


ಕೆ.ಇ.ಬಿ.ಯ ನಿವೃತ್ತ ನೌಕರರಾಗಿದ್ದ ನಾರಾಯಣ ಕನ್ನ ನಾಯ್ಕ ಕತ್ತಿ ಜೂರಿಮನೆ (೭೪) ಸೋಮವಾರ ನಿಧನರಾದರು. ಕೋಲಶಿರ್ಸಿ ಮೂಲದವರಾಗಿದ್ದ ನಾಯ್ಕ ಅವರಗುಪ್ಪಾದಲ್ಲಿ ವಾಸವಾಗಿದ್ದರು. ಮೃತರು ಮೂವರು ಪುತ್ರರು ಮತ್ತು ಓರ್ವ ಪುತ್ರಿ ಸೇರಿದ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ನಾರಾಯಣ ನಾಯ್ಕಮೂವತ್ತು ವರ್ಷಗಳ ವರೆಗೆ ಗ್ರಾಮೀಣ ಪ್ರದೇಶದಲ್ಲಿ ಸೇವೆ ಸಲ್ಲಿಸಿದ್ದಲ್ಲದೆ ಸ್ಥಳೀಯ ನಾಮಧಾರಿ ಅಭಿವೃದ್ಧಿ ಸಂಘ ಮತ್ತು ತರಳಿ ಮಠಗಳಲ್ಲಿ ಸಕ್ರೀಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು.
ಅಲ್ಪಕಾಲಿಕ ಅನಾರೋಗ್ಯದಿಂದ ಚಿಕಿತ್ಸೆ ಪಡೆಯುತಿದ್ದ ನಾರಾಯಣ ನಾಯ್ಕ ಡಿ.೪ ರ ಸೋಮುವಾರ ಮುಂಜಾನೆ ವೇಳೆ ನಿಧನರಾಗಿದ್ದರು. ಸೋಮುವಾರ ಮಧ್ಯಾಹ್ನದ ವೇಳೆ ಅವರ ಅಂತ್ಯಕ್ರೀಯೆ ಅವರಗುಪ್ಪದಲ್ಲಿ ನಡೆಯಿತು.
