ಬ್ಯಾಂಕ್, ಸ್ಥಳೀಯ ಸಂಸ್ಥೆಗಳನ್ನು ಬಳಸಿ ಬಿ.ಜೆ.ಪಿ. ಮಾಡುತ್ತಿರುವ ಚುನಾವಣಾ ಪ್ರಚಾರದ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವೃ ವಿರೋಧ ವ್ಯಕ್ತವಾಗಿದೆ. ಕೆಲವು ಬ್ಯಾಂಕ್ ಗಳನ್ನು ವಿಲೀನ ಮಾಡಿ ಸಾರ್ವಜನಿಕರಿಗೆ ತೊಂದರೆ ಮಾಡಿರುವ ಮೋದಿ ನೇತೃತ್ವದ ಒಕ್ಕೂಟ ಸರ್ಕಾರ ಮುದ್ರಾ ಯೋಜನೆಯ ಸಾಲ, ಜನಧನ್ ಖಾತೆಗಳನ್ನು ತೆರೆದಿದೆ. ಆದರೆ ಯಾವ ಫಲಾನುಭವಿಗೂ ಮುದ್ರಾ ಯೋಜನೆಯಲ್ಲಿ ಜಾಮೀನುದಾರರಿಲ್ಲದೆ ಸಾಲಸೌಲಭ್ಯ ನೀಡಿಲ್ಲ. ಜನಧನ್ ಖಾತೆಗಳಲ್ಲೂ ತುಂಬಿದ ಹಣ ನಾನಾ ರೀತಿಯಲ್ಲಿ ಖಾಲಿಯಾಗಿದೆ. ಇಂಥ ಕೆಲವು ಯೋಜನೆಗಳ ಬಗ್ಗೆ ಸುಳ್ಳು-ಪ್ರಚಾರ ವೈಭವೀಕರಣದಿಂದ ಚುನಾವಣೆ ಲಾಭಕ್ಕೆ ಪ್ರಯತ್ನಿಸುವ ಬಿ.ಜೆ.ಪಿ. ಕ್ರಮದ ಬಗ್ಗೆ ವಿರೋಧ ವ್ಯಕ್ತಪಡಿಸಿರುವ ಹಲವರು ಸುಳ್ಳಿನ ರಾಯಭಾರಿ ಮೋದಿ ಸುಳ್ಳಿನ ಮೂಲಕ ಚುನಾವಣೆ ಗೆಲ್ಲುವ ತಂತ್ರವಾಗಿ ಇಂಥ ಮೂರನೇ ದರ್ಜೆಯ ಕಾರ್ಯಕ್ರಮ ಮಾಡಿಸುತಿದ್ದಾರೆ ಎಂದು ದೂರಿದ್ದಾರೆ.
ಇದೇ ಕಾರ್ಯಕ್ರಮವನ್ನು ಗ್ರಾ.ಪಂ. ಪ.ಪಂ. ಮೂಲಕ ಮಾಡಿಸುತ್ತಿರುವ ಮೋದಿ ಈ ಕಾರ್ಯಕ್ರಮಕ್ಕಾಗಿ ಸಾವಿರಾರು ಕೋಟಿ ಹಣ ಪೋಲು ಮಾಡುತಿದ್ದಾರೆ. ಈ ಸತ್ಯ ಅರಿತ ಕೆಲವು ಗ್ರಾ.ಪಂ. ಮಟ್ಟದ ಜನಪ್ರತಿನಿಧಿಗಳು ಮೋದಿ ಸುಳ್ಳುಪ್ರಚಾರಕ್ಕೆ ನಾವ್ಯಾಕೆ ವೇದಿಕೆ ಕಲ್ಪಿಸಬೇಕೆಂದು ವಿರೋಧಿಸಿದ್ದರು. ಈ ವಿರೋಧದಿಂದಾಗಿ ಹಲವು ಗ್ರಾ.ಪಂ. ಗಳಲ್ಲಿ ವಿಕಸಿತ ಭಾರತ ಎನ್ನುವ ಮೋದಿ ವೈಭವೀಕರಣದ ಕಾರ್ಯಕ್ರಮಗಳು ರದ್ದಾಗಿದ್ದವು.
ಕೆಲವು ರಾಜ್ಯಗಳಲ್ಲಿ ತೀವ್ರ ವಿರೋಧಕ್ಕೆ ಕಾರಣವಾದ ಈ ಮೋದಿ ಚೀಪ್ ಗಿಮಿಕ್ ರಾಮ, ರಾಮಮಂದಿರದ ಹೆಸರಲ್ಲಿ ಮಂಕುಬೂದಿ ಎರಚುವ ಹುಸಿ ದೇಶಪ್ರೇಮಿಗಳ ಮಾದರಿಯ ಕ್ಷುಲ್ಲಕ ಕೆಲಸ. ಈ ಚುನಾವಣಾ ಉದ್ದೇಶದ ಸುಳ್ಳುಪ್ರಚಾರವನ್ನು ಬ್ಯಾಂಕ್ ಸಿಬ್ಬಂದಿ ಮತ್ತು ಸ್ಥಳೀಯ ಸಂಸ್ಥೆಗಳ ಸಿಬ್ಬಂದಿಗಳ ಮೂಲಕ ಮಾಡಿಸುತ್ತಿರುವುದು ಜನರ ತೆರಿಗೆ ಪೋಲು ಮಾಡುವ ದೇಶರ್ದೋಹಿ ಕೆಲಸ ಎನ್ನುವ ಆರೋಪಕ್ಕೂ ಕಾರಣವಾಗಿದೆ.