ಜೋಗ ಬಳಿಯ ಜೋಗಿನಮಠದಲ್ಲಿ ರವಿವಾರ ತಡರಾತ್ರಿ ಗಲಾಟೆ ನಡೆದಿದ್ದು ಒಟ್ಟೂ ಆರು ಜನರ ವಿರುದ್ಧ ಸಿದ್ಧಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೋಗಿನಮಠದ ವನಿತಾ ರಮೇಶ್ ನಾಯ್ಕ ದೂರು ನೀಡಿದ್ದು ರವಿವಾರ ತಡರಾತ್ರಿ ತಮ್ಮ ಮನೆ ಬಳಿ ಬಂದ ಬೆಂಗಳೂರಿನ ಎಸ್. ನಾರಾಯಣ್, ಜೋಗದ ಪಳನಿ ಮತ್ತು ನಾಲ್ಕುಜನರು ತಡರಾತ್ರಿ ತಮ್ಮ ಮನೆಯ ಬಾಗಿಲು ಒಡೆದು ಮನೆಯಿಂದ ಹೊರ ಹೋಗಿ ಇಲ್ಲದಿದ್ದರೆ ಎಳೆದು ಹೊರಹಾಕುತ್ತೇವೆ ಎಂದು ಬೆದರಿಸಿದ್ದಲ್ಲದೆ ದೂರುದಾರೆ ವನಿತಾ ಮತ್ತು ಅವರ ಮಗಳ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ದೂರಿದ್ದಾರೆ.