ಜ.೭ ರ ರವಿವಾರ ಕಾನಸೂರಿನಲ್ಲಿ ಟಿ.ಎಂ.ಎಸ್. ಕಾನಸೂರು ಶಾಖೆಯ ಕಟ್ಟಡಗಳ ಉದ್ಘಾಟನೆ ಹಾಗೂ ಸಹಕಾರಿಗಳಿಗೆ ಸನ್ಮಾನ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ ಸಚಿವರಾದ ಕೆ.ಎನ್. ರಾಜಣ್ಣ,ಎಚ್.ಕೆ.ಪಾಟೀಲ್, ಮಂಕಾಳ್ ವೈದ್ಯ,ಮಧು ಬಂಗಾರಪ್ಪ, ಆರ್.ವಿ.ದೇಶಪಾಂಡೆ ಪಾಲ್ಗೊಳ್ಳಲಿದ್ದಾರೆ.
ಶಾಸಕ ಭೀಮಣ್ಣ ನಾಯ್ಕ ಅಧ್ಯಕ್ಷತೆ ವಹಿಸಲಿರುವ ಈ ಸಮಾರಂಭದಲ್ಲಿ ಅತಿಥಿಗಳಾಗಿ ಅನಂತಕುಮಾರ ಹೆಗಡೆ,ಶಿವರಾಮ ಹೆಬ್ಬಾರ್ ವಿಶ್ವೇಶ್ವರ ಹೆಗಡೆ ಕಾಗೇರಿ,ಡಿ.ಜಿ. ಶಾಂತನಗೌಡ್ರು ಡಾ. ಎಂ.ಎನ್.ರಾಜೇಂದ್ರಕುಮಾರ,ಶಿವಕುಮಾರ್ ಎಸ್. ಪಾಟೀಲ್,ಎಚ್. ಎಸ್. ಮಂಜಪ್ಪ,ಡಾ.ಕೆ. ರಾಜೇಂದ್ರ ವಿ.ಎನ್.ಭಟ್ , ರಾಘವೇಂದ್ರ ಶಾಸ್ತ್ರೀ ಪಾಲ್ಗೊಳ್ಳಲಿದ್ದಾರೆ.