

ಸಿದ್ಧಾಪುರದಲ್ಲಿ ಇಂದು ಮೂರು ಪ್ರತ್ಯೇಕ ಅಪಘಾತ ಪ್ರಕರಣಗಳು ನಡೆದಿದ್ದು ಒಂದು ಪ್ರಕರಣದಲ್ಲಿ ವ್ಯಕ್ತಿಯೊಬ್ಬ ಮಾರಣಾಂತಿಕವಾಗಿ ಗಾಯಗೊಂಡು ಮೃತಪಟ್ಟಿದ್ದಾನೆ.
ಇಂದು ಬೆಳಿಗ್ಗೆ ಕೋಲಶಿರ್ಸಿ ಬಳಿಯ ಉಪ್ಪುಡಿಕೆ ಕ್ರಾಸ್ ಬಳಿ ನಡೆದ ಬೈಕ್ ಸ್ಕಿಡ್ ಪ್ರಕರಣದಲ್ಲಿ ಚಿನ್ಮಯ ಗೌಡ ತೀವೃವಾಗಿ ಗಾಯಗೊಂಡು ಶಿವಮೊಗ್ಗ ಆಸ್ಫತ್ರೆ ಸೇರಿದ್ದಾನೆ. ಕೊಡ್ಗಿಬೈಲಿನ ಚಿನ್ಮಯ ಗೌಡ ಚಲಾಯಿಸುತಿದ್ದ ಪಲ್ಸರ್ ಬೈಕ್ ಸ್ಕಿಡ್ ಆಗಿ ಈ ಅಪಘಾತ ಸಂಭವಿಸಿತ್ತು.
ಸಿದ್ಧಾಪುರ ಮಳವತ್ತಿ ಗೇಟ್ ಬಳಿ ನಡೆದ ಪಲ್ಸರ್ ಬೈಕ್ ಸ್ಕಿಡ್ ಅಪಘಾತದಲ್ಲಿ ಪ್ರಕಾಶ್ ಪುಟ್ಟಪ್ಪ ನರೇರ್ ಮೃತಪಟ್ಟಿದ್ದಾರೆ. ಮಧ್ಯಾಹ್ನದ ವೇಳೆ ಊಟ ತರಲು ತೆರಳಿದ್ದ ತರಕಾರಿ ವ್ಯಾಪಾರಿ ಪ್ರಕಾಶ್ ಬೈಕ್ ಸ್ಕಿಡ್ ಆದ ಪರಿಣಾಮ ತಲೆಗೆ ತೀವೃತರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಮೃತ ನಗರದ ರವೀಂದ್ರ ನಗರದ ನಿವಾಸಿಯಾಗಿದ್ದ.

ಸಿದ್ಧಾಪುರ ಹೊಸೂರು ಬಳಿ ನಡೆದ ಇನ್ನೊಂದು ಪ್ರಕರಣದಲ್ಲಿ ಬೈಕ್ ಸವಾರರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಅಪಾಯದಿಂದ ಪಾರಾಗಿದ್ದಾರೆ.
