ಸಿದ್ದಾಪುರ
ಪಟ್ಟಣದ ಹೆಸ್ಕಾಂ ಕಚೇರಿಯ ಆವರಣದಲ್ಲಿನ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಪ್ರತಿವರ್ಷದಂತೆ ಚಂಪಾಷಷ್ಠಿಯ ಪ್ರಯುಕ್ತ ಡಿಸೆಂಬರ್ ೧೮ರಂದು ಬೆಳಿಗ್ಗೆಯಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ವಿಶೇಷ ಪೂಜಾ ವಿನಿಯೋಗಗಳು,ಮನರಂಜನಾ ಕಾರ್ಯಕ್ರಮಗಳು ಜರುಗಲಿವೆ.
ಡಿ.೧೮ರ ಬೆಳಿಗ್ಗೆಯಿಂದ ರಾತ್ರಿ ೮.೩೦ರವರೆಗೆ ಶ್ರೀ ದೇವರಲ್ಲಿ ಕನಕಾಭಿಷೇಕ ಹಾಗೂ ವಿಶೇಷ ಪೂಜಾ ವಿನಿಯೋಗಗಳು ನಂತರ ರಾತ್ರಿ ೮.೩೦ಕ್ಕೆ ಮಹಾಮಂಗಳಾರತಿ ನಡೆಯುವದು. ಮಧ್ಯಾಹ್ನ ೧ರಿಂದ ೩ರವರೆಗೆ ಅನ್ನ ಸಂತರ್ಪಣೆ, ಸಂಜೆ ೬ರಿಂದ ವಿನಾಯಕ ಕೊಂಡ್ಲಿ ನೇತೃತ್ವದ ತೇಜು ಮೆಲೋಡಿಸ್ ತಂಡದಿಂದ ರಸಮಂಜರಿ ಕಾರ್ಯಕ್ರಮ, ರಾತ್ರಿ ೯ರಿಂದ ಮೆಕ್ಕೆಕಟ್ಟು ಶಿರಿಯೂರಿನ ಶ್ರೀ ನಂದಿಕೇಶ್ವರ ಪ್ರಸಾದಿತ ಯಕ್ಷಗಾನ ಮಂಡಳಿಯವರಿಂದ ರಾಜಾ ಉಗ್ರಸೇನ ಮತ್ತು ಶನೇಶ್ವರ ಮಹಾತ್ಮೆ ಯಕ್ಷಗಾನ ಪ್ರದರ್ಶನಗೊಳ್ಳುವದು. ಈ ಎಲ್ಲ ಕಾರ್ಯಕ್ರಮಗಳಲ್ಲಿ ಭಕ್ತಾದಿಗಳು ಪಾಲ್ಗೊಳ್ಳಬೇಕೆಂದು ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಸಮಿತಿ ಹೆಸ್ಕಾಂ ಪ್ರಕಟಣೆಯಲ್ಲಿ ಕೋರಿದ್ದಾರೆ.