

ಶಿರಸಿ ಉಪವಿಭಾಗದ ಸಹಾಯಕ ಆಯುಕ್ತರಾಗಿ ಅಪರ್ಣಾ ಆರ್. ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಈ ಹಿಂದೆ ಉಪವಿಭಾಗಾಧಿಕಾರಿಯಾಗಿ ಸೇವೆ ಸಲ್ಲಿಸುತಿದ್ದ ದೇವರಾಜ್ ಆರ್. ಧಾರವಾಡದ ಹೆದ್ದಾರಿ ಪ್ರಾಧಿಕಾರಕ್ಕೆ ವರ್ಗಾವಣೆಯಾಗಿದ್ದಾರೆ. ಕಳೆದ ಎರಡು ವರ್ಷಗಳಿಂದ ಶಿರಸಿ ಉಪವಿಭಾಗಾಧಿಕಾರಿಯಾಗಿ ಚುರುಕಾಗಿ ಕೆಲಸ ಮಾಡಿದ್ದ ದೇವರಾಜ್ ಉತ್ತರ ಕನ್ನಡ ಜಿಲ್ಲೆಯಲ್ಲಿ ಎ.ಸಿ. ಆಗುವ ಮೊದಲು ಕೂಡಾ ಕೃಷಿ ಇಲಾಖೆಯಲ್ಲಿ ಕೆಲಸ ಮಾಡಿದ್ದರು.

ದೇವರಾಜ್ ಆರ್. ತಮ್ಮ ಅವಧಿಯಲ್ಲಿ ಜನಾನುರಾಗಿಯಾಗಿ ಕೆಲಸ ಮಾಡಿದ್ದರಿಂದ ಅವರೇ ಎ.ಸಿ. ಯಾಗಿ ಮುಂದುವರಿಯಬೇಕಿತ್ತು ಎನ್ನುವ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿದೆ. ನೂತನ ಎ.ಸಿ. ಅಪರ್ಣಾ ರಮೇಶ್. ಆಂಧ್ರ ಮೂಲದವರು ಎನ್ನಲಾಗಿದೆ.
