‘ನಮ್ಮ ಸಿನಿಮಾಗಳು, ನಮ್ಮ ನೆಲ ಮತ್ತು ಸಂಪ್ರದಾಯಗಳ ಕುರಿತೇ ಹೆಣೆದುಕೊಂಡಿದ್ದು, ಪ್ರಪಂಚದೊಂದಿಗೆ ನಿರಂತರವಾಗಿ ಪ್ರತಿಧ್ವನಿಸುತ್ತವೆ. ‘ನಾನು ಮಧ್ಯ ಕರ್ನಾಟಕದ (ಬಯಲು ಸೀಮೆ) ಮೂಲದವನು. ಕೆರೆ ಬೇಟೆ ಜಾನಪದ ಕ್ರೀಡೆ ನನಗೆ ಪರಿಚಿತವಿಲ್ಲ. ಸಿನಿಮಾಗಳ ಮೂಲಕ ಸ್ಥಳೀಯ ಕಥೆಗಳನ್ನು ವೀಕ್ಷಿಸುವುದು ಅದ್ಭುತ ಅನುಭವವಾಗಿದೆ ಎಂದು ನಟ ಧನಂಜಯ್ ತಿಳಿಸಿದರು.
ದೇಸಿ ಸೊಗಡಿನ ಕಥೆ ಹೊಂದಿದ್ದ ಸಿನಿಮಾ ಕಾಂತಾರ (2022) ಸಾಕಷ್ಟು ಹಿಟ್ ಆಯಿತು. ಅದೇ ರೀತಿ ನಂತರ ಬಂದ ಟಗರು ಪಲ್ಯ (2023) ಚಿತ್ರಕ್ಕೂ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಸದ್ಯ, ಬಾಕ್ಸ್ ಆಫೀಸ್‌ನಲ್ಲಿ ಚಾಂಪಿಯನ್ ಆಗಿರುವ ಕಾಟೇರ ಕೂಡ ಸ್ಥಳೀಯ ಕಥೆಯನ್ನು ಒಳಗೊಂಡಿದ್ದಂತಹ ಚಿತ್ರವಾಗಿದೆ. ಈ ಪಟ್ಟಿಗೆ ಸೇರ್ಪಡೆಗೊಳ್ಳಲಿರುವ ಮುಂಬರುವ ಚಿತ್ರ ‘ಕೆರೆಬೇಟೆ’.
ರಿಷಬ್ ಶೆಟ್ಟಿಯವರ ಕಾಂತಾರವು ಕಂಬಳ ಮತ್ತು ಭೂತ ಆರಾಧನೆಯಂತಹ ಸಾಂಪ್ರದಾಯಿಕ ಕರಾವಳಿ ಕರ್ನಾಟಕದ ಸಂಸ್ಕೃತಿಗಳ ಹಿನ್ನೆಲೆಯಲ್ಲಿ ಮನುಷ್ಯ ಮತ್ತು ಪ್ರಕೃತಿಯ ನಡುವಿನ ಘರ್ಷಣೆಯನ್ನು ಚಿತ್ರಿಸುತ್ತದೆ. ತರುಣ್ ಸುಧೀರ್ ನಿರ್ದೇಶನದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಕಾಟೇರ ಸಿನಿಮಾ ರೈತರ ಹೋರಾಟಗಳನ್ನು ತೆರೆ ಮೇಲೆ ತಂದಿದೆ. ಅದೇ ರೀತಿ, ನಟ ಗೌರಿಶಂಕರ್ ನಟನೆಯ ‘ಕೆರೆಬೇಟೆ’ ಕೂಡ ಬೇಸಿಗೆಯಲ್ಲಿ ಕರ್ನಾಟಕದ ಮಲೆನಾಡು ಪ್ರದೇಶದಲ್ಲಿ ನಡೆಯುವ ವಾರ್ಷಿಕ ಸಾಂಪ್ರದಾಯಿಕ ಮೀನುಗಾರಿಕೆ ಉತ್ಸವವಾದ ಕೆರೆ ಬೇಟೆಯ ಸುತ್ತ ಸುತ್ತುತ್ತದೆ. ಚಿತ್ರದ ಟೀಸರ್ ಅನ್ನು ಜನವರಿ 3 ರಂದು ನಟ ಧನಂಜಯ್ ಬಿಡುಗಡೆ ಮಾಡಿದ್ದಾರೆ.
ಸಮಾರಂಭದಲ್ಲಿ ಮಾತನಾಡಿದ ಧನಂಜಯ್, ‘ನಮ್ಮ ಸಿನಿಮಾಗಳು, ನಮ್ಮ ನೆಲ ಮತ್ತು ಸಂಪ್ರದಾಯಗಳ ಕುರಿತೇ ಹೆಣೆದುಕೊಂಡಿದ್ದು, ಪ್ರಪಂಚದೊಂದಿಗೆ ನಿರಂತರವಾಗಿ ಪ್ರತಿಧ್ವನಿಸುತ್ತವೆ. ‘ನಾನು ಮಧ್ಯ ಕರ್ನಾಟಕದ (ಬಯಲು ಸೀಮೆ) ಮೂಲದವನಾಗಿದ್ದರೂ, ಕೆರೆ ಬೇಟೆ ಜಾನಪದ ಕ್ರೀಡೆ ನನಗೆ ಪರಿಚಿತವಿಲ್ಲ. ಸಿನಿಮಾಗಳ ಮೂಲಕ ನಮ್ಮ ಸಮಾಜದಲ್ಲಿ ಆಳವಾಗಿ ಬೇರೂರಿರುವ ಸ್ಥಳೀಯ ಕಥೆಗಳನ್ನು ವೀಕ್ಷಿಸುವುದು ಅದ್ಭುತ ಅನುಭವವಾಗಿದೆ. ನಮ್ಮ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ತೋರಿಸುವ ಹೆಚ್ಚಿನ ಕಥೆಗಳನ್ನು ನಾವು ರಚಿಸಬೇಕು’ ಎಂದರು.
ನಿರ್ದೇಶಕ ದಿನಕರ ತೂಗುದೀಪ ಕೂಡ ಹಳ್ಳಿ ಜೀವನವನ್ನು ಅತ್ಯುತ್ತಮವಾಗಿ ಸೆರೆಹಿಡಿದಿರುವ ಕೆರೆಬೇಟೆ ಚಿತ್ರತಂಡವನ್ನು ಶ್ಲಾಘಿಸಿದರು. ಕೋವಿಡ್-19 ಸಾಂಕ್ರಾಮಿಕದ ಮೊದಲ ಅಲೆಯ ನಡುವೆಯೇ ಚಿತ್ರ ಸೆಟ್ಟೇರಿದ ಬಗ್ಗೆ ಶ್ಲಾಘಿಸಿದರು. ಬೆಂಗಳೂರಿನ ಮಲ್ಲತ್ತಳ್ಳಿ ಕೆರೆಯಲ್ಲಿ ನಡೆದ ಟೀಸರ್ ಬಿಡುಗಡೆ ಸಮಾರಂಭದಲ್ಲಿ ಮಲೆನಾಡು ಭಾಗದ ಸ್ಥಳೀಯರು ತಮ್ಮ ಸಾಂಪ್ರದಾಯಿಕ ಕ್ರೀಡೆಯನ್ನು ಪ್ರಸ್ತುತಪಡಿಸಿದರು.
ಟೀಸರ್ ಬಿಡುಗಡೆ ಸಮಾರಂಭದಲ್ಲಿ ಉಪಸ್ಥಿತರಿದ್ದ ಬರಹಗಾರ ಜಡೇಶ್ ಹಂಪಿ ಅವರು ತಮ್ಮ ಹಳ್ಳಿಯಲ್ಲಿನ ಹೊಲೆಮಾರಿ ಸಂಪ್ರದಾಯದಂತೆ ಕಾಟೇರ ಸಿನಿಮಾಗಾಗಿ ವರ್ಷಕ್ಕೊಮ್ಮೆ ನಡೆಯುವ ಗ್ರಾಮ ಜಾತ್ರೆ ಮತ್ತು ಪ್ರಾಣಿ ಬಲಿಯನ್ನು ಎರವಲು ಪಡೆದಿರುವುದಾಗಿ ಹೇಳಿದರು.
ಗೂಗ್ಲಿ ನಿರ್ದೇಶಕ ಪವನ್ ಒಡೆಯರ್, ತಮ್ಮ ನೆಲದ ಥೀಮ್ ಅನ್ನು ಜಾಗತಿಕವಾಗಿ ಸಂಪರ್ಕಿಸುವ ಸಿನಿಮಾಗಳನ್ನು ಶ್ಲಾಘಿಸಿದರು. ರಾಜಾ ಹುಲಿ ಸಿನಿಮಾದ ನಿರ್ದೇಶಕ ಗುರು ದೇಶಪಾಂಡೆ, ಅವರ ಜೀವನ ಮತ್ತು ಸ್ಥಳೀಯ ಸಂಸ್ಕೃತಿಗಳಲ್ಲಿ ಬೇರೂರಿರುವ ಕಥೆಗಳಿಗೆ ಪ್ರೇಕ್ಷಕರ ಬಾಂಧವ್ಯವನ್ನು ಎತ್ತಿ ತೋರಿಸಿದರು.
ಕೆರೆಬೇಟೆ ಸಿನಿಮಾ ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದು, ಚಿತ್ರದಲ್ಲಿ ಗೌರಿಶಂಕರ್, ಹೊಸಬರಾದ ಬಿಂದು ಶಿವರಾಮ್, ಗೋಪಾಲ್ ದೇಶಪಾಂಡೆ, ಸಂಪತ್ ಮತ್ತು ಹರಿಣಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಕೆರೆಬೇಟೆಗೆ ಗಗನ್ ಬದರಿಯಾ ಸಂಗೀತ ನೀಡಿದ್ದಾರೆ. (ಕಪ್ರಡಾ)