

೨೦೨೪ ರ ಲೋಕಸಭಾ ಚುನಾವಣೆಯ ರಂಗಲಾಲೀಮು ಈಗಾಗಲೇ ಶುರುವಾಗಿದೆ. ಜಾತಿ, ಮತ-ಧರ್ಮ,ಹಿಂದುತ್ವದ ಆಧಾರದಲ್ಲಿ ರಾಜಕಾರಣಮಾಡುವ ಬಿ.ಜೆ.ಪಿ. ಗೆಲುವಿಗಾಗಿ ಏನೂ ಮಾಡಲು ಸಿದ್ಧ ಎಂದು ಸಾಬೀತುಮಾಡುವಂತೆ ವಿಜಯೇಂದ್ರರನ್ನು ಬಿ.ಜೆ.ಪಿ. ರಾಜ್ಯಾಧ್ಯಕ್ಷರನ್ನಾಗಿಸಿ ಯಡಿಯೂರಪ್ಪನವರಿಗೆ ಮಾಡು ಇಲ್ಲವೆ ಮಡಿ ಗುರಿ ನಿಗದಿ ಮಾಡಿದೆ.
ಈ ಅನಿವಾರ್ಯತೆ ಅರಿತರೂ ಅರಿವುಗೇಡಿಯಾಗಿ ಮಾತನಾಡುವ ಬಸವನಗೌಡ ಪಾಟೀಲ್ ಯತ್ನಾಳ್ ಯಡಿಯೂರಪ್ಪ ತಂಡ ವಿರೋಧಿಸುತ್ತಲೇ ಮೋದಿ ಓಲೈಸತೊಡಗಿದ್ದಾರೆ. ಇವೆಲ್ಲಾ ಉತ್ತರದ ಕತೆಯಾಯಿತು. ಉತ್ತರ ಕನ್ನಡಕ್ಕೆ ಬಂದರೆ ಇಲ್ಲಿ ಇನ್ನೊಂದು ವಿದ್ಯಮಾನ ಸುದ್ದಿ ಮಾಡುತ್ತಿದೆ.
ಆರು ಅವಧಿಗಳಲ್ಲಿ ಒಂದೂ ಅವಧಿಯ ಕೆಲಸ ಮಾಡದ ಅನಂತಕುಮಾರ ಹೆಗಡೆ ಪ್ರತಿ ಚುನಾವಣೆಯಂತೆ ಈ ಬಾರಿ ಮತ್ತೆ ಎದ್ದು ನಿಂತಿದ್ದಾರೆ.
ಎಡವಟ್ಟಾದ ಅನಂತಕುಮಾರರ ಲೆಕ್ಕಾಚಾರ- ಕೆಲಸಮಾಡದೆ ಬಹುಸಂಖ್ಯಾತರ ತಲೆಯಲ್ಲಿ ದೇವರು, ಧರ್ಮದ ವಿಷ ತುಂಬಿ ಚುನಾವಣೆ ಗೆಲ್ಲುವ ಮಾಜಿ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಈ ಬಾರಿ ಕೂಡಾ ಪ್ರತಿಬಾರಿಯಂತೆ ತಾನು ಚುನಾವಣೆಗೆ ನಿಲ್ಲುವುದಿಲ್ಲ ಎನ್ನುವ ಹುಸಿ ಬಾಂಬ್ ಪ್ರಯೋಗಿಸಿದ್ದರು.
ಇಂಥ ಹುಸಿ ಬಾಂಬ್ ಪ್ರಯೋಗಿಸಿ ಇದರ ಮೂಲಕವೇ ಜನಾಭಿಪ್ರಾಯ, ಜನಾನುಕಂಪ ಗಳಿಸುತಿದ್ದ ಹೆಗಡೆ ಹಳೆ ರೂಢಿಯಂತೆ ಈ ಬಾರಿ ತಾನು ಸ್ಫರ್ಧೆಯಲ್ಲಿಲ್ಲ ಎನ್ನುವ ಹುಸಿ ಗುಂಡು ಹೊಡೆದೇ ಬಿಟ್ಟರು.
ಈ ಬಾರಿ ಹಾಗಾಗಲಿಲ್ಲ- ಪ್ರತಿಬಾರಿ ಅನಂತಕುಮಾರ್ ಹೆಗಡೆ ಹೊಡೆಯುತಿದ್ದ ಹುಸಿ ಬಾಂಬ್ ಆಧರಿಸಿ ಅವರ ಆಪ್ತರು ಸಂಘದ ಮೂಲಕ ಈ ಬಾರಿಯೂ ನೀವೇ ಎನ್ನುವುದನ್ನು ಹೇಳಿಸಿಬಿಡುತಿದ್ದರು.
ಆದರೆ ಈ ಬಾರಿ ಹಾಗಾಗಲಿಲ್ಲ!
ಕಾರವಾರದ ಮಾಜಿ ಶಾಸಕಿ ರೂಪಾಲಿ ನಾಯ್ಕ ನಾನು ಉತ್ತರ ಕನ್ನಡ ಕ್ಷೇತ್ರದ ಬಹುಸಂಖ್ಯಾತ ಮರಾಠಿ ಭಾಷಿಗರ ಪ್ರತಿನಿಧಿ, ನಾನು ಸಂಸದಳಾಗಲು ಸಿದ್ಧ ಎಂದುಬಿಟ್ಟರು.
ಈ ರೂಪಾಲಿ ಬೇಡಿಕೆ ಮೌಲ್ಯಯುತವಾದದ್ದು ಎಂದು ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಹುಸಂಖ್ಯಾತ ಮರಾಠಿಗರು ಹೂಂಗುಡುತ್ತಲೇ ಅನಂತಕುಮಾರ ಫಲಾನುಭವಿ ಪಡೆ ಕನಲಿ ಬಿಟ್ಟಿತು.
ಯಾಕೆಂದರೆ, ಸಾರ್ವಜನಿಕ ಕೆಲಸ ಮಾಡದ ಅನಂತ ಕುಮಾರ ಹೆಗಡೆ ತನ್ನ ಸ್ವಯಂ ಸೇವಾ ಸಂಸ್ಥೆ ಮತ್ತು ಸಹಕಾರಿ ಬ್ಯಾಂಕ್ ನಲ್ಲಿ ತೆರಿಗೆಗಳ್ಳರ ಹಣ ಇಟ್ಟುಕೊಂಡಿದ್ದಾರೆ. ಮತಾಂಧರು, ತೆರಿಗೆಗಳ್ಳರೂ, ವೈದಿಕ ಸಮಯಸಾಧಕರೂ ಆದ ಅನಂತಕುಮಾರ ಹೆಗಡೆ ಶಿಷ್ಯ ಗಣ ಹಿಂದುತ್ವದ ಹೆಸರಲ್ಲಿ ಅನಂತಕುಮಾರ ಹೆಗಡೆ ಗೆಲ್ಲಿಸಿಕೊಂಡರೆ ಜಿಲ್ಲೆ, ರಾಜ್ಯ, ದೇಶಕ್ಕೇ ಹಾನಿಯಾದರೂ ತೊಂದರೆ ಇಲ್ಲ ತಮ್ಮ ಸ್ವಾರ್ಥಕ್ಕೆ ಅನುಕೂಲ ಎಂದು ಭಾವಿಸಿ ಅನಂತಕುಮಾರ ಹೆಗಡೆಯನ್ನು ಬೆಂಬಲಿಸುತ್ತದೆ.
ಇದೇ ಆಧಾರದಲ್ಲಿ ಧೈರ್ಯದಲ್ಲಿ ಅನಂತಕುಮಾರ ಹೆಗಡೆ ಪ್ರತಿಬಾರಿಯಂತೆ ಈ ಬಾರಿ ಕೂಡಾ ನಾನೊಲ್ಲೆ ಎಂದು ತೃತಿಯ ಲಿಂಗಿಯಂತೆ ಕೀರಲಾಗಿ ಉಸುರಿದರು. ತಾನೊಂದು ಬಗೆದರೆ ದೈವವೊಂದು ಬಗೆಯಿತು ಎನ್ನುವಂತೆ ರೂಪಾಲಿ ನಾನ್ ರೆಡಿ ಎಂದುಬಿಟ್ಟರು!
ಅಲ್ಲಿಗೆ ಅನಂತಕುಮಾರ ಹೆಗಡೆಯವರ ಮೊದಲ ಹುಸಿಬಾಂಬ್ ಟುಸ್ ಆಗಿಹೋಯ್ತು.
ಇದೇ ಸಮಯದಲ್ಲಿ ಅಧಿಕಾರವಿಲ್ಲದೆ ವಿಚಲಿತರಾಗಿರುವ ವಿಧಾನಸಭೆಯ ಮಾಜಿ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ತನ್ನ ಸಂಘ ಸಂಪರ್ಕ ಬಳಸಿ ಅನಂತಕುಮಾರ ಬಗ್ಗೆ ಉತ್ತಮ ಅಭಿಪ್ರಾಯ ಇಲ್ಲ ಅವರಿಗೆ ಚುನಾವಣೆಯ ಆಸಕ್ತಿ ಇಲ್ಲ ಎಲ್ಲಾ ಸರಿ, ಆದರೆ ಅನಂತಬದಲು ರೂಪಾಲಿ ನಾಯ್ಕ ಅಥವಾ ಇತರರನ್ನು ಹುಡುಕುವ ಬದಲು ನಾನ್ಯಾಕೆ ಅಭ್ಯರ್ಥಿಯಾಗಬಾರದು ಎಂದು ನಾನೂ ರೆಡಿ ಎಂದುಬಿಟ್ಟರು.
ಪ್ರತಿವರ್ಷದಂತೆ ಫೇಕು ಬಾಂಬ್ ಹಾಕಿ ಉಪಾಯದಿಂದ ರಾಜಕಾರಣ ಮಾಡುತಿದ್ದ ಅನಂತಕುಮಾರ ಹೆಗಡೆ ವಿಚಲಿತರಾಗಿದ್ದೇ ಆಗ.
ರೂಪಾಲಿ ಪಕ್ಷದಲ್ಲಿ ಬಾಲ ಬಿಚ್ಚಬಾರದು ಕಾಗೇರಿ ತನ್ನ ಹಿರಿತನ ಹೇಳಿಕೊಂಡು ರಾಜಕೀಯ ಲಾಭಮಾಡಿಕೊಳ್ಳಬಾರದು ಎಂದೆಲ್ಲಾ ಯೋಚಿಸಿಯೇ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ವಿರುದ್ಧ ಕೆಲಸ ಮಾಡಿದ್ದ ಅನಂತಕುಮಾರ ಹೆಗಡೆ ಹಿಂದುತ್ವದ ಪಡೆ ಸುನಿಲ್ ಕುಮಾರ್, ರೂಪಾಲಿ, ವಿಶ್ವೇಶ್ವರ ಹೆಗಡೆ ಸೋಲಿಸುವಲ್ಲಿ ಜಯ ಕಂಡಿತ್ತು!
ಬಿ.ಜೆ.ಪಿ.ಯ ಈ ಫೇಕು ನಾಟಕ ಅನಂತಕುಮಾರ ಹೆಗಡೆ ಅಡಿಗೆ ಬಿಸಿನೀರು ಬಿಟ್ಟಂತೆ ಅನಂತಕುಮಾರ ಹೆಗಡೆ ಅಧಿಕಾರದಾಹಿ ಪರಿವಾರಕ್ಕೆ ಈ ಹಿಂದೆ ವಿಶ್ವೇಶ್ವರ ಹೆಗಡೆ ಬಣ ಪರೋಕ್ಷ ಶೀಥಲ ಸಮರ ಮಾಡಿದ ಘಟನೆಗಳೂ ಈಗ ಚರ್ಚೆಯ ವಿಷಯವಾಗಿದೆ.
ವಿಶ್ವೇಶ್ವರ ಹೆಗಡೆ ಕಾಗೇರಿ ಜಿಲ್ಲೆಯಲ್ಲಿ ತನ್ನನ್ನು ಬಿಟ್ಟು ಬೇರೆಯವರು ಬೆಳೆಯಬಾರದೆಂದು ತಂತ್ರ ರೂಪಿಸುತ್ತಾರೆ. ಈ ಕಾಗೇರಿ ತಂತ್ರದ ಭಾಗವಾಗಿ ಹಿಂದೆ ಎದುರಾಳಿ ಭೀಮಣ್ಣ ನಾಯ್ಕ ಮತ್ತು ಸ್ವಪಕ್ಷದ ಕೆ.ಜಿ.ನಾಯ್ಕ ಹಣಜಿಬೈಲ್ ಮತ್ತು ಖುದ್ದು ಅನಂತಕುಮಾರ ಮನೆಗಳ ಮೇಲೆ ಆದಾಯ ಇಲಾಖೆ ದಾಳಿಗಳ ಹಿಂದೆ ವಿಶ್ವೇಶ್ವರ ಹೆಗಡೆಯವರ ಆಪ್ತರ ಕಾರಸ್ಥಾನ ಕಾರಣ ಎನ್ನುವ ವಿಷಯ ಈಗ ಚರ್ಚೆಯ ವಿಷಯವಾಗಿದೆ. ಈ ಎಲ್ಲಾ ಚರ್ಚೆ ವಿರೋಧ, ಪರಸ್ಫರ ಕಾಲೆಳೆದಾಟ ಮಾಡುತ್ತಿರುವವರು ಬಿ.ಜೆ.ಪಿ. ಪಕ್ಷದ ಎರಡ್ಮೂರು ಗುಂಪುಗಳ ಹಿಂದುತ್ವವಾದಿಗಳೇ ಎನ್ನುವುದು ವಿಶೇಶ. ಒಟ್ಟಾರೆ ಬಿ.ಜೆ.ಪಿ.ಯ ಧರ್ಮಾಧಾರಿತ ರಾಜಕಾರಣದ ಲಾಭದಾಯಕ ಅತ:ಕಲಹ ಕಾಂಗ್ರೆಸ್ ಗೆಲುವಿನಲ್ಲಿ ಅಂತ್ಯವಾಗುವ ಸತ್ಯ ಈಗಲೇ ಸ್ಪಷ್ಟವಾಗತೊಡಗಿದೆ.
