

ಇಂಡಿಯಾ ಒಕ್ಕೂಟ ಸರ್ಕಾರ ಸುಕನ್ಯಾ ಸಮೃದ್ಧಿ ಯೋಜನೆ (ಎಸ್ಎಸ್ ವೈ) ಯೋಜನೆಯ ಬಡ್ಡಿ ದರವನ್ನು ಏರಿಕೆ ಮಾಡಿದೆ.

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಸುಕನ್ಯಾ ಸಮೃದ್ಧಿ ಯೋಜನೆ (ಎಸ್ಎಸ್ ವೈ) ಯೋಜನೆಯ ಬಡ್ಡಿ ದರವನ್ನು ಏರಿಕೆ ಮಾಡಿದೆ.
ಹಣಕಾಸು ಸಚಿವಾಲಯದ ಸುತ್ತೋಲೆಯ ಪ್ರಕಾರ, ಸುಕನ್ಯಾ ಸಮೃದ್ಧಿ ಯೋಜನೆಯ ಠೇವಣಿಗೆ ಶೇ.8.2 ರಷ್ಟು ಬಡ್ಡಿ ದರ ಇರಲಿದೆ. ಈ ಹಿಂದೆ ಶೇ.8 ರಷ್ಟು ಬಡ್ಡಿ ನೀಡಲಾಗುತ್ತಿತ್ತು.
ಮುಖ್ಯವಾಗಿ ಅಂಚೆ ಕಚೇರಿಗಳಿಂದ ನಿರ್ವಹಿಸಲ್ಪಡುವ ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿ ದರವನ್ನು ಸರ್ಕಾರವು ಪ್ರತಿ ತ್ರೈಮಾಸಿಕದಲ್ಲಿ ತಿಳಿಸುತ್ತದೆ.
ಎಸ್ಎಸ್ ವೈ ನ ಪ್ರಯೋಜನಗಳು
- ಸರ್ಕಾರಿ ಬೆಂಬಲಿತ ಯೋಜನೆ ಇದಾಗಿದ್ದು, ಖಾತರಿ ಆದಾಯವನ್ನು ನೀಡುತ್ತದೆ.
- ಎಸ್ಎಸ್ ವೈ ಖಾತೆಯಡಿಯಲ್ಲಿ 1.50 ಲಕ್ಷ ರೂಪಾಯಿಗಳವರೆಗಿನ ಹೂಡಿಕೆಗೆ ತೆರಿಗೆ ವಿನಾಯಿತಿಯನ್ನು ಐಟಿ ಕಾಯ್ದೆಯ 80 ಸಿ ಅಡಿಯಲ್ಲಿ ಪಡೆಯಬಹುದಾಗಿದೆ.
- ಸುಕನ್ಯಾ ಸಮೃದ್ಧಿ ಯೋಜನೆಯಡಿ ಇಡಲಾದ ಬಡ್ಡಿ ತೆರಿಗೆ ಮುಕ್ತವಾಗಿರಲಿದೆ.
- ಸುಕನ್ಯಾ ಸಮೃದ್ಧಿ ಯೋಜನೆಯಡಿ ಒಂದು ಖಾತೆಗೆ ಒಂದು ವರ್ಷಕ್ಕೆ ಕನಿಷ್ಠ 250 ರೂಪಾಯಿಗಳಿಂದ ಗರಿಷ್ಠ 1.5 ಲಕ್ಷ ರೂಪಾಯಿಗಳನ್ನು ಹೂಡಿಕೆ ಮಾಡಬಹುದಾಗಿದೆ.
- ಸುಕನ್ಯಾ ಸಮೃದ್ಧಿ ಖಾತೆಯಿಂದ ಹಿಂತೆಗೆತ ಹಾಗೂ ಮೆಚ್ಯುರಿಟಿ ನಿಯಮಗಳು ಇಂತಿವೆ.
- ಹೆಣ್ಣುಮಗುವೊಂದು 18 ವರ್ಷ ದಾಟುತ್ತಿದ್ದಂತೆಯೇ ಆ ಮಗುವಿನ ಪೋಷಕರು ಆರ್ಥಿಕ ವರ್ಷದಲ್ಲಿ ಉಳಿದಿರುವ ಶೇ.50 ರಷ್ಟು ಹಣವನ್ನು ಖಾತೆಯಿಂದ ತೆಗೆಯಬಹುದಾಗಿದೆ. (ಕಪ್ರಡಾ)
