

ರಾಜ್ಯದ ಕರಾವಳಿ ಸೇರಿದಂತೆ ದೇಶದಾದ್ಯಂತ ಬಿ.ಜೆ.ಪಿ. ದೇವರು, ಧರ್ಮ ಬಳಸಿಕೊಂಡು ಬೆಳೆಯುತ್ತಿದೆ. ಆದರೆ ದೇವರು- ಧರ್ಮದ ಅಫೀಮಿಗೆ ಹುಚ್ಚರಾಗುವ ಶೂದ್ರರಿಗೆ ಬಿ.ಜೆ.ಪಿ.ಯಲ್ಲಿ ಅವಕಾಶವಿದೆಯೆ? ಅನುಕೂಲವಿದೆಯೆ ಎಂದರೆ ಉತ್ತರ ಇಲ್ಲ ಎನ್ನುವುದು ವಾಸ್ತವ ಸತ್ಯ. ಈ ಹಿನ್ನೆಲೆಯಲ್ಲಿ ಇಡೀ ದೇಶದಾದ್ಯಂತ ವಿಶೇಶವಾಗಿ ಉತ್ತರ ಕನ್ನಡದಲ್ಲಿ ಹಿಂದುತ್ವ, ರಾಮಜನ್ಮಭೂಮಿ ಎಂದು ದುಡಿದ ಶೂದ್ರರು ಅಬ್ಬೆಪಾರಿಗಳಂತೆ ಮಡಿಯುತಿದ್ದರೆ. ಪಕ್ಷ, ಆಡಳಿತದಲ್ಲಿ ಅವಕಾಶ ಪಡೆದು ಶೂದ್ರರನ್ನು ಭಾಷಣದ ಮೂಲಕ, ಬರವಣಿಗೆ ಮೂಲಕ ಮೂರ್ಖರನ್ನಾಗಿ ಮಾಡುತ್ತಿರುವ ಕಪಟ ವೈದಿಕತೆ ಹಿಂದುಳಿದ ವರ್ಗಗಳ ಬಿ,ಜೆ.ಪಿ.ಗೆ ಶಾಪವಾಗುತ್ತಿರುವ ಬಗ್ಗೆ ಬಿ.ಜೆ.ಪಿ. ವಲಯದಲ್ಲಿ ಅಂತ:ಕಲಹವಾಗಿ ಆಕ್ರೋಶ ಹೆಚ್ಚತೊಡಗಿದೆ.
ಈ ವಿದ್ಯಮಾನದ ಬೆನ್ನುಹತ್ತಿ ಸಮಾಜಮುಖಿ ಡಾಟ್ ನೆಟ್ ಸಂಪರ್ಕಿಸಿದ ಉತ್ತರ ಕನ್ನಡ ಜಿಲ್ಲೆಯ ಕೆಲವು ಬಿ.ಜೆ.ಪಿ. ಪ್ರಮುಖರು ಹಿಂದುತ್ವದ ಸೋಗಿನ ಆರೆಸ್ಸೆಸ್ ಮತ್ತು ಬಿ.ಜೆ.ಪಿ.ಯ ವೈದಿಕ ಕುತಂತ್ರದ ಬೂಟಾಟಿಕೆಯನ್ನು ಖಂಡತುಂಡ ವಾಗಿ ವಿರೋಧಿಸಿದರು.
ಕಾರವಾರದ ನಿಷ್ಠಾವಂಥ ಬಿ.ಜೆ.ಪಿ. ಕಾರ್ಯಕರ್ತರೊಬ್ಬರು ಮಾತನಾಡಿ ಬಿ.ಜೆ.ಪಿ. ಆರೆಸ್ಸೆಸ್ ಗಳು ಹಿಂದುಳಿದವರ ಶತ್ರುಗಳು ನಮ್ಮೂರಿನಲ್ಲೇ ನೋಡಿ ಆನಂದ ಅಸ್ನೋಟಿಕರ್ ಎಲ್ಲಿಂದಲೋ ಬಂದು ಟಿಕೇಟ್, ಅಧಿಕಾರ ಪಡೆಯುತ್ತಾರೆ.
ಅಸ್ನೋಟಿಕರ್ ರಂಥ ಶ್ರೀಮಂತರಿಗೆ ಬೇಡದ ಹಿಂದುತ್ವ, ರಾಮಮಂದಿರ ನಮಗೆ ಬೇಕೆ?
ಇವೆಲ್ಲಾ ಬೂಟಾಟಿಕೆ ನಾವು ಕಾರವಾರ ಅಂಕೋಲಾ ದಿಂದ ಮಂಗಳೂರಿನ ವರೆಗೆ ಮೀನುಗಾರರು ಬಹುಸಂಖ್ಯಾತರು ನಮಗೆ ಕೇಸರಿ ಧ್ವಜ ಕೊಟ್ಟು ನಮ್ಮನ್ನು ದುಡಿಸಿಕೊಂಡ ಬಿ.ಜೆ.ಪಿ. ಅಲ್ಪಸಂಖ್ಯಾತ ಗಂಗಾಧರ ಭಟ್ ರಿಗೆ ಅವಕಾಶ ನೀಡಿತು. ನಮ್ಮ ಮಹಾರುದ್ರ ಬಾನಾವಳಿಕರ್, ಪ್ರಸಾದ್ ಕಾರವಾರಕರ್ ಬಿ.ಜೆ.ಪಿ. ಹಿಂದುತ್ವ ಎನ್ನುತ್ತಾ ಪ್ರಾಣ ಕೊಟ್ಟರು. ಪ್ರತಿಚುನಾವಣೆಯಲ್ಲಿ ಒಂದೊಂದು ಗಿಮಿಕ್ ಮಾಡುವ ಬಿ.ಜೆ.ಪಿ. ನಮ್ಮ ಪರೇಶ್ ಮೇಸ್ತರನ್ನು ಬಳಸಿಕೊಂಡು ಅಧಿಕಾರ ಹಿಡಿಯಿತು. ಶಾಸಕರು, ಸಂಸದರು, ನಿಗಮಮಂಡಳಿಗಳಿಗೆ ಆಯ್ಕೆಯಾದವರು ಯಾರು? ಬಿ.ಜೆ.ಪಿ. ಯ ಬ್ರಾಮಣ್ಯ ಮುಸ್ಲಿಂರಿಗೆ ಮಾರಕವಲ್ಲ ಅದು ಬ್ರಾಹಣರನ್ನು ಬೆಳೆಸಿ ಹಿಂದುಳಿದವರನ್ನು ನಾಶ ಮಾಡುತ್ತೆ .
ಪ್ರಶ್ನಿಸಿದರೆ ಗಣಪತಿ ಉಳ್ವೇಕರ್, ಗೋವಿಂದ ನಾಯ್ಕರನ್ನು ತೋರಿಸುತ್ತೆ ಗೋವಿಂದ ನಾಯ್ಕರ ಸಮೂದಾಯದ ಜನಸಂಖ್ಯೆ ಎಷ್ಟು? ಗಣಪತಿ ಉಳ್ವೇಕರ್ ಸಮೂದಾಯದ ಜನಸಂಖ್ಯೆ ಎಷ್ಟು? ಲಾಭಪಡೆದ ಹೆಗಡೆ,ಭಟ್,ಶಾಸ್ತ್ರೀ,ನಾಯಕ್ ಗಳ ಜನಸಂಖ್ಯೆ ಎಷ್ಟು? ಇದು ಉತ್ತರ ಕನ್ನಡದ ಉದಾಹರಣೆ ಬಿ.ಜೆ.ಪಿ. ಆರೆಸ್ಸೆಸ್ ಸೇರಿ ಇಡೀ ಭಾರತದಲ್ಲಿ ಇದನ್ನೇ ಮಾಡುತ್ತಿವೆ. ನಾವು ಮೂರ್ಖರಾಗಿದ್ದು ಸಾಕು ಈ ಬಾರಿ ಬಿ.ಜೆ.ಪಿ.ಯಿಂದ ಹಿಂದುಳಿದ ವರ್ಗದವರಿಗೆ ಎಂ.ಪಿ. ಟಿಕೆಟ್ ನೀಡದಿದ್ದರೆ ನಮ್ಮ ಶಕ್ತಿ ತೋರಿಸುತ್ತೇವೆ. ಎಂದರು.
ಇದೇ ವಿಚಾರದ ಬಗ್ಗೆ ಮಾತನಾಡಿದ ಸಿದ್ಧಾಪುರದ ಹಿರಿಯ ಮುಖಂಡರೊಬ್ಬರು ನಾವು ಆರೆಸ್ಸೆಸ್, ಬಿ.ಜೆ.ಪಿ.ಗೆ ದುಡಿದು ಅನಂತಕುಮಾರ್ ಹೆಗಡೆ ಮತ್ತು ವಿಶ್ವೇಶ್ವರ ಹೆಗಡೆಗಳನ್ನು ನೂರಾರು ಕೋಟಿ ಒಡೆಯರನ್ನಾಗಿ ಮಾಡಿದೆವು. ಹಿಂದುತ್ವ, ರಾಷ್ಟ್ರೀಯತೆ, ದೇಶಭಕ್ತಿ ಎಂದು ನಟಿಸುವ ಕಪಟ ಮುಖಂಡರು ನೂರಾರು ಕೋಟಿ ಒಡೆಯರಾದರು. ನಾವು ಇವರ ಬ್ಯಾನರ್ ಕಟ್ಟಿ, ಇವರ ಪರವಾಗಿ ನಮ್ಮವರ ವಿರೋಧ ಕಟ್ಟಿಕೊಂಡು ಚುನಾವಣೆಯಲ್ಲಿ ಮಾಡಿದ ಕರ್ಚಿಗೆ ಇವರ ಮನೆ ಬಾಗಿಲು ಕಾಯಬೇಕು.
ಮೂವತ್ತು ವರ್ಷ ಅಧಿಕಾರದ ಲಾಭ ಪಡೆದುಕೊಂಡ ಇವರು ಇಲ್ಲಿ ಸೋತರ ಅಲ್ಲಿ, ಅಲ್ಲಿ ಸಿಗದಿದ್ದರೆ ಇಲ್ಲಿ ಎನ್ನುವ ನಾಟಕ ಮಾಡುತ್ತಾರೆ. ಉತ್ತರ ಕನ್ನಡದಲ್ಲಿ ಈ ಬಾರಿ ಹಿಂದುಳಿದವರಿಗೆ ಬಿ.ಜೆ.ಪಿ. ಎಂ.ಪಿ. ಟಿಕೇಟ್ ನೀಡದಿದ್ದರೆ ಇವರ ಹಿಂದುತ್ವ, ಮೋದಿ ಅಲೆ, ಚುನಾವಣಾ ರಾಷ್ಟ್ರೀಯತೆ ಎಲ್ಲ ಸುಳ್ಳುಗಳನ್ನೂ ನಾವೇ ಹೊರಗೆಳೆಯುತ್ತೇವೆ. ಈಗಿನ ಬಿ.ಜೆ.ಪಿ. ಕೆಲವರಿಗಾಗಿ ಬಹುಸಂಖ್ಯಾತರು ಬಲಿದಾನ ಮಾಡುವ ಅಮಾನವೀಯ ಪರಿವಾರವಾಗಿದೆ. ನಮಗೆ ಈಗ ವೈದಿಕರನ್ನು ಮೆರೆಸುವ ಸೂಡೋ ಹಿಂದುತ್ವ ಸಾಕಾಗಿದೆ. ಬಿ.ಜೆ.ಪಿ. ನಮಗೆ ಮರ್ಯಾದೆ ನೀಡದಿದ್ದರೆ ನಾವ್ಯಾಕೆ ಅವರ ದುಷ್ಟ, ಬ್ರಷ್ಟ, ಕಪಟ ಬೂಟಾಟಿಕೆಯಹಿಂದುತ್ವದ ರಾಜಕಾರಣಕ್ಕೆ ಬೆಂಬಲಿಸಬೇಕು ಎಂದು ಪ್ರಶ್ನಿಸಿದರು. (ಮುಂದುವರಿಯಲಿದೆ)


