ಸಿದ್ದಾಪುರ : ಇಲ್ಲಿಯ ಜಿ.ಟಿ ನಾಯ್ಕ್ ಅಭಿಮಾನಿ ಬಳಗದಿಂದ ದಸರಾ ಉತ್ಸವದ ಪ್ರಯುಕ್ತ ಮಹಿಳೆಯರಿಗೆ ಏರ್ಪಡಿಸಿದ ವಿವಿಧ ಸ್ಪರ್ಧಾ ಕಾರ್ಯಕ್ರಮದಲ್ಲಿನ ವಿಜೇತರಿಗೆ ಡಿ. 3ರಂದು ಬಹುಮಾನ ವಿತರಣೆ ಹಾಗೂ ಜಿಲ್ಲೆಯ ಪ್ರತಿಭಾನ್ವಿತ ಗಾಯಕರುಗಳಿಗೆ ಮಲ್ನಾಡು ಕೋಗಿಲೆ ಸ್ಪರ್ಧೆ ಗಾಯನ ಏರ್ಪಡಿಸಲಾಗಿದೆ ಎಂದು ಅಭಿಮಾನಿ ಬಳಗದವರು ತಿಳಿಸಿದರು.
ಪಟ್ಟಣದಲ್ಲಿ ಸುದ್ದಿಗೋಷ್ಠಿಯನ್ನು ನಡೆಸಿ ಮಾತನಾಡಿದ ವಿಶ್ವ ಗೌಡ ಈ ಕುರಿತು ಮಾಹಿತಿ ನೀಡಿದರು. ಡಿ.3 ರ ರವಿವಾರ ಬೆಳಿಗ್ಗೆ 10.30 ಕ್ಕೆ ಬಾಲ ಭವನ ದಲ್ಲಿ ಬಹುಮಾನ ವಿತರಣೆ ಅದೇ ದಿನ ಸಂಜೆ 6 ಗಂಟೆಗೆ ನೆಹರೂ ಮೈದಾನದಲ್ಲಿ ಮಲ್ನಾಡು ಕೋಗಿಲೆ ಗಾಯನ ಸ್ಪರ್ಧೆ ನಡೆಯಲಿದೆ ಬಹುಮಾನ ವಿತರಣೆ ಕಾರ್ಯಕ್ರಮವನ್ನ ಸ್ಥಳೀಯ ಶಾಸಕ ಭೀಮಣ್ಣ ನಾಯ್ಕ್ ಉದ್ಘಾಟಿಸಲಿದ್ದಾರೆ ತಾಲೂಕಿನ ಪ್ರಮುಖ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದರು.
ಪತ್ರಕರ್ತ ದಿವಾಕರ್ ಸಂಪಖಂಡ ಮಾತನಾಡಿ ದಸರಾ ಸಂದರ್ಭದಲ್ಲಿ ಜಿ .ಟಿ ನಾಯ್ಕ್ ಅಭಿಮಾನಿ ಬಳಗದಿಂದ ತಾಲೂಕಿನ ಹಲವೆಡೆ ಮಹಿಳೆಯರಿಗೆ ರಂಗೋಲಿ ಸ್ಪರ್ಧೆ, ಸೂಜಿದಾರ ಪೋಣಿಸುವುದು, ಹಗ್ಗ ಜಗ್ಗಾಟ, ಸಂಗೀತ ಕುರ್ಚಿ ಮುಂತಾದ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು ಅದರಲ್ಲಿ ವಿಜೇತರಾದವರಿಗೆ ಡಿ 3 ರ ರವಿವಾರ ಬಹುಮಾನವನ್ನ ವಿತರಿಸಲಾಗುವುದು ಹಾಗೆ ಜಿಲ್ಲೆಯ ಪ್ರತಿಭಾನ್ವಿತ ಗಾಯಕರುಗಳಿಗೆ ಸಂಜೆ ನೆಹರೂ ಮೈದಾನದಲ್ಲಿ ಕರೋಕೆ ಗಾಯನ ಸ್ಪರ್ಧೆ ಏರ್ಪಡಿಸಲಾಗಿದೆ. ಅದರಲ್ಲಿ 30 ಜನ ಗಾಯಕರಿಗೆ ಅವಕಾಶವನ್ನು ನೀಡಲಾಗಿದ್ದು ಸುಮಾರು 50ಕ್ಕೂ ಹೆಚ್ಚು ಮಂದಿ ಈಗಾಗಲೇ ಆಯ್ಕೆ ಪ್ರಕ್ರೀಯೆಯಲ್ಲಿ ಭಾಗವಹಿಸಿದ್ದರು ಆಯ್ಕೆಯಾದ 30 ಜನರಿಗೆ ಸ್ಪರ್ಧೆ ನಡೆಯಲಿದೆ ಅದರಲ್ಲಿ ಆಯ್ಕೆಯಾದವರಿಗೆ ಪ್ರಥಮ 5,000, ದ್ವಿತೀಯ 3 ಸಾವಿರ, ತೃತೀಯ 2000 ರೂ ಬಹುಮಾನ ನೀಡಲಾಗುವುದು ಎಂದರು. ಈ ಎಲ್ಲ ಕಾರ್ಯಕ್ರಮಗಳಿಗೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಯಶಸ್ವಿಗೊಳಿಸುವಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಅಭಿಮಾನಿ ಬಳಗದ ಪ್ರಶಾಂತ ಅವರ್ಗುಪ್ಪ, ಜಗದೀಶ್ ಬಳ್ಳಟ್ಟೆ, ಅನಿಲ್ ಕೊಠಾರಿ, ಸುದರ್ಶನ್ ನಾಯ್ಕ್, ಲಕ್ಷ್ಮಣ್ ನಾಯ್ಕ್ ಬೇಡ್ಕಣಿ, ಕೆ ಟಿ ಹೊನ್ನೇ ಗುಂಡಿ ಮುಂತಾದವರು ಉಪಸ್ಥಿತರಿದ್ದರು.