


ಸಿದ್ದಾಪುರ
ಸಿದ್ದಾಪುರ ಸ್ಪೋರ್ಟ್ಸ ಅಕಾಡೆಮಿ ಹಾಗೂ ಭಟ್ ಚೆಸ್ ಸ್ಕೂಲ್ ಸಹಯೋಗದಲ್ಲಿ ದಿ|ಶಂಕರಶೇಟ್ ಸ್ಮರಣಾರ್ಥ ೨ನೇ ವರ್ಷದ ಚೆಸ್ ಪಂದ್ಯಾವಳಿಯನ್ನು ಪಟ್ಟಣದ ರಾಘವೇಂದ್ರ ಮಠದ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.
೧೬ ವರ್ಷದ ಒಳಗಿನ ಮಕ್ಕಳಿಗೆ ಆಯೋಜಿಸಲಾಗಿದ್ದ ಈ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಆಯ್.ನಾಯ್ಕ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿ ಮನುಷ್ಯನ ಜೀವನದಲ್ಲಿ ಮಹತ್ವದ ಪಾತ್ರ ವಹಿಸುವ ಕ್ರೀಡೆಗಳು ಉತ್ತಮ ವ್ಯಕ್ತಿತ್ವ ನಿರ‍್ಮಾಣಕ್ಕೆ ಸಹಕಾರಿ. ಅದರಲ್ಲೂ ಚೆಸ್ ಕ್ರೀಡೆ ಬುದ್ದಿಯನ್ನು ಪ್ರಖರಗೊಳಿಸುವ ಉನ್ನತಮಟ್ಟದ ಕ್ರೀಡೆ. ಮಕ್ಕಳನ್ನು ಬುದ್ದಿಶಾಲಿಯಾಗಿಸುವ ಈ ಕ್ರೀಡೆಯಲ್ಲಿ ಆಸಕ್ತಿ ಹುಟ್ಟಿಸಲು ಪಾಲಕರು ಮುಂದಾಗಬೇಕು ಎಂದರು.
ಮುಖ್ಯ ಅತಿಥಿ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಗಂಗಾಧರ ಕೊಳಗಿ ಮಾತನಾಡಿ ಬುದ್ದಿಶಕ್ತಿಯನ್ನು ಹೆಚ್ಚಿಸುವ ಜೊತೆಗೆ ಬದುಕಿನಲ್ಲಿ ಎದುರಾಗುವ ಸವಾಲುಗಳನ್ನು ಎದುರಿಸುವ ನೈಪುಣ್ಯ, ಚಾಕಚಕ್ಯತೆಯನ್ನು ಚೆಸ್ ಕ್ರೀಡೆ ಒದಗಿಸುತ್ತದೆ. ಈ ತಾಲೂಕಿನಲ್ಲಿ ಇಂಥ ಕ್ರೀಡೆಗಳಿಗೆ ತರಬೇತಿ ಮತ್ತು ಅವಕಾಶವನ್ನು ನೀಡುತ್ತಿರುವ ಸ್ಥಳೀಯ ಸ್ಪೋರ್ಟ್ಸ ಅಕಾಡೆಮಿಯ ಕಾರ್ಯ ಶಾಘ್ಲನೀಯ ಎಂದರು.
ಮುಖ್ಯ ಅತಿಥಿ ಅಂತಾರಾಷ್ಟಿçಯ ಚೆಸ್ ತರಬೇತುದಾರ ರಾಮಚಂದ್ರ ಭಟ್ ಮಾತನಾಡಿ ಇಲ್ಲಿನ ಪಂದ್ಯಾವಳಿ ಸ್ವಿಸ್ ಲೀಗ್ ಅಂತಾರಾಷ್ಟಿçಯ ಮಾದರಿಯಲ್ಲಿ ನಡೆಯುತ್ತಿದ್ದು ಪ್ರತಿಯೊಬ್ಬರೂ ೬ ಸುತ್ತು ಆಡಬೇಕಾಗುತ್ತದೆ. ಉತ್ತರಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಗಳ ೯೨ಕ್ಕೂ ಹೆಚ್ಚು ಮಕ್ಕಳು ಭಾಗವಹಿಸುತ್ತಿದ್ದು ಎಲ್ಲ ಮಕ್ಕಳಿಗೂ ತಮ್ಮ ಪ್ರತಿಭೆವ್ಯಕ್ತಗೊಳಿಸಲು ಅವಕಾಶವಿದೆ ಎಂದರು.
ಮತ್ತೊರ್ವ ಮುಖ್ಯ ಅತಿಥಿ ಅಕಾಡೆಮಿಯ ನಿರ್ದೇಶಕ ರವಿ ಪಾಟೀಲ್ ಇದೊಂದು ಉತ್ತಮ ಅವಕಾಶವಾಗಿದ್ದು ಪಂದ್ಯದಲ್ಲಿನ ಸೋಲು,ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸಿ ಎಂದರು.
ಸ್ಪೋರ್ಟ್ಸ ಅಕಾಡೆಮಿಯ ಅಧ್ಯಕ್ಷ ವಿನಾಯಕ ಶೇಟ್ ಅಧ್ಯಕ್ಷತೆವಹಿಸಿ ಮಾತನಾಡಿ ಅಕಾಡೆಮಿಯ ಚಟುವಟಿಕೆಗಳ ಕುರಿತು ವಿವರಿಸಿದರು.
ಲಲಿತಾ ಶಂಕರ ಶೇಟ್, ಸ್ಪೋರ್ಟ್ಸ ಅಕಾಡೆಮಿಯ ಖಜಾಂಚಿ ಸುದರ್ಶನ ಪಿಳ್ಳೆ, ಸಹ ಕಾರ್ಯದರ್ಶಿ ಮಂಜು ಕುರುಬರ ನಿದೇರ್ಶಕರಾದ ಮಹೇಶ ಭಟ್, ,ಆನಂದ ಶೇಟ್ ಉಪಸ್ಥಿತರಿದ್ದರು.
ಸ್ಪೂರ್ತಿ ಸಂಗಡಿಗರು ಸ್ವಾಗತಗೀತೆ ಹಾಡಿದರು.ಅಕಾಡೆಮಿಯ ನಿರ್ದೇಶಕ ಪ್ರಶಾಂತ ಶೇಟ್ ಸ್ವಾಗತಿಸಿದರು. ನಿರ್ದೇಶಕ ಡಾ|ನಂದಕುಮಾರ ಪೈ ವಂದಿಸಿದರು. ಕಾರ್ಯದರ್ಶಿ ನಂದನ ಬೋರ‍್ಕರ ನಿರೂಪಿಸಿದರು.
