


ಸಿದ್ದಾಪುರ
ಅಖಿಲ ಹವ್ಯಕ ಮಹಾಸಭೆಯು ಹವ್ಯಕರಿಂದ,ಹವ್ಯಕರಿಗಾಗಿ,ಹವ್ಯಕರಿಗೋಸ್ಕರ ತಾಲೂಕಿನ ಹೇರೂರು ಹಾಗೂ ಸುತ್ತಲಿನ ಪ್ರಾಂತ್ಯಗಳ ಹವ್ಯಕ ಪ್ರತಿಭೆಗಳಿಗಾಗಿ ಪ್ರತಿಬಿಂಬ ಎನ್ನುವ ಸಾಂಸ್ಕೃತಿಕ ಸ್ಪರ್ಧೆ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಡಿ.೨೫ರಂದು ಹೇರೂರಿನ ಶ್ರೀ ಸಿದ್ಧಿವಿನಾಯಕ ಸಭಾಭವನದಲ್ಲಿ ಆಯೋಜಿಸಿದೆ ಎಂದು ಹವ್ಯಕ ಮಹಾಸಭೆಯ ನಿರ್ದೇಶಕ ಜಿ.ಎಂ.ಭಟ್ಟ ಕಾಜಿನಮನೆ ತಿಳಿಸಿದರು.
ಅವರು ಸುದ್ದಿಗೋಷ್ಠಿಯಲ್ಲಿ ವಿವರಗಳನ್ನು ನೀಡಿ ಡಿ.೨೫ರ ಬೆಳಿಗ್ಗೆ ೯.೩೦ಕ್ಕೆ ಶಿ.ಪ್ರ.ಸಮಿತಿಯ ಉಪಾಧ್ಯಕ್ಷ ಡಾ|ಶಶಿಭೂಷಣ ಹೆಗಡೆ ದೊಡ್ಮನೆ ಉದ್ಘಾಟಿಸುವರು. ಅಖಿಲ ಹವ್ಯಕ ಮಹಾಸಭೆ ಉಪಾಧ್ಯಕ್ಷ ಆರ್.ಎಂ.ಹೆಗಡೆ ಬಾಳೇಸರ ಅಧ್ಯಕ್ಷತೆವಹಿಸುವರು. ಅತಿಥಿಗಳಾಗಿ ಕೆ.ಡಿ.ಸಿ.ಸಿ.ಬ್ಯಾಂಕ್ ನಿರ್ದೇಶಕ ರಾಘವೇಂದ್ರ ಶಾಸ್ತಿç ಪಾಲ್ಗೊಳ್ಳುವರು. ಕಿಬ್ಬಳ್ಳಿ ಮ.ಗ.ಶಿ.ಗ್ರಾ. ಸಂಸ್ಥೆ ಅಧ್ಯಕ್ಷ ನಾಗಪತಿ ಭಟ್ಟ ಮಿಳಗಾರ,ಹೆಗ್ಗರಣಿ ವಿ.ಶಿ.ಸಂಸ್ಥೆ ಅಧ್ಯಕ್ಷ ಎನ್.ಆರ್.ಭಟ್ಟ ದರೆ, ಶ್ರೀಮನ್ನೆಲೆಮಾವು ಮಠದ ಅಧ್ಯಕ್ಷ ಜಿ.ಎಂ.ಹೆಗಡೆ ಹೆಗ್ನೂರು, ನೆಲೆಮಾವು ಸೇ.ಸ.ಸಂಘದ ಅಧ್ಯಕ್ಷ ಜಿ.ಆಯ್.ಹೆಗಡೆ ಉಂಬಳಮನೆ, ಹೆಗ್ಗರಣಿ ಸೇ.ಸ.ಸಂ.ದ ಅಧ್ಯಕ್ಷ ಎಂ.ಎಲ್.ಭಟ್ಟ ಉಂಚಳ್ಳಿ, ಹೇರೂರು ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ಅಧ್ಯಕ್ಷ ನರಸಿಂಹಮೂರ್ತಿ ಹೆಗಡೆ ತ್ಯಾರ್ಗಲ್, ಸರಕುಳಿ ಜಗದಾಂಬಾ ಪ್ರೌಢಶಾಲೆ ಅಧ್ಯಕ್ಷ ಎಂ.ಜಿ.ಹೆಗಡೆ ತ್ಯಾರ್ಗಲ್ ಉಪಸ್ಥಿತರಿರುವರು.
ಬೆಳಿಗ್ಗೆ ೧೦ರಿಂದ ಸ್ಪರ್ಧಾ ಸೌರಭ ನಡೆಯಲಿದ್ದು ೬ ವರ್ಷದ ಒಳಗಿನವರಿಗೆ ಛದ್ಮವೇಷ,ಶ್ಲೋಕಪಠಣ,ಚೆಂಡು ಎಸೆತ ಸ್ಪರ್ಧೆಗಳು, ೭ರಿಂದ೧೨ ವರ್ಷದವರಿಗೆ ಭಗವದೀತೆ(೧೦ನೇ ಅಧ್ಯಾಯದ ಮೊದಲ ೧೫ ಶ್ಲೋಕಗಳು),ಚಿತ್ರಕಲೆ( ಹಬ್ಬ),ಕೆರೆದಡ ಸ್ಪರ್ಧೆ,೧೩ರಿಂದ ೧೮ ವರ್ಷದವರಿಗೆ ಭಾವಗೀತೆ,ಆಶುಭಾಷಣ,ಸಂಗೀತ ಕುರ್ಚಿ ಸ್ಪರ್ಧೆಗಳು, ಸಾಮಾನ್ಯ ವಿಭಾಗ(೧೮ವರ್ಷ ಮೆಲ್ಪಟ್ಟು) ಹವಿ-ರುಚಿ(ಹಲ್ವಾ),ಸಂಪ್ರದಾಯಗೀತೆ(ಪ್ರತಿ ತಂಡದಲ್ಲಿ ೩ ಜನಕ್ಕೆಅವಕಾಶ) ರಂಗೋಲಿ,ಆರತಿತಟ್ಟೆ,ಪಾಯಸ ಕುಡಿಯುವದು, ಹಗ್ಗಜಗ್ಗಾಟ(೬ಜನರ ತಂಡ) ಮುಂತಾದ ಸ್ಪರ್ಧೆಗಳು ನಡೆಯಲಿವೆ. ಸಂಜೆ ೪ರಿಂದ ಸಂಸ್ಕಾರ ಮತ್ತು ಸಂಸ್ಕೃತಿ ವಿಷಯದ ಕುರಿತು ವಿ| ವಿಶ್ವನಾಥ ವಿ.ಭಟ್ ನರ‍್ಗಾನು, ಸನಾತನ ವೈದಿಕ ಧರ್ಮ ವಿಷಯದ ಕುರಿತು ವಿ| ಮಂಜುನಾಥ ಜಿ.ಭಟ್ಟ ಹೇರೂರು ಉಪನ್ಯಾಸ ನೀಡುವರು.
ಸಂಜೆ ೫ರಿಂದ ಸಮಾರೋಪ ನಡೆಯಲಿದ್ದು ಶ್ರೀಮನ್ನೆಲೆಮಾವು ಮಠದ ಶ್ರೀ ಮಾದವಾನಂದ ಭಾರತೀ ಶ್ರೀಗಳು ದಿವ್ಯ ಉಪಸ್ಥಿತಿ ವಹಿಸಲಿದ್ದು ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅಭ್ಯಾಗತರಾಗಿ ಪಾಲ್ಗೊಳ್ಳುವರು. ಬಾಳೇಸರ ಸೇ.ಸ.ಸಂಘದ ಅಧ್ಯಕ್ಷ ಸಿ.ಎನ್.ಹೆಗಡೆ ತಂಗರ‍್ಮನೆ, ಕಂಚಿಕೈ ಸೇ.ಸ.ಸಂಘದ ಅಧ್ಯಕ್ಷ ಎಂ.ವಿ.ಹೆಗಡೆ, ನಿಲ್ಕುಂದ ಗ್ರಾಪಂ ಅಧ್ಯಕ್ಷ ರಾಜಾರಾಮ ಆರ್.ಹೆಗಡೆ ಬೆಳೆಕಲ್ಲು ಉಪಸ್ಥಿತರಿರುವರು ಎಂದರು.
ಈ ಪ್ರತಿಬಿಂಬ ಸ್ಪರ್ಧೆಯಲ್ಲಿ ಪ್ರಥಮ ಮತ್ತು ದ್ವಿತೀಯ ಬಹುಮಾನ ಪಡೆದವರಿಗೆ ಬೆಂಗಳೂರಿನಲ್ಲಿ ನಡೆಯುವ ಮೆಗಾ ಸ್ಪರ್ಧೆಗೆ ಅವಕಾಶವಿದೆ. ಸ್ಪರ್ಧೆಗಳಿಗೆ ಹೆಸರು ನೊಂದಾಯಿಸುವವರು ಡಿ.೨೫ರ ಒಳಗೆ ೯೧೪೮೪ ೫೯೧೯೧,೮೦೮೮೫೭೪೧೮೧, ೮೭೬೨೬೩೨೮೬೭ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ ಎಂದರು.
ರಾಷ್ಟçಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಜಿ.ಜಿ.ಹೆಗಡೆ ಬಾಳಗೋಡ ಉಪಸ್ಥಿತರಿದ್ದರು.
