



ಉತ್ತರ ಕನ್ನಡ ಜಿಲ್ಲೆಯ ಮೂರನೇ ಮೆಡಿಕಲ್ ಕಾಲೇಜ್ ಸಿದ್ದಾಪುರದ ಸಿದ್ಧಾಪುರಮೆಡಿಕಲ್ ಇನ್ಸ್ ಟಿಟ್ಯೂಟ್ ಆಫ್ ನ್ಯಾಚುರೋಪತಿ ಯೋಗಿಕ್ ಸೈನ್ಸ್ ಶುಕ್ರವಾರ ಎಸ್.ಪಿ.ಎಸ್. ಎಂಜಿ.ಸಿ. ಕಾಲೇಜ್ ಆವರಣದಲ್ಲಿ ಪ್ರಾರಂಭವಾಯಿತು. ಪ್ರತಿಷ್ಠಿತ ಶಿಕ್ಷಣ ಪ್ರಸಾರಕ ಸಮೀತಿಯ ಸ್ವತಂತ್ರ ಸಂಸ್ಥೆ ಇದಾಗಿದ್ದು ಧನ್ವಂತರಿ ಆಯುರ್ವೇದ ಕಾಲೇಜ್ ಮತ್ತು ಆಸ್ಫತ್ರೆಯ ಜೊತೆಗೆ ಈ ಮೆಡಿಕಲ್ ಕಾಲೇಜ್ ಮತ್ತು ಆಸ್ಫತ್ರೆಗಳು ಇಲ್ಲಿ ಕಾರ್ಯನಿರ್ವಹಿಸಲಿವೆ.

ಈ ಕಾರ್ಯಕ್ರಮದ ಅಂಗವಾಗಿ ಮಾತನಾಡಿದ ಸಂಸ್ಥೆಯ ಉಪಾಧ್ಯಕ್ಷ ಶಶಿಭೂಷಣ ಹೆಗಡೆ ಸಣ್ಣ ತಾಲೂಕಾದ ಸಿದ್ಧಾಪುರದಲ್ಲಿ ತಾಲೂಕಿನ ಎರಡನೇ ವೈದ್ಯಕೀಯ ಕಾಲೇಜ್ ಮತ್ತು ಜಿಲ್ಲೆಯ ಮೂರನೇ ಮೆಡಿಕಲ್ ಕಾಲೇಜ್ ನಮ್ಮ ಆವರಣದಲ್ಲಿರುವುದು ನಮಗೆ ಹೆಮ್ಮೆ ಸ್ಥಳೀಯರು ಕೂಡಾ ಈ ಸಂಸ್ಥೆಗಳ ಪ್ರಯೋಜನ ಪಡೆಯಬೇಕು ಎಂದರು.
ಶುಭಾರಂಭದ ಅಂಗವಾಗಿ ನಡೆದ ಸರಳ ಕಾರ್ಯಕ್ರಮದಲ್ಲಿ ಜಿ.ಕೆ.ಹೆಗಡೆ, ವಿನಾಯಕ ರಾವ್ ಹೆಗಡೆ, ಡಾ. ರೂಪಾಭಟ್ ಉಪಸ್ಥಿತರಿದ್ದರು. ಸೌಜನ್ಯ ಹೆಗಡೆ ಪ್ರಾರ್ಥಿಸಿದರು. ಪ್ರೋ. ರಾಘವೇಂದ್ರ ಎಲ್.ಸ್ವಾಗತಿಸಿದರು.ಡಾ.ಕವಿತಾ ಭಾದ್ರಿ ವಂದಿಸಿದರು.
