ವರ್ಷ ಅಥವಾ ಒಂದು ಕಾಲಮಿತಿಯಲ್ಲಿ ಮಾಡುವ ಕಾರ್ಯಚಟುವಟಿಕೆಗಳ ಸಂಖ್ಯೆ ಗಿಂತ ಅದರ ಗುಣಮಟ್ಟ ಮಹತ್ವದ್ದು ಎಂದು ಅಭಿಪ್ರಾಯಪಟ್ಟಿರುವ ೩೭೧ ಲೈನ್ಸ್ ಬಹುಜಿಲ್ಲಾ ಅಧ್ಯಕ್ಷ ಬಿ.ಎಸ್.ರಾಜಶೇಖರಯ್ಯ ಲಯನ್ಸ್ ಕ್ಲಬ್ ಸೇರುವುದೆಂದರೆ ಮೋಜು-ಮಜಾಕ್ಕಾಗಿ ಎನ್ನುವ ಭಾವನೆ ಹೊರಗಿನವರಲ್ಲಿರಬಹುದು ಆದರೆ ಲೈನ್ಸ್ ಸೇರಿದವರಿಗೆ ಲಯನ್ಸ್ ಸೇರುವುದು ಮೋಜು ಮಜಾಕ್ಕಲ್ಲದೆ ಅರ್ಹರಿಗೆ ಅಗತ್ಯ ಸೇವೆ ನೀಡಲು ಎಂದು ಮನದಟ್ಟಾಗುತ್ತದೆ. ಸೇವಾ ಮನೋಭಾವದಿಂದ ಬರುವವರು ಮಾತ್ರ ಲೈನ್ಸ್ ಉಳಿದು, ಬೆಳೆಯುತ್ತಾರೆ ಎಂದರು.
ಸಿದ್ಧಾಪುರ ಲೈನ್ಸ್ ಬಾಲಭವನದಲ್ಲಿ ನಡೆದ ಬಾಲಿಕೊಪ್ಪ ಶಾಲೆಗೆ ರಸ್ತೆ ಸುರಕ್ಷತಾ ಸಲಕರಣೆ ವಿತರಿಸಿ, ಸ್ಥಳೀಯ ಆರೋಗ್ಯ ಸೇವಾ ಸಹಾಯಕಿಯರನ್ನು ಸನ್ಮಾನಿಸಿ ಮಾತನಾಡಿದ ಅವರು ಸಿದ್ಧಾಪುರದ ಲಯನ್ಸ್ ನಮ್ಮ ಬಹುಜಿಲ್ಲಾ ವ್ಯಾಪ್ತಿಯ ಮಾದರಿ ಘಟಕವಾಗಿದೆ. ಅಂಧರಿಗೆ, ಅಸಹಾಯಕರಿಗೆ, ಶಾಲಾ ಮಕ್ಕಳಿಗೆ ನೆರವಾಗುವ ಸಿದ್ಧಾಪುರದ ಲಯನ್ಸ್ ಸಂಸ್ಥೆಯ ಕೆಲಸ ಇತರರಿಗೂ ಮಾದರಿ ಎಂದು ಪ್ರಶಂಸಿಸಿದರು.
ಲಯನ್ಸ್ ನೀಡಿದ ಬ್ಯಾರಿಕೇಡ್ಗಳನ್ನು ಬಾಲಿಕೊಪ್ಪ ಮಾ.ಹಿ.ಪ್ರಾ.ಶಾಲೆಯ ಮೇಲ್ ಉಸ್ತುವಾರಿ ಸಮೀತಿ ಮತ್ತು ಶಿಕ್ಷಕರಿಗೆ ಹಸ್ತಾಂತರಿಸಲಾಯಿತು. ಸಿದ್ಧಾಪುರದ ತಾಲೂಕಾ ಆಸ್ಫತ್ರೆಯ ದಾದಿ ನಾಗರತ್ನಾ ಪಟಗಾರ್ ಮತ್ತು ಶಿರಳಗಿ ಆಶಾ ಕಾರ್ಯಕರ್ತೆ ಜ್ಯೋತಿ ಮಡಗಾಂವಕರ್ ರಿಗೆ ಸನ್ಮಾನಿಸಿ, ಗೌರವಿಸಲಾಯಿತು.
ಲಯನ್ಸ್ ಅಧ್ಯಕ್ಷ ಆರ್.ಎಂ. ಪಾಟೀಲ್, ಕಾರ್ಯದರ್ಶಿ ಕುಮಾರ್ ಗೌಡರ್ ಜೊತೆಗೆ ಅನೇಕರು ವೇದಿಕೆಯಲ್ಲಿದ್ದರು.