಭೂಮಿ, ಧಾರವಾಹಿ ಗಳಲ್ಲಿ ಅಭಿನಯಿಸುತ್ತ ಕೃಷಿ ಮಾಡಿಕೊಂಡಿದ್ದವರು ಕಿರುತೆರೆಯ ಕೆಲವು ಧಾರವಾಹಿಗಳಲ್ಲಿ ನಟಿಸಿರುವ ಇವರು ಒಡ್ಡೋಲಗ ಸೇರಿದಂತೆ ರಾಜ್ಯದ ಅನೇಕ ರಂಗತಂಡಗಳಲ್ಲಿ ಪ್ರಮುಖ ನಟನಾಗಿ ನಟಿಸುತಿದ್ದಾರೆ. ಯುವ ಪ್ರತಿಭೆ ನಾಗರಾಜ್ ಪ್ರತಿಷ್ಠಿತ ವಿ.ಕ. ಕಿರುಚಿತ್ರೋತ್ಸವದಲ್ಲಿ ಉತ್ತಮ ನಟ ಪ್ರಶಸ್ತಿ ಪಡೆದಿರುವುದು ಉತ್ತರ ಕನ್ನಡ ಜಿಲ್ಲೆಯ ಸಾಧನೆಗೆ ಹೊಸ ಗರಿ ಸೇರಿದಂತಾಗಿದೆ.
