


ಸಾಮಾಜಿಕ,ರಾಜಕೀಯ,ಸಹಕಾರಿ ಯಾವುದೇ ಕ್ಷೇತ್ರದಲ್ಲಿದ್ದರೂ ಜನಪರತೆ ಮುಖ್ಯ ಎಂದಿರುವ ಶಿಕ್ಷಣ ಸಚಿವ ಮಧು ಬಂಗಾರಪ್ಪ ಮುಂದಿನ ಮೂರು ವರ್ಷಗಳಲ್ಲಿ ೩೦೦೦ ಸಾವಿರ ಕೆ.ಪಿ.ಎಸ್. ಶಾಲೆಗಳನ್ನು ತೆರೆಯುವ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ ಮಾಡುವ ಮುನ್ಸೂಚನೆ ನೀಡಿದರು.
ಸಿದ್ಧಾಪುರ ಟಿ.ಎಂ.ಎಸ್. ಸಂಸ್ಥೆಯ ಕಾನಸೂರು ಶಾಖೆಯ ಹೊಸ ಕಟ್ಟಡಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು ರೈತರು,ಸಹಕಾರಿ ಕ್ಷೇತ್ರ,ಶಿಕ್ಷಣ ಕ್ಷೇತ್ರಗಳಲ್ಲಿ ಬದ್ಧತೆಯಿಂದ ಏನಾದರೂ ಸಾಧಿಸಲು ಸಾಧ್ಯ ಎಂಬುದನ್ನು ಸಾಬೀತುಮಾಡಿದವರು ಎಸ್. ಬಂಗಾರಪ್ಪ
ರೈತರಿಗೆ ಉಚಿತ ವಿದ್ಯುತ್ ನೀಡದಿದ್ದರೆ ಕೃಷಿ ಕ್ಷೇತ್ರ ಸುಧಾರಿಸುತ್ತಿರಲಿಲ್ಲ, ಶಾಲೆಗೆ ಬರುವ ಮಕ್ಕಳಿಗೆ ಹಣ ನೀಡುವ ಅಕ್ಷಯ ಯೋಜನೆಯಿಂದ ಶಿಕ್ಷಿತರ ಪ್ರಮಾಣ ಹೆಚ್ಚಾಯಿತು. ಕೃಷಿ-ಶಿಕ್ಷಣಗಳಿಂದ ಸಹಕಾರಿ ಕ್ಷೇತ್ರಕ್ಕೆ ನೆರವಾಯಿತು. ಇಂಥ ಸಂದರ್ಭದಲ್ಲಿ ಜನರು ಬಂಗಾರಪ್ಪನವರನ್ನು ನೆನಪಿಸಿದಾಗ ಅವರ ಕೊಡುಗೆ ಸ್ಮರಿಸಿದಂತಾಗುತ್ತದೆ ಎಂದರು.
ಇದೇ ಸಂದರ್ಭದಲ್ಲಿ ತಾಲೂಕಿನ ಸಹಕಾರಿ ಕ್ಷೇತ್ರದ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಶಾಸಕರಾದ ಭೀಮಣ್ಣ ನಾಯ್ಕ ಮತ್ತು ಶಿವರಾಮ ಹೆಬ್ಬಾರ್ ಮಾತನಾಡಿದರು. ಟಿ.ಎಂ.ಎಸ್. ಅಧ್ಯಕ್ಷ ಆರ್. ಎಂ. ಹೆಗಡೆ ಪ್ರಾಸ್ಥಾವಿಕವಾಗಿ ಮಾತನಾಡಿ ಬಂಗಾರಪ್ಪನವರಿಂದ ತಾವು ಸಹಕಾರಿ ಕ್ಷೇತ್ರದಲ್ಲಿ ಉಳಿಯುವಂತಾಯಿತು ಎಂದು ನೆನಪಿಸಿ ಎಲ್ಲರನ್ನೂ ಸ್ವಾಗತಿಸಿದರು.
