


ಸಿದ್ದಾಪುರ ಕೋರ್ಟ್ ಅಂಚೆಕಛೇರಿಯ ಪೊಸ್ಟ್ ಮ್ಯಾನ್ ಆಗಿ ಕಾರ್ಯನಿರ್ವಹಿಸುತಿದ್ದ ಕೇಶವ ವೀರಭದ್ರ ನಾಯ್ಕ ತಮ್ಮ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಸುಂಕತ್ತಿ ಮೂಲದ ಕೇಶವನಾಯ್ಕ ತಾತ್ಕಾಲಿಕ ಪೋಸ್ಟ್ ಮ್ಯಾನ್ ಆಗಿ ಸೇವೆ ಸಲ್ಲಿಸುತಿದ್ದರು.
ಗುರುವಾರ ಮಧ್ಯಾಹ್ನದ ವೇಳೆ ವಿಷಕುಡಿದು ಮನೆಯ ಜಂತಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ಮೃತ ಕೇಶವ ಪತ್ನಿ ಲಲಿತಾ ಕೇಶವ ನಾಯ್ಕ ಇಂದು ಸಿದ್ಧಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಕ್ರೀಡಾ ನಿರ್ಣಾಯಕ, ಜನಸ್ನೇಹಿಯಾಗಿದ್ದ ಕೇಶವ ನಾಯ್ಕ ಆತ್ಮಹತ್ಯೆಯ ಪಕ್ಕಾ ಕಾರಣ ತಿಳಿದುಬಂದಿಲ್ಲ. ಮದ್ಯ ವ್ಯಸನಿಯಾಗಿದ್ದ ಕೇಶವ ಅಂಗನವಾಡಿ ಕಾರ್ಯಕರ್ತೆ ಲಲಿತಾ ನಾಯ್ಕ ಜೊತೆ ಕುಡಿದು ಬಂದು ಜಗಳವಾಗುತಿದ್ದ ಬಗ್ಗೆ ಪೊಲೀಸ್ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಮೃತ ಕೇಶವ ಓರ್ವ ಪುತ್ರ, ಪತ್ನಿ ಸೇರಿದಂತೆ ಅಪಾರ ಸ್ನೇಹಿತರು, ಬಂಧು ಬಳಗವನ್ನು ಅಗಲಿದ್ದಾರೆ.
