ಮಿನುಗುತ್ತಿರುವ ಕ್ರಿಕೆಟ್‌ ತಾರೆಯರು!

ಶುಭಾ ಸತೀಶ್, ವೃಂದಾ ದಿನೇಶ್: ಜಾಗತಿಕ ಮಟ್ಟದಲ್ಲಿ ಸುದ್ದಿಯಾಗುತ್ತಿರುವ ಕರ್ನಾಟಕದ ಉದಯೋನ್ಮುಖ ಕ್ರಿಕೆಟಿಗರು

ಕರ್ನಾಟಕ ಮೂಲದ ಶುಭಾ ಸತೀಶ್ ಅವರು ಇದೀಗ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಆಯ್ಕೆಯಾಗಿದ್ದು, ಮೊದಲ ಪಂದ್ಯದಲ್ಲೇ ತಮ್ಮ ಸಾಮರ್ಥ್ಯ ಪ್ರದರ್ಶಿಸಿದ್ದಾರೆ. ಮೂಲತಃ ಮೈಸೂರಿನ ಮೂಲದವರಾದ ಶುಭಾ ಮೈಸೂರಿನಲ್ಲಿ ತನಗೆ ಸಾಧ್ಯವಾಗುವ ಪ್ರತಿಯೊಂದು ಕ್ರೀಡೆಯನ್ನು ಆಡುತ್ತಿದ್ದರು, ಆದರೆ ಕ್ರಿಕೆಟ್ ಮೇಲೆ ಅವರ ಪ್ರೀತಿ ಹೆಚ್ಚು. 

Shubha Satheesh-Vrinda Dinesh

ಕರ್ನಾಟಕ ಮೂಲದ ಶುಭಾ ಸತೀಶ್ ಅವರು ಇದೀಗ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಆಯ್ಕೆಯಾಗಿದ್ದು, ಮೊದಲ ಪಂದ್ಯದಲ್ಲೇ ತಮ್ಮ ಸಾಮರ್ಥ್ಯ ಪ್ರದರ್ಶಿಸಿದ್ದಾರೆ. ಮೂಲತಃ ಮೈಸೂರಿನ ಮೂಲದವರಾದ ಶುಭಾ ಮೈಸೂರಿನಲ್ಲಿ ತನಗೆ ಸಾಧ್ಯವಾಗುವ ಪ್ರತಿಯೊಂದು ಕ್ರೀಡೆಯನ್ನು ಆಡುತ್ತಿದ್ದರು, ಆದರೆ ಕ್ರಿಕೆಟ್ ಮೇಲೆ ಅವರ ಪ್ರೀತಿ ಹೆಚ್ಚು. 

ಭಾರತ ತಂಡಕ್ಕೆ ಆಯ್ಕೆಯಾಗಿರುವ ಕುರಿತು ಮಾತನಾಡಿರುವ ಶುಭಾ ಸತೀಶ್, “ಆ ಸಮಯದಲ್ಲಿ ನಾನು ಕ್ರಿಕೆಟಿಗಳಾಗುತ್ತೇನೆ ಎಂದು ಯೋಚಿಸಿರಲಿಲ್ಲ. ಆದರೆ ಕ್ರಿಕೆಟ್ ಮೇಲಿನ ಪ್ರೀತಿ ನನ್ನನ್ನು ಇಲ್ಲಿಯವರೆಗೂ ತಂದು ನಿಲ್ಲಿಸಿದೆ ಎಂದು ಹೇಳಿದರು.

ಮೈಸೂರಿನ ಬಾಲೌಟ್ ಕ್ರಿಕೆಟ್ ಅಕಾಡೆಮಿಯ ಕೋಚ್ ರಜತ್ ಅವರು ಶುಭಾ ಅವರ ಬಗ್ಗೆ ಮಾತನಾಡಿದ್ದು, “ಇದು ನಮಗೆ ನಿಜವಾಗಿಯೂ ವಿಶೇಷ ಕ್ಷಣವಾಗಿದೆ” ಎಂದು ತಮ್ಮ ಸಂತಸ ಹಂಚಿಕೊಂಡಿದ್ದಾರೆ. ಶುಭಾ ತುಂಬಾ ಸಮರ್ಪಿತ ಆಟಗಾರ್ತಿ. ಈ ಮಟ್ಟಕ್ಕೇರಲು ಹೋಗಲು ಸಾಕಷ್ಟು ಕಷ್ಟಪಟ್ಟಿದ್ದಾಳೆ. ಕಳೆದ ಎರಡು ವರ್ಷಗಳಿಂದ ಈ ಕ್ಷಣಕ್ಕಾಗಿ ಕಾಯುತ್ತಿದ್ದಳು. ಎರಡು ವರ್ಷಗಳ ಹಿಂದೆ, ಅವರು ಕರ್ನಾಟಕಕ್ಕಾಗಿ ಹೆಚ್ಚು ರನ್ ಗಳಿಸಿದರು ಮತ್ತು ಏಕದಿನ ಸರಣಿಗೆ ಆಯ್ಕೆಯಾದರು. ಇದಕ್ಕೂ ಮೊದಲು ದೇಶೀಯ ಲೀಗ್ ಹಂತದಲ್ಲಿ, ಅವಳು ತನ್ನ ಬೆರಳನ್ನು ಮುರಿದುಕೊಂಡು 6 ತಿಂಗಳು ವಿಶ್ರಾಂತಿಯಲ್ಲಿದ್ದಳು. ಬಳಿಕ ಭರ್ಜರಿ ಕಮ್ ಬ್ಯಾಕ್ ಮಾಡಿ ಇದೀಗ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿದ್ದಾಳೆ ಎಂದು ಖುಷಿಯಿಂದ ಹೇಳಿದ್ದಾರೆ.

ವೃಂದಾ-ಶುಭ ಸ್ನೇಹ
ಈ ವರ್ಷದ ಫೆಬ್ರವರಿಯಲ್ಲಿ ಮೊದಲ ಮಹಿಳಾ ಪ್ರೀಮಿಯರ್ ಲೀಗ್ ಹರಾಜಿನ ಸಮಯದಲ್ಲಿ, ವೃಂದಾ ದಿನೇಶ್ ದಕ್ಷಿಣ ವಲಯಕ್ಕಾಗಿ ಏಕದಿನ ಪಂದ್ಯಗಳನ್ನು ಆಡುತ್ತಿದ್ದರು. ಮತ್ತೊಂದೆಡೆ, ಶುಭಾ ಸತೀಶ್ ಗಾಯಗೊಂಡು ಮನೆಗೆ ಮರಳಿದ್ದರು. ಆದರೆ ಈ ಒಂಬತ್ತು ತಿಂಗಳ ನಂತರ, ವೃಂದಾ ದಿನೇಶ್ ಮಹಿಳಾ ಪ್ರೀಮಿಯರ್ ಲೀಗ್‌ನ ಇತಿಹಾಸದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಅನ್‌ಕ್ಯಾಪ್ಡ್ ಆಟಗಾರರಲ್ಲಿ ಒಬ್ಬರಾಗಿದ್ದಾರೆ, ಆದರೆ ಶುಭ ಸತೀಶ್ ಇಂಗ್ಲೆಂಡ್ ವಿರುದ್ಧ ನವಿ ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ಟೆಸ್ಟ್ ಪಾದಾರ್ಪಣೆ ಮಾಡಿದ್ದಾರೆ. ಈ ಹಿಂದೆ ಇದೇ ಸ್ಥಳದಲ್ಲಿ ಅಂದರೆ ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ಮೊದಲ ಡಬ್ಲ್ಯುಪಿಎಲ್ ಪಂದ್ಯ ನಡೆದಿತ್ತು. ಇದೀಗ ಇದೇ ಕ್ರೀಡಾಂಗಣದಲ್ಲಿ ಶುಭಾ ಸತೀಶ್ ಇಂಗ್ಲೆಂಡ್ ವಿರುದ್ಧ ತಮ್ಮ ಚೊಚ್ಚಲ ಟೆಸ್ಟ್ ಪಂದ್ಯವನ್ನಾಡುತ್ತಿದ್ದಾರೆ. 

ಈ ಬಗ್ಗೆ ಮಾತನಾಡಿರುವ ವೃಂದಾ ದಿನೇಶ್, “ನಾನು ಶುಭಾ ಅವರನ್ನು ಮೊದಲ ಬಾರಿಗೆ 2014 ರಲ್ಲಿ ಭೇಟಿಯಾದೆ, ಅವರು ಈಗಾಗಲೇ ಕರ್ನಾಟಕದ U19 ರಾಜ್ಯ ತಂಡದ ಭಾಗವಾಗಿದ್ದರು.

“ಅವಳು ನಾವೆಲ್ಲರೂ ನೋಡುತ್ತಿದ್ದ ಬ್ಯಾಟರ್ ಆಗಿದ್ದಳು. ಏಕೆಂದರೆ ಅವಳು ಯಾವಾಗಲೂ ರನ್ ಗಳಿಸುತ್ತಿದ್ದಳು. ಕಳೆದ 3-4 ವರ್ಷಗಳಿಂದ ನಾವು ನಿಕಟ ಸ್ನೇಹಿತರಾಗಿದ್ದೇವೆ. ನಾನು ಜನವರಿಯಲ್ಲಿ ಹಿರಿಯರ ತಂಡಕ್ಕಾಗಿ ಆಡಲು ಪ್ರಾರಂಭಿಸಿದಾಗ, ಅವಳು ನನಗೆ ಮಾರ್ಗದರ್ಶನ ನೀಡಿದ್ದಳು. ಬರೋಡಾ ವಿರುದ್ಧದ ಹಿರಿಯ ಏಕದಿನ ಪಂದ್ಯಗಳನ್ನು ಆಡುವಾಗ, ಶುಭಾ ಮತ್ತು ನಾನು 150 ರನ್‌ಗಳ ಜೊತೆಯಾಟವನ್ನು ಹೊಂದಿದ್ದೆವು. ಶುಭಾ 76 ರನ್ ಗಳಿಸಿದರೆ, ನಾನು 91 ರನ್ ಗಳಿಸಿದ್ದೆ. ಇದು ನಮ್ಮಿಬ್ಬರ ಅತ್ಯುತ್ತಮ ಮತ್ತು ಗರಿಷ್ಠ ರನ್ ಗಳ ಜೊತೆಯಾಟವಾಗಿದೆ ಎಂದು ನಾನು ಭಾವಿಸುತ್ತೇನೆ ಎಂದು ವೃಂದಾ ನೆನಪಿಸಿಕೊಳ್ಳುತ್ತಾರೆ.

ಕೇವಲ ಆನ್ ಫೀಲ್ಡ್ ನಲ್ಲಷ್ಟೇ ಅಲ್ಲ.. ನಮ್ಮ ಸ್ನೇಹ ಮೈದಾನದ ಆಚೆಗೂ ಇದ್ದು ನಾವು ಪರಸ್ಪರ ಸುತ್ತಾಡಲು ಇಷ್ಟಪಡುತ್ತೇವೆ. ಶುಭಾಳದ್ದು ಹೆಚ್ಚು ಮಾತನಾಡದ ಸ್ವಭಾವ. ಆದರೆ ನನ್ನೊಂದಿಗೆ ಸಾಮಾನ್ಯವಾಗಿರುತ್ತಾಳೆ. ನಾವಿಬ್ಬರೂ ಪರಸ್ಪರ ಜೋಕ್ಸ್ ಮಾಡುತ್ತೇವೆ ಎಂದು ವೃಂದಾ ಹೇಳಿದ್ದಾರೆ. ಇದೇ ವೇಳೆ ಶುಭಾ ಆಟವನ್ನು ಶ್ಲಾಘಿಸಿರುವ ವೃಂದಾ ಇಂಗ್ಲೆಂಡ್ ವಿರುದ್ಧದ ಸರಣಿಗೆ ಶುಭಾ ಆಯ್ಕೆಯಾಗಿರುವುದು ನನಗೆ ಅಚ್ಚರಿ ತಂದಿಲ್ಲ. ಶುಭಾ ಮೈದಾನದಲ್ಲಿ ತನ್ನ ನೈಜ ಆಟ ಆಡುತ್ತಾಳೆ. ಪ್ರತೀ ಎಸೆತವನ್ನು ಆತ್ಮವಿಶ್ವಾಸದಿಂದ ಎದುರಿಸುತ್ತಾಳೆ. ಆಕೆಯ ಆತ್ಮವಿಶ್ವಾಸ ಎಷ್ಟಿರುತ್ತದೆ ಎಂದರೆ ಸಾಕಷ್ಚು ಪಂದ್ಯಗಳಲ್ಲಿ ಆಕೆ ತಾನು ಎದುರಿಸುವ ಮೊದಲ ಎಸೆತವನ್ನೇ ಬೌಂಡರಿಗೆ ಅಟ್ಟುತ್ತಾಳೆ. ಇಂತಹ ಸಾಕಷ್ಟು ಉದಾಹರಣೆಗಳನ್ನು ನಾವು ನೋಡಿದ್ದೇವೆ. ಈ ಬಗ್ಗೆ ಆಕೆಯನ್ನು ಕೇಳಿದ್ದೇವೆ ಕೂಡ. ಆಕೆಗೆ ತಿಳಿದಿತ್ತು. ಈ ದಿನ ಬಂದೇ ಬರುತ್ತದೆ ಎಂದು.. ಏಕೆಂದರೆ ಆಕೆಯ ಆತ್ಮವಿಶ್ವಾಸ ಅಷ್ಟಿದೆ. ಭಾರತ ತಂಡಕ್ಕೆ ಆಡುವುದು ಎಲ್ಲ ಆಟಗಾರರ ದೊಡ್ಡ ಕನಸಾಗಿರುತ್ತದೆ. ಅದನ್ನು ಶುಭಾ ನನಸು ಮಾಡಿಕೊಂಡಿದ್ದಾಳೆ. ಇದಕ್ಕೆ ನನಗೆ ಖುಷಿ ಇದೆ ಎಂದು ವೃಂದಾ ಹೇಳಿದ್ದಾರೆ. 

ಇದು ಕೇವಲ ವೃಂದಾ ಅವರ ಸಂತಸದ ಕ್ಷಣಗಳು ಮಾತ್ರವಲ್ಲ.. ಈ ಹಿಂದೆ ಶುಭಾ ಜೊತೆ ಅಂಡರ್ 23 ಕ್ರಿಕೆಟ್ ನಲ್ಲಿ ಆಡಿದ್ದ ಎಲ್ಲ ಆಟಗಾರ್ತಿಯರ ಖುಷಿಯ ವಿಚಾರವಾಗಿದೆ. 

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಶನಿವಾರ…ಶಾಸಕರು,ಸಂಸದರ ಕಾರ್ಯಕ್ರಮಗಳು

ಇಟಗಿ ರಾಮೇಶ್ವರ ಮತ್ತು ಪರಿವಾರ ದೇವಾಲಯಗಳ ಅಷ್ಟಬಂಧ ಕಾರ್ಯಕ್ರಮದಲ್ಲಿ ಏ.೫ ರ ಶನಿವಾರ ಸಾಯಂಕಾಲ ಸಂಜೆ ನಾಲ್ಕರಿಂದ ಭರತನಾಟ್ಯ ರಕ್ಷಾ & ದೀಕ್ಷಾ ರಾವ್‌...

ಸಿದ್ಧಾಪುರದಲ್ಲಿ ಧಾರ್ಮಿಕ ಕಾರ್ಯಕ್ರಮಗಳ ಜಾತ್ರೆ! ನಮ್ಮೂರು ಇಂದು ನಾಳೆ…..

* ಸಿದ್ಧಾಪುರ ಇಟಗಿಯ ರಾಮೇಶ್ವರ ದೇವರ ದಿವ್ಯಾಷ್ಟಬಂಧ ಕಾರ್ಯಕ್ರಮ ಪ್ರಾರಂಭವಾಗಿದೆ. ಈ ಕಾರ್ಯಕ್ರಮದ ಅಂಗವಾಗಿ ಪ್ರತಿದಿನ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ.

senaa sevaa-ಸೈನಿಕನಿಗೆ ಹುಟ್ಟೂರಿನ ಗೌರವ

ಸಿದ್ದಾಪುರ: ಭಾರತೀಯ ಸೈನ್ಯದಲ್ಲಿ ಹದಿನೇಳು ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಪಡೆದು ತಾಯ್ನಾಡಿಗೆ ಮರಳಿದ ಸಿದ್ದಾಪುರ ತಾಲೂಕಿನ ಸಂಪೇಕೇರಿಯ(ಮುಗದೂರ) ವಿನಯಕುಮಾರ ನಾಯ್ಕ ರಿಗೆ...

ಕದಂಬಜಿಲ್ಲೆಗಾಗಿ ಸಹಿಸಂಗ್ರಹಣೆ, ಕಾನಳ್ಳಿಯಲ್ಲಿ ಹಸ್ಲರ್‌ ಸಂಘಕ್ಕೆ ಚಾಲನೆ,ಸೋಮುವಾರ ಮಹಿಳಾ ಸಂವೇದನೆ ಕವಿಗೋಷ್ಠಿ‌

ನಿರಂತರ ಹೋರಾಟದಲ್ಲಿರುವ ಶಿರಸಿ ಕೇಂದ್ರಿತ ಪ್ರತ್ಯೇಕ ಕದಂಬ ಜಿಲ್ಲೆ ಹೋರಾಟ ಸಮೀತಿ ಈ ತಿಂಗಳಿಂದ ಸಿದ್ಧಾಪುರದ ಗ್ರಾಮೀಣ ಪ್ರದೇಶಗಳಲ್ಲಿ ಪ್ರತ್ಯೇಕ ಜಿಲ್ಲೆಗಾಗಿ ಸಹಿ ಸಂಗ್ರಹಣೆ...

ಧಾರ್ಮಿಕ, ಆರ್ಥಿಕ, ಶೈಕ್ಷಣಿಕ ಕೆಲಸಗಳಿಂದ ಸುಸ್ಥಿರ ಅಭಿವೃದ್ಧಿ… ಅರಶಿನಗೋಡು ಅಷ್ಟಬಂಧ ಹಾಗೂ ಬ್ರಹ್ಮಕಲಶೋತ್ಸವ ಸಂಪನ್ನ

ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಶಿಕ್ಷಣ ಮತ್ತು ಉದ್ಯೋಗ ಗಳಿಗೆ ಹೆಚ್ಚಿನ ಮಹತ್ವ ನೀಡಿದರೆ ಹೊಸ ಪೀಳಿಗೆ ಮಹತ್ವದ್ದನ್ನು ಸಾಧಿಸಲು ಸಾಧ್ಯ ಎಂದಿರುವ ಶಾಸಕ ಭೀಮಣ್ಣ ನಾಯ್ಕ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *