

ಕೋಲಶಿರ್ಸಿ ಮೂಲದ ಗಣಪತಿ ಕನ್ನಾ ನಾಯ್ಕ ಕತ್ತಿ ಇಂದು ನಿಧನರಾಗಿದ್ದಾರೆ. ಜೂರಿಮನೆ ವಾಸಿಯಾಗಿದ್ದ ಗಣಪತಿ ನಾಯ್ಕ ಕಳೆದ ಕೆಲವು ವರ್ಷಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದರು. ತನ್ನ ೭೦ ನೇ ವಯಸ್ಸಿನ ವರೆಗೂ ರೈತ ಸಂಘದ ಸಕ್ರೀಯ ಸದಸ್ಯರಾಗಿದ್ದ ಗಣಪತಿ ನಾಯ್ಕ ಅವಿಭಕ್ತ ಕುಟುಂಬದ ಪ್ರಮುಖರಾಗಿ ಪ್ರಮುಖ ಕೃಷಿಕರಾಗಿ ಜನಾನುರಾಗಿಯಾಗಿದ್ದರು. ೮೦ ವರ್ಷದ ಜೂರಿಮನೆ ಗಣಪತಿ ನಾಯ್ಕ ಮೂವರು ಪುತ್ರರು, ಓರ್ವ ಪುತ್ರಿ ಸೇರಿದ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.


