

ಸಿದ್ದಾಪುರ
ತಾಲೂಕಿನ ಕಿಬ್ಬಳ್ಳಿಯ ಮಹಾಗಣಪತಿ ಶಿಕ್ಷಣ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆ,ಮಹಾಗಣಪತಿ ಪ್ರೌಢಶಾಲೆ ಮತ್ತು ಹಳೆ ವಿದ್ಯಾರ್ಥಿಗಳ ಸಂಘ ಕಿಬ್ಬಳ್ಳಿ ಇವುಗಳ ಆಶ್ರಯದಲ್ಲಿ ಡಿ.೧೩ರಂದು ಬೆಳಗ್ಗೆ ೧೦ರಿಂದ ಸುವರ್ಣ ಸಂಭ್ರಮ ಕಾರ್ಯಕ್ರಮ ನಡೆಯಲಿದೆ ಎಂದು ಸಂಸ್ಥೆಯ ಅಧ್ಯಕ್ಷ ನಾಗಪತಿ ಭಟ್ಟ ಮಿಳಗಾರ ಹೇಳಿದರು.

ಪ್ರೌಢಶಾಲೆಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ೧೯೭೦ರಲ್ಲಿ ಕಿಬ್ಬಳ್ಳಿಯಲ್ಲಿ ಶಾಖಾ ಶಾಲೆಯಾಗಿ ಆರಂಭಗೊಂಡಿತು. ಗ್ರಾಮೀಣ ಭಾಗದ ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಸ್ಥಾಪಿತವಾದ ಈ ಪ್ರೌಢಶಾಲೆಯು ಪ್ರಾರಂಭದಿಂದ ಇಂದಿನವರೆಗೂ ಸಂಸ್ಕಾರಯುತ, ಗುಣಾತ್ಮಕ ಶಿಕ್ಷಣದೊಂದಿಗೆ ಮುನ್ನಡೆಯುತ್ತ ಬಂದಿದೆ. ೧೯೭೨ರಲ್ಲಿ ಸ್ವರ್ಣವಲ್ಲಿಯ ಶ್ರೀ ವರ್ಸಜ್ಞೇಂದ್ರ ಮಹಾಸ್ವಾಮಿಗಳ ಅಮೃತ ಹಸ್ತದಿಂದ ಶಾಲಾ ಕಟ್ಟಡ ಉದ್ಘಾಟನೆಗೊಂಡು ಅಕ್ಷರ ಬೀಜವನ್ನು ಬಿತ್ತುವ ಕೈಂಕರ್ಯ ಕಗೊಂಡು ಇಲ್ಲಿಯವರೆಗೆ ಸುಮಾರು ಮೂರು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಿಕ್ಷಣ ಪಡೆದುಕೊಂಡಿದ್ದಾರೆ.
ಉದ್ಘಾಟನೆ: ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರ ಘನ ಉಪಸ್ಥಿತಿಯಲ್ಲಿ ಸುವರ್ಣ ಸಂಭ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ಎಸ್.ವೈದ್ಯ ಉದ್ಘಾಟಿಸುವರು. ಶಾಸಕ ಭೀಮಣ್ಣ ನಾಯ್ಕ ಅಧ್ಯಕ್ಷತೆವಹಿಸುವರು. ಸಂಸದ ಅನಂತಕುಮಾರ ಹೆಗಡೆ, ಶಾಸಕರಾದ ಆರ್.ವಿ.ದೇಶಪಾಂಡೆ, ಎಸ್.ವಿ.ಸಂಕನೂರು, ಶಿವರಾಮ ಹೆಬ್ಬಾರ, ಶಾಂತಾರಾಮ ಸಿದ್ದಿ, ಗಣಪತಿ ಉಳ್ವೇಕರ, ಗ್ರಾಪಂ ಅಧ್ಯಕ್ಷ ಯಂಕಾ ಹುಲಿಯಾ ಗೌಡ, ಸದಸ್ಯೆ ವೇದಾವತಿ ಶೇಟ್, ಸಂಸ್ಥೆ ಅಧ್ಯಕ್ಷ ಎನ್.ಎನ್.ಭಟ್ಟ ಮಿಳಗಾರ, ಟಿಎಸ್‌ಎಸ್ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ, ಟಿಎಂಎಸ್ ಅಧ್ಯಕ್ಷ ಆರ್.ಎಂ.ಹೆಗಡೆ ಬಾಳೇಸರ, ಶಿರಸಿ ಶೈಕ್ಷಣಿಕ ಜಿಲ್ಲಾ ಉಪನಿರ್ದೇಶಕ ಪಿ.ಬಸವರಾಜ, ಬಿಇಒ ಜಿ.ಐ.ನಾಯ್ಕ ಉಪಸ್ಥಿತರಿರುತ್ತಾರೆ.
ಇದೇ ಸಂದರ್ಭದಲ್ಲಿ ಪ್ರೌಢಶಾಲೆಯ ಸಾಧನಾ ಪಥದ ವಾಚನ, ಸಂಸ್ಥಾಪಕ ಸದಸ್ಯರ ಪೋಟೋ ಅನಾವರಣ ಹಾಗೂ ಸುವರ್ಣ ದೀಪ ಸ್ಮರಣ ಸಂಚಿಕೆ ಲೋಕಾರ್ಪಣೆಗೊಳ್ಳಲಿದೆ.
ಸಮಾರೋಪ: ಸಂಜೆ ೫ಕ್ಕೆ ನಡೆಯಲಿರುವ ಸಮಾರೋಪ ಸಮಾರಂಭದ ದಿವ್ಯ ಸಾನ್ನಿಧ್ಯವನ್ನು ಸ್ವರ್ಣವಲ್ಲಿ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ನಹಾಗೂ ಶ್ರೀಮನ್ನೆಲೆಮಾವು ಮಠದ ಶ್ರೀ ಮಾಧವಾನಂದ ಭಾರತೀ ಸ್ವಾಮಿಗಳು ದಿವ್ಯ ಸಾನ್ನಿಧ್ಯವಹಿಸಲಿದ್ದಾರೆ.
ಮಾಜಿ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಡಾ.ಎಚ್.ಕೆ.ನಾಗರಾಜ ಬೆಂಗಳೂರು, ಎಸ್.ಎಸ್.ಭಟ್ಟ ಮಸಗುತ್ತಿ, ಮಹಾಬಲೇಶ್ವರ ಆರ್.ಹೆಗಡೆ ಗೋವಾ(ಹೆಗ್ನೂರು), ಡಾ.ಶಶಿಭೂಷಣ ಹೆಗಡೆ ದೊಡ್ಮನೆ ಉಪಸ್ಥಿತರಿರುತ್ತಾರೆ.
ಇದೇ ಸಂದರ್ಭದಲ್ಲಿ ಸಂಸ್ಥಾಪಕ ಸದಸ್ಯರಿಗೆ ಸನ್ಮಾನ, ನಿವೃತ್ತ, ಕಾರ್ಯನಿರತ ಹಾಗೂ ಬೋಧಕೇತರ ಸಿಬ್ಬಂದಿಗಳಿಗೆ ಮತ್ತು ಈವರೆಗೆ ಅತಿಥಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ ಶಿಕ್ಷಕರುಗಳಿಗೆ ಗೌರವ ಸಮರ್ಪಣೆ ನಡೆಯಲಿದೆ.ರಾತ್ರಿ ೯ರಿಂದ ಚಿಂತನ ಹೆಗಡೆ ಮಾಳ್ಕೋಡ ರ ಸಾರಥ್ಯದಲ್ಲಿ ಯಕ್ಷ-ಗಾನ-ನಾಟ್ಯ ವೈಭವ ನಡೆಯಲಿದೆ ಎಂದು ಹೇಳಿದರು.
ಪ್ರಧಾನ ಕಾರ್ಯದರ್ಶಿ ಜಿ.ಎಂ.ಹೆಗಡೆ ಹೆಗ್ನೂರು, ಸದಸ್ಯರಾದ ಎಂ.ಜಿ.ಹೆಗಡೆ ಗೆಜ್ಜೆ ಕಿಬ್ಬಳ್ಳಿ, ನಿವೃತ್ತ ಮುಖ್ಯಾಧ್ಯಾಪಕ ಎಸ್.ಕೆ.ಹೆಗಡೆ, ಜಿ.ಆರ್.ಭಟ್ಟ, ಮುಖ್ಯಾಧ್ಯಾಪಕಿ ಅನಿತಾ ಬಿ.ಸಿರ್ಸಿಕರ್, ಶಂಕರನಾರಾಯಣ ಹೆಗಡೆ, ಕೆ.ಟಿ.ನಾಯ್ಕ, ನಾಗಪತಿ ಹೆಗಡೆ ಹರ್ತೆಬೈಲ್, ಶ್ರೀಧರ ಹೆಗಡೆ ಇತರರಿದ್ದರು.
