


ಸಿದ್ದಾಪುರ
ಶಾಲಾ ಸಂದರ್ಶನದ ಸಪ್ತಾಹದ ಅಂಗವಾಗಿ ಶಿರಸಿ ಶೈಕ್ಷಣಿಕ ಜಿಲ್ಲೆಯ ಉಪನಿರ್ದೇಶಕರ ಕಚೇರಿಯ ಕೇತ್ರ ಶಿಕ್ಷಣಾಧಿಕಾರಿ ಎಂ.ಎಚ್.ನಾಯ್ಕ ಅವರ ತಂಡ ತಾಲೂಕಿನ ಹಾರ್ಸಿಕಟ್ಟಾ ಅಶೋಕ ಪ್ರೌಢಶಾಲೆಗೆ ಭೇಟಿ ನೀಡಿ ಶೈಕ್ಷಣಿಕ ಪ್ರಗತಿಯ ಕುರಿತು ಪರಿಶೀಲನೆ ನಡೆಸಿದರು.
ಎಲ್ಲ ಶಿಕ್ಷಕರ ದಾಖಲೆಯ ಪರಿಶೀಲನೆ, ೮,೯ಹಾಗೂ ೧೦ನೇ ತರಗತಿಗಳಿಗೆ ಭೇಟಿ ನೀಡಿ ಮುಖ್ಯಾಧ್ಯಾಪಕರಿಗೆ ಹಾಗೂ ಸಹಶಿಕ್ಷಕರಿಗೆ ಮಾರ್ಗದರ್ಶನ ನೀಡಿದರು.
ಕ್ರಿಯಾಶೀಲ ಶಿಕ್ಷಕವರ್ಗ, ಶಿಸ್ತುಬದ್ಧ ವಿದ್ಯಾರ್ಥಿವೃಂದದವರನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದರು.
ತಂಡದಲ್ಲಿ ಎಂ.ಎಂ.ಹೆಗಡೆ, ರೂಪೇಶ ಚವ್ಹಾಣ, ಮಹಾಬಲೇಶ್ವರ ಹೆಗಡೆ ಇದ್ದರು. ಮುಖ್ಯಾಧ್ಯಾಪಕ ರಾಜೇಂದ್ರ ಎ.ಕಾಂಬ್ಳೆ, ಶಿಕ್ಷಕರಾದ ಕವಿತಾ ಬಿ.ಎಸ್, ಮಾಧವ ನಾಯ್ಕ, ಶ್ರೀಪಾದ ಹೆಗಡೆ, ಸುಬ್ರಹ್ಮಣ್ಯ ಗೌಡ, ಸುಷ್ಮಿತಾ ನಾಯ್ಕ, ದಾಕ್ಷಾಯಣಿ, ಹಾಗೂ ಬಸವರಾಜ ಪೂರಕ ಮಾಹಿತಿ ನೀಡಿದರು.
