ಅನಂತ ಬಣದ ಮುಖ ಕರ್ರಗೆ….. ಕಾಗೇರಿ ಬಣದ ಮುಖ ಕೆಂಪಗೆ…. ಇದು ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿ.ಜೆ.ಪಿ. ವಿದ್ಯಮಾನ!

ರಾಜ್ಯ ಬಿ.ಜೆ.ಪಿ.ಯ ಫೈರ್‌ ಬ್ರಾಂಡ್‌, ಪ್ರಖರ ಹಿಂದುತ್ವವಾದಿ ಎನ್ನಲಾಗುವ ಕೇಂದ್ರದ ಮಾಜಿ ಸಚಿವ, ಸಂಸದ ಅನಂತಕುಮಾರ ಹೆಗಡೆ ಬಿ.ಜೆ.ಪಿ.ಗೆ ಮತಬಾಚುವ ಭಾಷಣ ಕಾರ ಎನ್ನುವ ಹೆಗ್ಗಳಿಕೆ ಇದೆ. ಇದೇ ಅನಂತಕುಮಾರ ಹೆಗಡೆ ಈ ವರ್ಷ ಬಿ.ಜೆ.ಪಿ.ಗೆ ಕಗ್ಗಂಟಾಗಿರುವ ಕತೆ ಇದು.


ಸತತ ನಾಲ್ಕುಬಾರಿ ಒಟ್ಟೂ ೫ ಬಾರಿ ಸಂಸದರಾಗಿರುವ ಅನಂತಕುಮಾರ ಹೆಗಡೆ ಪ್ರತಿ ಬಾರಿ ಚುನಾವಣೆಯ ಮೊದಲು ಒಂದು ಹುಸಿ ಬಾಂಬ್‌ ಪ್ರಯೋಗಿಸುವ ಪ್ರವೃತ್ತಿಯನ್ನಿಟ್ಟುಕೊಂಡಿದ್ದಾರೆ. ಅದೇನೆಂದರೆ ಇನ್ನೇನು ಲೋಕಸಭೆ ಚುನಾವಣೆ ಸಮೀಪಿಸಬೇಕು ಅದರ ಸರಿ ಸುಮಾರು ಆರು ತಿಂಗಳ ಮೊದಲು ಈ ಬಾರಿ ನಾನು ಚುನಾವಣೆಗೆ ಸ್ಫರ್ಧಿಸುವುದಿಲ್ಲ ಎಂದು ತನ್ನ ಹಿಂಬಾಲಕರಿಂದ ಹೇಳಿಸಿಬಿಡುತ್ತಾರೆ.
ಈ ಹೇಳಿಕೆ ಆಧರಿಸಿ ಇಲ್ಲ ಈ ಬಾರಿಯೂ ನೀವೆ ಸ್ಫರ್ಧಿಸಬೇಕು ಎಂದು ಅವರ ಶಿಷ್ಯರೋ. ಪರಿವಾರವೋ ಒತ್ತಾಯಿಸುತ್ತೆ. ಈ ಪ್ರಕ್ರೀಯೆಯ ಜಾಣ ತಂತ್ರ ಈ ಹಿಂದಿನ ಮೂರು ಲೋಕಸಭಾ ಚುನಾವಣೆಗಳಿಂದಲೂ ಪ್ರಯೋಗವಾಗುತ್ತಾ ಫಲಕೊಡುತ್ತಲೂ ಇತ್ತು!.

ವಿಚಿತ್ರವೆಂದರೆ…. ಈ ಬಾರಿ ಹಿಂದಿನಂತಾಗಲಿಲ್ಲ. ಹಳೆ ರೂಢಿಯಂತೆ ಅನಂತಕುಮಾರ ಹೆಗಡೆ ಬಣ ಈ ಬಾರಿ ಅನಂತಕುಮಾರ ಲೋಕಸಭೆಗೆ ಸ್ಫರ್ಧಿಸುವುದು ಡೌಟು ಎಂದು ಮುಗುಳ್ನಕ್ಕಿದ್ದೇ ಪಕ್ಷ ಅಂದರೆ ಪಕ್ಷದ ಪ್ರಮುಖರು ಹಾಗಾದರೆ ವಿಧಾನಸಭೆಯ ಮಾಜಿ ಸ್ಫೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಇದ್ದಾರೆ ಎಂದು ಬಿಟ್ಟರು.
ಅನಂತ ಬಣದ ಮುಖಗಳು ಕರ್ರಗಾಗತೊಡಗಿದ್ದೇ ಆಗ.ಪ್ರತಿಚುನಾವಣೆಯ ಮೊದಲು ಅನಂತ ಕುಮಾರ್‌ ರಿಗೆ ಆಸಕ್ತಿ ಇಲ್ಲ ಎನ್ನುತ್ತಲೇ ಯಾಕೆ ನೀವಲ್ಲದೆ ಮತ್ತ್ಯಾರು? ಎನ್ನುತ್ತಿದ್ದ ಪಕ್ಷ, ಪರಿವಾರ ಈ ಬಾರಿ ಉಲ್ಟಾ ಹೊಡೆದದ್ದೇ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಮೀಕರಣವೇ ಬದಲಾಗುವಂತಾಯ್ತು?

ಪ್ರತಿಬಾರಿ ಹುಸಿಬಾಂಬ್‌ ಪ್ರಯೋಗಿಸಿ ಗೆಲ್ಲುತಿದ್ದ ಅನಂತಕುಮಾರ ನಡೆ ಅನುಸರಿಸಿದ ಉತ್ತರ ಕನ್ನಡ ಬಿ.ಜೆ.ಪಿ.ಯ ಇನ್ನೊಂದು ಬಣ ಈ ಬಾರಿ ಅನಂತಕುಮಾರ ಡೌಟು ಎನ್ನುತ್ತಲೇ ಎದ್ದು ನಿಂತು ಹಾಗಾದರೆ ನಾನು ಎನ್ನಬೇಕೆಂದು ಪೂರ್ವತಯಾರಿ ಮಾಡಿಕೊಂಡಿದ್ದ ಕಾಗೇರಿ ಬಣದ ಎಣಿಕೆಯಂತೆ ಎಲ್ಲವೂ ನಡೆದಿದ್ದೇ ಬಿ.ಜೆ.ಪಿ.ಯ ಕಗ್ಗಂಟಿನ ಮೂಲ ಮತ್ತು ಮುಖ್ಯ ಕಾರಣ.


ಪ್ರಖರ ಭಾಷಣ ಬಿಟ್ಟು ಬೇರೆ ಏನೂ ಮಾಡದ ನಿರಂತರ ಸಂಸದ ಅನಂತಕುಮಾರ ಹೆಗಡೆ ಪರವಾಗಿ ಸಾರ್ವಜನಿಕ ಅಭಿಪ್ರಾಯವಿಲ್ಲ. ಹಕ್ಕಿ ಕುಳಿತಿತ್ತು ಕೋಲು ಕಳಚಿತ್ತು ಎನ್ನುವಂತೆ ಅನಂತಕುಮಾರ ತನ್ನ ಲಾಗಾಯ್ತಿನ ಚಾಣಾಕ್ಷತೆ ಪ್ರದರ್ಶಿಸಲು ಹೋಗಿ ಪಿಗ್ಗಿ ಬಿದ್ದದ್ದೇ ಇಲ್ಲಿ.
 ಉತ್ತರ ಕನ್ನಡ ಜಿಲ್ಲೆಯ ಲೋಕಸಭೆ ಚುನಾವಣೆಯ ಅಭ್ಯರ್ಥಿಯ ವಿಚಾರದಲ್ಲಿ ಸಂತೋಷ್‌ ಜಿ ಬಣ ಒಬ್ಬ ವ್ಯಕ್ತಿಯನ್ನು ಗುರುತಿಸಿತ್ತಂತೆ ಆ ವ್ಯಕ್ತಿ ನೂತನ ವಕ್ತಾರ ಹರಿಪ್ರಸಾದ ಕೋಣೆಮನೆ ಎನ್ನುವ ಅಂಶ ಈಗಲೂ ಖಚಿತಪಟ್ಟಿಲ್ಲ. ಆದರೆ ಸಂತೋಷಜಿ ಬಣ ಒಬ್ಬ ಅಭ್ಯರ್ಥಿಯನ್ನು ತಯಾರು ಮಾಡುತಿದ್ದಾಗ ಬಿ.ಜೆ.ಪಿ.ಯ ಹಿರಿಯ ನಾಯಕರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಈ ಬಾರಿ ನಾನು ಕೇಂದ್ರಕ್ಕೆ ಹೋಗಲು ಸಿದ್ಧನಾಗುತಿದ್ದೇನೆ ಎಂದುಬಿಟ್ಟರು.


ಹೇಳಿಕೇಳಿ ಅನಂತಕುಮಾರ ಹೆಗಡೆ ಮತ್ತು ವಿಶ್ವೇಶ್ವರ ಹೆಗಡೆಯವರಿಗೆ ಮೊದಲಿನಿಂದಲೂ ಅಂಥಾ ಉತ್ತಮ ಸಂಬಂಧವೇ ಇಲ್ಲ. ಈ ಬಾರಿ ಅನಂತಕುಮಾರರಿಗೆ ಆಸಕ್ತಿ ಇಲ್ಲದಿದ್ದರೆ ನಾನು ತಯಾರಾಗುತ್ತೇನೆ ಎಂದು ಪಕ್ಷದ ನಾಯಕರಿಗೆ ಹೇಳಿದ್ದ ವಿಶ್ವೇಶ್ವ ರ ಹೆಗಡೆಯವರ ಚುನಾವಣೆ ತಯಾರಿ ಅನಂತಕುಮಾರ ಹೆಗಡೆಯವರಿಗೆ ಬಿಸಿತುಪ್ಪವಾಗಿ ಪರಿಣಮಿಸಿದೆ.


 ಇತ್ತ ಜಿಲ್ಲೆಯಲ್ಲಿ ಈ ಇಬ್ಬರು ಹಿರಿಯ ಮುಖಂಡರ ಟಿಕೇಟ್‌ ಮೇಲಾಟವಾದರೆ, ಜಿಲ್ಲೆಯಲ್ಲಿ ಕಾರವಾರದ ರೂಪಾಲಿ ನಾಯ್ಕ, ನಾಗರಾಜ್‌ ನಾಯಕ, ರಾಜ್ಯ ಬಿ.ಜೆ.ಪಿ. ಕಾರ್ಯಕಾರಿ ಸಮೀತಿ ಮಾಜಿ ಸದಸ್ಯ ಕೆ.ಜಿ. ನಾಯ್ಕ ಇವರ ನಡುವೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಮೂಲದ ಚಕ್ರವರ್ತಿ ಸೂಲಿಬೆಲೆ, ಇವರೆಲ್ಲರ ಜೊತೆಗೆ ಮೋದಿ ಅಭಿಮಾನಿ ಅನಂತಮೂರ್ತಿ ಹೆಗಡೆ ಉತ್ತರ ಕನ್ನಡ ಲೋಕಸಭೆಯ ಬಿ.ಜೆ.ಪಿ. ಅಭ್ಯರ್ಥಿಯಾಗಲು ತುದಿಗಾಲ ಮೇಲೆ ನಿಂತಿದ್ದಾರೆ. ಈ ಬೆಳವಣಿಗೆಗಳೆಲ್ಲಾ ಅನಿರೀಕ್ಷಿತ ಎನ್ನುವಂತೆ ಸಹಜವಾಗಿ ಘಟಿಸುತ್ತಿರುವುದರಿಂದ ಕೆಲಸಕ್ಕೆ ಕರಿಬ್ಯಾಡ್ರಿ, ಊಟಕ್ಕೆ ಮರಿಬ್ಯಾಡ್ರಿ ಎನ್ನುವಂತೆ ಪ್ರತಿಬಾರಿ ಅನಾಯಾಸವಾಗಿ ಟಿಕೇಟ್‌ ಪಡೆದು ಭಾಷಣ, ಗಿಮಿಕ್‌ ಗಳಿಂದಲೇ ಗೆಲ್ಲುತಿದ್ದ ಅನಂತಕುಮಾರ ಹೆಗಡೆ ನಡವಳಿಕೆ, ವರ್ತನೆ, ದಾಷ್ಟ್ಯ ಈಗ ಬಿ.ಜೆ.ಪಿ. ಪಾಲಿಗೆ ಕಗ್ಗಂಟಾಗಿರುವುದಂತೂ ಸತ್ಯ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಮತ್ತೆ ಶುರುವಾದ ಮಂಗನ ಜ್ವರ… ಮಲೆನಾಡಿಗೆ ಆತಂಕ ತಂದ ಕಾಯಿಲೆ

ಪ್ರತಿ ಬೇಸಿಗೆಗೆ  ಪ್ರಾರಂಭವಾಗುವ ಮಂಗನ ಖಾಯಿಲೆ ಈ ವರ್ಷ ತನ್ನ ಪಯಣ ಪ್ರಾರಂಭಿಸಿದೆ. ಈ ವರೆಗೆ ರಾಜ್ಯದಲ್ಲಿ ಒಟ್ಟೂ ೫೭ ಮಂಗನ ಜ್ವರದ ಪ್ರಕರಣಗಳು...

ನಿನ್ನೆ ಇಂದು ನಾಳೆ….. ನದಿ ತಿರುವು ಪಾದಯಾತ್ರೆ & ಹೋರಾಟ

ನದಿತಿರುವು ಯೋಜನೆ ಸೇರಿದಂತೆ ಉತ್ತರಕನ್ನಡಕ್ಕೆ ಯಾವುದೇ ಬೃಹತ್‌ ನೀರಾವರಿ ಯೋಜನೆ ಬೇಡ ಎಂದು ಉತ್ತರ ಕನ್ನಡ ಜಿಲ್ಲೆಯ ಜನಪ್ರತಿನಿಧಿಗಳು ದೆಹಲಿಯಲ್ಲಿ ಕೇಂದ್ರ ಜಲಶಕ್ತಿ ಸಚಿವ...

ಗುರುವಿನ ಗುಲಾಮಳಾದವಳು ಸ್ವತ: ಭಾವನನ್ನೇ ಮುಗಿಸಿಬಿಟ್ಟಳು…!

ಫೆ.೦೨ ರ ರಾತ್ರಿ ಸಮಯ ಇನ್ನೇನು ತನ್ನ & ತಮ್ಮನ ಮಕ್ಕಳ ಜೊತೆ ಊಟ ಮಾಡಬೇಕು ಅಷ್ಟೊತ್ತಿಗೆ ಹೊರಗಿನಿಂದ ಬಂದ ಆಗಂತುಕರು ವಸಂತ ನಾಯ್ಕ...

ಭುವನಗಿರಿ ತೇರು & ಕೋಲಶಿರಸಿಯಲ್ಲಿ ಜೋರು!

ಸಿದ್ಧಾಪುರ, ಇಲ್ಲಿಯ ಪ್ರಸಿದ್ಧ ಕ್ಷೇತ್ರ ಭುವನಗಿರಿಯ ಮಹಾ ರಥೋತ್ಸವ ಫೆ.೨ಮತ್ತು ಮೂರರಂದು ನಾನಾ ಧಾರ್ಮಿಕ ಕಾರ್ಯಗಳೊಂದಿಗೆ ನಡೆಯಲಿದೆ. ಕೋಲಶಿರ್ಸಿಯಲ್ಲಿ— ಇಲ್ಲಿಯ ಕೋಲಶಿರ್ಸಿಯಲ್ಲಿ ನೂತನವಾಗಿ ನಿರ್ಮಾಣವಾಗಿರುವ...

ಸುಳಿಮುರಕಿ ದುರಂತ…ಹಣ-ಹಣ, ಜಣಜಣಹಣಕ್ಕಾಗಿ ಹೋಯ್ತು ಎರಡು ಜೀವ..!! 

ಬಂಗಾರದ ಹಲ್ಲಿನ ಬಾಂಬೆಸ್ಟೋರಿಯ ಅಪ್ಪನ ಮಗ ಕುಖ್ಯಾತ! ಆತ ಮಾಡದ ಅಡ್ಡ ಕಸುಬುಗಳಿಲ್ಲ,, ಸಾರಾಯಿ, ಗಾಂಜಾ, ಕಳ್ಳನಾಟಾ ಒಂದೆ-ಎರಡೆ…!  ದುಡ್ಡಿನ  ಮೋದದಪಮ್ಯಾ ಮೂವತ್ತು ದಾಟುವ...

Latest Posts

ಮತ್ತೆ ಶುರುವಾದ ಮಂಗನ ಜ್ವರ… ಮಲೆನಾಡಿಗೆ ಆತಂಕ ತಂದ ಕಾಯಿಲೆ

ಪ್ರತಿ ಬೇಸಿಗೆಗೆ  ಪ್ರಾರಂಭವಾಗುವ ಮಂಗನ ಖಾಯಿಲೆ ಈ ವರ್ಷ ತನ್ನ ಪಯಣ ಪ್ರಾರಂಭಿಸಿದೆ. ಈ ವರೆಗೆ ರಾಜ್ಯದಲ್ಲಿ ಒಟ್ಟೂ ೫೭ ಮಂಗನ ಜ್ವರದ ಪ್ರಕರಣಗಳು ದಾಖಲಾಗಿದ್ದು ಬೇಸಿಗೆಯ ಬಿಸಿಗೆ ತತ್ತರಿಸುತ್ತಿರುವ ಮಲೆನಾಡಿಗರಿಗೆ ಈ ಕಾಯಿಲೆ ತಲೆ ಬಿಸಿ ಹೆಚ್ಚಿಸಿದೆ. ಶಿವಮೊಗ್ಗ ಜಿಲ್ಲೆಯಿಂದ ಪ್ರಾರಂಭವಾದ ಕ್ಯಾಸನೂರು ಮಂಗನ ರೋಗ ಈ ವರ್ಷ ಕೂಡಾ ಶಿವಮೊಗ್ಗ ಜಿಲ್ಲೆಯಲ್ಲೇಅರ್ಧಶತಕ...

Recommended For You

About the Author: Kanneshwar Naik

Leave a Reply

Your email address will not be published. Required fields are marked *