

ಸಿದ್ದಾಪುರ
ತಾಲೂಕಿನ ಭುವನಗಿರಿಯ ಭುವನೇಶ್ವರಿ ದೇವಾಲಯದ ಸಭಾಂಗಣದಲ್ಲಿ ಕದಂಬ ಸೈನ್ಯ ಕನ್ನಡ ಸಂಘಟನೆ ದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭ ಶುಕ್ರವಾರ ನಡೆಯಿತು.
ಯುವ ನಾಯಕ ರಮೇಶ್ ಹ.ಹಡಗದ ಹಾದ್ರಿಹಳ್ಳಿ ಕಾರ್ಯಕ್ರಮ ಉದ್ಘಾಟಿಸಿದರು.
ಅಭಿನಂದನಾ ಮಾತನಾಡಿದ ಕನ್ನಡ ರಾಜ್ಯ ಹೋರಾಟಗಾರ ಉದಯಕುಮಾರ್ ಕಾನಳ್ಳಿ ಬನವಾಸಿ ಅವರು ರಾಜ್ಯದ ಪ್ರಸಿದ್ದ ಐತಿಹಾಸಿಕ ದೇವಾಲಯವಾಗಿರುವ ಭುವನಗಿರಿಯ ಭುನೇಶ್ವರಿ ದೇವಸ್ಥಾನದಲ್ಲಿ ರಾಜ್ಯ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭ ಮಾಡಬೇಕು ಹಾಗೂ ಭುವನಗಿರಿ ಅಭಿವೃದ್ಧಿ ಪ್ರಾಧಿಕಾರ ರಚಿಸಬೇಕೆಂದು ಆಗ್ರಹಹಿಸಿದರು. ಕದಂಬ ಸೈನ್ಯ ಕನ್ನಡ ಸಂಘಟನೆಯ ಹೋರಾಟದ ಫಲವಾಗಿ ಸರ್ಕಾರ ಬನವಾಸಿ ಅಭಿವೃದ್ಧಿ ಪ್ರಾಧಿಕಾರ ರಚಿಸಿದೆ. ಆದರೆ ಹಣ ಬಿಡುಗಡೆ ಮಾಡಿಲ್ಲ. ಬನವಾಸಿ ಅಭಿವೃದ್ಧಿ ಪ್ರಾಧಿಕಾರಕ್ಕೆ ನೂರಾರು ಕೋಟಿಗಳನ್ನು ಬಿಡುಗಡೆ ಮಾಡಿ ಅಭಿವೃದ್ಧಿಗೆ ಮುಂದಾಗಬೇಕು. ಕದಂಬ ಸೈನ್ಯ ಕನ್ನಡ ಪರ ಸಂಘಟನೆ ಯಾವುದೇ ಪ್ರಚಾರ ಬಯಸುವುದಿಲ್ಲ. ಕೆಲಸ ಮಾಡಿ ತೋರಿಸುತ್ತದೆ ಎಂದು ಹೇಳಿದರು.
ದೇವಾಲಯದ ಉಪಾಧ್ಯಕ್ಷ ಚಂದ್ರಕಾಂತ ಹೆಗಡೆ ಗುಂಜಗೋಡ ಮಾತನಾಡಿ ಸರ್ಕಾರ ಭುವನಗಿರಿ ಅಭಿವೃದ್ಧಿ ಪ್ರಾಧಿಕಾರ ರಚಿಸುವುದಕ್ಕೆ ಯಾವುದೇ ಆಕ್ಷೇಪ ಇಲ್ಲ. ಇಲ್ಲಿಯ ಧಾರ್ಮಿಕತೆಗೆ ಹಾಗೂ ದೇವಾಲಯಕ್ಕೆ ಯಾವುದೇ ಧಕ್ಕೆ ಆಗದಂತಿರಬೇಕು ಎಂದು ಹೇಳಿದರು.
ಕದಂಬಸೈನ್ ಕನ್ನಡ ಸಂಘಟನೆಯ ರಾಜ್ಯಾಧ್ಯಕ್ಷ ಬೇಕ್ರಿ ರಮೇಶ್ ಅಧ್ಯಕ್ಷತೆವಹಿಸಿದ್ದರು. ಬನವಾಸಿಯ ಉಮಾಮಧುಕೇಶ್ವರ ದೇವಾಲಯದ ಆಡಳಿತ ಮಂಡಲಿ ಅಧ್ಯಕ್ಷ ರಾಜಶೇಖರ್ ಒಡೆಯರ್,ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಗಂಗಾಧರ ಕೊಳಗಿ, ಭಾಗ್ಯಮ್ಮ ಬೆಂಗಳೂರು, ಎಸ್.ಶಿವಕುಮಾರ್ ಇತರರಿದ್ದರು.

ಇದೇ ಸಂದರ್ಭದಲ್ಲಿ ಕದಂಬ ಚಕ್ರೇಶ್ವರ ಮಯೂರವರ್ಮ ಪ್ರಶಸ್ತಿಯನ್ನು ವಿದ್ಯಾವಾಚಸ್ಪತಿ ಡಾ.ಎಚ್.ಪಿ.ಮೋಹನಕುಮಾರ್ ಶಾಸ್ತಿç ಮೈಸೂರು,ತಲಕಾಡು ಗಂಗ ದುರ್ವಿನೀತ ಚಕ್ರವರ್ತಿ ಪ್ರಶಸ್ತಿಯನ್ನು ಮಂಢ್ಯದ ರಾಜ್ಯ ಪ್ರಶಸ್ತಿ ಪುರಸ್ಕೃತ ಕೃಷಿಕ ರಮೇಶರಾಜು ಅವರಿಗೆ, ಕದಂಬ ಕಾಕುತ್ಥ÷್ಸವರ್ಮ ಪ್ರಶಸ್ತಿಯನ್ನು ಶ್ರೀನಿವಾಸ ಶೆಟ್ಟಿ ಮಂಡ್ಯ, ಕದಂಬ ರತ್ನ, ವೀರರಾಣಿ ಬೆಳವಡಿ ಮಲ್ಲಮ್ಮ,ವೀರರಾಣಿ ಅಬ್ಬಕ್ಕ,ಕದಂಬ ವೀರ ಯೋಧ, ತಲಕಾಡು ಗಂಗ ರತ್ನ,ಕದಂಬ ಸೇವಾ ರತ್ನ ಪ್ರಶಸ್ತಿಯನ್ನು ರಾಜ್ಯದ ವಿವಿಧ ಜಿಲ್ಲೆಯ ಸಾಧಕರಿಗೆ ನೀಡಲಾಯಿತು.
ಆಯ್ಕೆ…..
ಸಿದ್ದಾಪುರ
ತಾಲೂಕಿನ ಬಾಳೇಸರ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರಾಗಿ ಮಂಜುನಾಥ ಗಣಪತಿ ಹೆಗಡೆ ಇಡ್ಕಲಗದ್ದೆ ಹಾಗೂ ಉಪಾಧ್ಯಕ್ಷರಾಗಿ ರತ್ನಾಕರ ಗಣಪತಿ ಹೆಗಡೆ ಹಸಲಮನೆ ಇವರು ಶನಿವಾರ ಅವಿರೋಧವಾಗಿ ಆಯ್ಕೆ ಆಗಿದ್ದಾರೆ.
ಸಂಘದ ನೂತನ ಆಡಳಿತ ಮಂಡಳಿಗೆ ವೆಂಕಟರಮಣ ಶಂಕರ ಭಟ್ಟ ಮಸ್ಗುತ್ತಿ, ಗಣಪತಿ ದೇವರು ಭಟ್ಟ ಖುರಾ, ಗಜಾನನ ಮಹಾಬಲೇಶ್ವರ ಹೆಗಡೆ ಬಾಳೇಸರ, ಚಿಂತಾಮಣಿ ಶಂಕರನಾರಾಯಣ ಹೆಗಡೆ ಮಸ್ಗುತ್ತಿ, ವಿವೇಕಾನಂದ ಜೋಷಿ ಕರ್ಜಗಿ ಹಾಗೂ ನಾರಾಯಣ ಶುಕ್ರ ಕುಂದಾಪುರ ಬಾಳೇಸರ ಅವಿರೋಧವಾಗಿ ಆಯ್ಕೆ ಅಗಿದ್ದಾರೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.

