


ಚುನಾವಣೆ ಬರುತ್ತಿರುವಂತೆ ಹೋರಾಟಗಳು ಹೆಚ್ಚುತ್ತವೆಯೆ? ಹೌದು ಇಂಥದ್ದೊಂದು ಆರೋಪ, ಚರ್ಚೆ ಯಾವಾಗಲೂ ನಡೆಯುತ್ತಿರುತ್ತದೆ.
ಹೊಸವರ್ಷದ ದಿನ ಸಿದ್ಧಾಪುರ ವಲಯ ಅರಣ್ಯ ಅಧಿಕಾರಿಗಳ ಕಚೇರಿ ಮುಂದು ನಡೆದ ಪ್ರತಿಭಟನೆ ವೇಳೆ ಮಾತನಾಡಿದ ಬಿ.ಜೆ.ಪಿ. ಮುಖಂಡರಾದ ತಿಮ್ಮಪ್ಪ ಎಂ.ಕೆ., ಗುರುರಾಜ್ ಶಾನಭಾಗ, ಮಾರುತಿ ನಾಯ್ಕ, ರವಿ ಹೆಗಡೆ ಹೂವಿನಮನೆ, ತೋಟಪ್ಪ ನಾಯ್ಕ ಸೇರಿದಂತೆ ಬಹುತೇಕರು ಅತಿಕ್ರಮಣ ರೈತರಿಗೆ ಅನ್ಯಾಯವಾಗುತ್ತಿರುವ ಬಗ್ಗೆ ಪ್ರಸ್ಥಾಪಿಸಿ ಅರಣ್ಯ ಅಧಿಕಾರಿಗಳು ಆಡಳಿತ ಪಕ್ಷದ ಪರವಾಗಿ ಕೆಲಸಮಾಡುತಿದ್ದಾರೆ ಎಂದು ಆರೋಪಿಸಿದರು. ಮುಂದುವರಿದು ಅರಣ್ಯ ಭೂಮಿ ಸಾಗುವಳಿದಾರರ ಪರ ಹೋರಾಟ ಮಾಡುತ್ತಿರುವವರ ಬಗ್ಗೆ ವಿರೋಧಿಸಿ ಅವರು ರಾಜಕೀಯ ಪ್ರೇರಿತ ಹೋರಾಟ ಮಾಡುತ್ತಾರೆ. ಬಾಧಿತರಿಗೆ ಸಂಪರ್ಕಕ್ಕೂ ಸಿಗುವುದಿಲ್ಲ ಎಂದು ಆರೋಪಿಸಿದರು.
ಈ ಪ್ರತಿಭಟನೆ ನಂತರ ಪ್ರತಿಕ್ರೀಯೆ ನೀಡಿದ ರೈತ ಮುಖಂಡ ವೀರಭದ್ರ ನಾಯ್ಕ ಮತ್ತು ರಾಘವೇಂದ್ರ ಕಾವಂಚೂರು ತೀಕ್ಷ್ಣವಾಗಿ ಪ್ರತಿಕ್ರೀಯಿಸಿ ಹಿಂದೆ ನೀವಿದ್ದಾಗ ಏನು ಮಾಡಿದ್ದೀರಿ ಶಿರಸಿ-ಕ್ಷೇತ್ರ ಮತ್ತು ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಕಳೆದ ೨೫ ವರ್ಷಗಳಿಂದ ನೀವೇ ಪ್ರತಿನಿಧಿಗಳು ಎರಡೂ ಕಡೆ ನಿಮ್ಮದೇ ಪಕ್ಷದ ಆಡಳಿತ ಇದ್ದ ಸಂದರ್ಭಗಳಲ್ಲಿ ನಿಮ್ಮ ಕೊಡುಗೆ ಏನು?
ವಿಧಾನಸಭೆ, ಸಂಸತ್ ಗಳಲ್ಲಿ ಉಳ್ಳವರ ಪರ ವಕಾಲತ್ತು ವಹಿಸುವ ಬಿ.ಜೆ.ಪಿ. ಹೋರಾಟಗಾರರು ಪ್ರಾಮಾಣಿಕ ಕೆಲಸಗಾರರ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಜಾಡಿಸಿದರು.
ಉತ್ತರ ಕನ್ನಡ ಜಿಲ್ಲೆಯ ಸೊಪ್ಪಿನ ಬೆಟ್ಟ ಸಮಸ್ಯೆ ಸಂಸತ್, ವಿಧಾನಸಭೆ ಗಳಲ್ಲಿ ಚರ್ಚೆಯಾಗುತ್ತವೆ, ಅರಣ್ಯ ಅತಿಕ್ರಮಣದ ಬಗ್ಗೆ ಮಲತಾಯಿ ಧೋರಣೆತೋರಿರುವ ಬಿ.ಜೆ.ಪಿ. ಹೋರಾಟಗಾರರ ಬಗ್ಗೆ ಮಾತನಾಡುವುದು ಅವರ ಅವಿವೇಕದ ಪರಮಾವಧಿ ಉತ್ತರ ಕನ್ನಡ, ಶಿರಸಿ ಕ್ಷೇತ್ರದಲ್ಲಿ ಬಿ.ಜೆ.ಪಿ.ಯಿಂದ ಜನಪ್ರತಿನಿಧಿಯಾದವರು ಅತಿಕ್ರಮಣದಾರರ ಪರವಾಗಿ ಮಾತನಾಡಿದ್ದೇ ಇಲ್ಲ ಈಗ ಸಂಸತ್ ಚುನಾವಣೆ ಹಿನ್ನಲೆಯಲ್ಲಿ ಹೋರಾಟಗಾರರ ವಿರುದ್ಧ ಮಾತನಾಡಿದರೆ ಜನರೇ ನಿಮಗೆ ಉತ್ತರ ಕೊಡುತ್ತಾರೆ ಎಂದು ವಿವರಿಸಿದರು.
ಉತ್ತರ ಕನ್ನಡ ಜಿಲ್ಲೆಯ ಜ್ವಲಂತ ಸಮಸ್ಯೆಗಳ ವಿಚಾರದಲ್ಲಿ ಪಕ್ಷಾತೀತವಾಗಿ ರಾಜಕಾರಣ ನಡೆದಿದೆ. ಸ್ಫೀಕರ್ ಕೇಂದ್ರ ಮಂತ್ರಿಗಳಾದವರು ಕೂಡಾ ಅರಣ್ಯ ಅತಿಕ್ರಮಣದಾರರ ಪರವಾಗಿ ಸಂಸತ್, ಶಾಸನಸಭೆಗಳಲ್ಲಿ ಮಾತನಾಡಿಲ್ಲ, ಅತಿಕ್ರಮಣಹೋರಾಟ ಜೀವಂತವಿದ್ದರೂ ಹೋರಾಟಗಾರರ ಬೇಡಿಕೆಗಳಿಗೆ ಸ್ಪಂದನ ಸಿಕ್ಕಿಲ್ಲ. ಬಿ.ಜೆ.ಪಿ. ಪ್ರತಿಭಟನೆಯಲ್ಲಿ ಹೋರಾಟಗಾರರ ವಿರುದ್ಧ ಮಾತನಾಡಿರುವುದು ಈಗ ಚರ್ಚೆಯ ವಿಷಯವಾಗಿದೆ. ಈ ವಿಚಾರ ಹೊಸ ವರ್ಷದ,ಹೊಸ ವಾರದ ಬಹುಚರ್ಚೆಯ ವಿಷಯವಾಗಿರುವುದಂತೂ ವಾಸ್ತವ.
