ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಚುನಾವಣೆಯ ಕಾವು ಪ್ರಾರಂಭವಾದಂತಿದೆ. ಕಾಂಗ್ರೆಸ್ ತನ್ನ ಅಭ್ಯರ್ಥಿ ಗೆಲ್ಲಿಸಿಕೊಳ್ಳಬೇಕೆಂದು ಪ್ರಯತ್ನದಲ್ಲಿ ತೊಡಗಿದೆ ಎನ್ನಲಾಗುತ್ತಿದೆಯಾದರೂ ಅದು ತನ್ನ ಅಭ್ಯರ್ಥಿ ಯಾರು ಎಂದು ಸ್ಪಷ್ಟಪಡಿಸಿಲ್ಲ (ಶಿವಮೊಗ್ಗ ಜಿಲ್ಲೆಯೊಂದನ್ನು ಬಿಟ್ಟು ಬೇರೆ ಯಾವ ಕ್ಷೇತ್ರದ ಟಿಕೇಟೂ ನಿರ್ಧಾರವಾಗಿಲ್ಲ )
ಪಕ್ಷದ ಪ್ರಮುಖ ನಾಯಕರು ಅಭ್ಯರ್ಥಿಗಳಾಗಲು ಹಿಂದೇಟುಹಾಕುತ್ತಿರುವುದರಿಂದ ಅಂಜಲಿ ನಿಂಬಾಳ್ಕರ್, ರವೀಂದ್ರ ನಾಯ್ಕ ಹೆಸರು ಬಿಟ್ಟರೆ ಬೇರೆ ಯಾವ ಹೆಸರೂ ಪಕ್ಷದ ವಲಯದಲ್ಲಿ ಚರ್ಚೆಯಲ್ಲಿಯೂ ಇಲ್ಲ. ತಮ್ಮದೇ ಮಿತಿಯಲ್ಲಿ ಅಭ್ಯರ್ಥಿಗಳಾಗಲು ಸಿದ್ಧರಾಗಿರುವ ಜಿ.ಟಿ. ನಾಯ್ಕ ಮತ್ತು ಆರ್. ಎಚ್.ನಾಯ್ಕ ಬಿಟ್ಟರೆ ಬೇರೆ ಯಾವ ಅಭ್ಯರ್ಥಿಗಳೂ ತಾವು ಹುರಿಯಾಳುಗಳು ಎಂಬುದನ್ನೂ ಹೇಳಿಕೊಂಡಿಲ್ಲ. ಸದ್ಯ ಬಿ.ಜೆ.ಪಿ.ಯಲ್ಲಿರುವ ಶಿವರಾಮ ಹೆಬ್ಬಾರ್ ಕಾಂಗ್ರೆಸ್ ಗೆ ಬಂದು ಅಭ್ಯರ್ಥಿಯಾಗಲಿದ್ದಾರೆ ಎನ್ನಲಾಗುತ್ತಿದೆಯಾದರೂ ಈ ಬಗ್ಗೆ ಪಕ್ಷವಾಗಲಿ ಶಿವರಾಮ್ ಹೆಬ್ಬಾರ್ ಆಗಲಿ ಎಲ್ಲಿಯೂ ತುಟಿಬಿಚ್ಚಿಲ್ಲ.
ಬಿ.ಜೆ.ಪಿ. ಯೊಂದಿಗೆ ಮೈತ್ರಿ ಮಾಡಿಕೊಂಡಿರುವ ಜೆ.ಡಿ.ಎಸ್. ಇಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲದಿದ್ದರೂ ಮೈತ್ರಿಯನ್ನು ಸಮ್ಮತಿಸದ ಬಣವೊಂದು ಪಕ್ಷತ್ಯಜಿಸುವ ಸಿದ್ಧತೆಯಲ್ಲಿದ್ದರೆ ಉಳಿದ ಜಾದಳ ಅನಿವಾರ್ಯವಾಗಿ ಬಿ.ಜೆ.ಪಿ.ಯೊಂದಿಗೆ ಸೇರಿಕೊಳ್ಳಲು ತಯಾರಾದಂತಿದೆ. ಈ ಸ್ಥಿತಿಯಲ್ಲಿ ಕೂಡಾ ಕಾರವಾರದ ಆನಂದ ಅಸ್ನೋಟಿಕರ್ ಮತ್ತು ಕುಮಟಾದ ಸೂರಜ್ ಸೋನಿ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಸಿದ್ಧರಾಗಿರುವಂತಿದೆ.
ಸದ್ಯ ಚಾಲತಿಯಲ್ಲಿರುವ ಅಭ್ಯರ್ಥಿಗಳಲ್ಲಿ ಕೆಲವರು ಬಿ.ಜೆ.ಪಿ. ಅಭ್ಯರ್ಥಿಗಳಾಗಲು ತಯಾರಿ ನಡೆಸಿದ್ದು ಆ ಪಟ್ಟಿಯಲ್ಲಿ ಹಾಲಿ ಸಂಸದ ಅನಂತಕುಮಾರ ಹೆಗಡೆ,ಮಾಜಿ ಸ್ಫೀಕರ್ ವಿಶ್ವೇಶ್ವರ ಹೆಗಡೆ, ಕಾರವಾರದ ನಾಗರಾಜ್ ನಾಯಕ,ಶಿರಸಿಯ ಅನಂತಮೂರ್ತಿ ಹೆಗಡೆ ಸೇರಿದಂತೆ ಕೆಲವರು ಪ್ರಚಾರದಲ್ಲಿದ್ದಾರೆ. ಇವರ ಜೊತೆಗೆ ಹೊಸ ವರ್ಷ ಪ್ರಾರಂಭವಾದಂತೆ ಸೇರ್ಪಡೆಯಾದ ಎರಡು ಹೆಸರುಗಳು ಹರಿಪ್ರಕಾಶ ಕೋಣೆಮನೆ ಮತ್ತು ಚಕ್ರವರ್ತಿ ಸೂಲಿಬೆಲೆ!
ಪತ್ರಕರ್ತ ಹರಿಪ್ರಕಾಶ್ ಕೋಣೆಮನೆ ಬೆಂಗಳೂರಿನಲ್ಲಿದ್ದು ಪಕ್ಷದ ವಕ್ತಾರರಾಗಿ ನೇಮಕವಾಗಿದ್ದಾರೆ. ಮಾಧ್ಯಮಗಳ ಮೂಲಕ ತಮ್ಮ ಹೆಸರು ಪರಿಗಣನೆಗೆ ತರಲು ಪ್ರಯತ್ನಿಸುತ್ತಿರುವ ಇವರು ಅನಂತ ಕುಮಾರ ಹೆಗಡೆ ಮತ್ತು ವಿಶ್ವೇಶ್ವರ ಹೆಗಡೆವರ ಬದಲು ತನಗೆ ಟಿಕೆಟ್ ನೀಡಿದರೆ ಗೆಲ್ಲುವ ಅವಕಾಶ ಹೆಚ್ಚು ಎಂಬುದನ್ನು ಪಕ್ಷಕ್ಕೆ ಮನವರಿಕೆ ಮಾಡುವಂತಿದೆ.
ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಪ್ರಮುಖ ಬಹುಸಂಖ್ಯಾತ ಮತದಾರರಲ್ಲಿ ೪-೫ ಸ್ಥಾನದ ಹವ್ಯಕ ಅಭ್ಯರ್ಥಿಗಳು ಟಿಕೇಟ್ ವಿಚಾರದಲ್ಲಿ ಮುಂಚೂಣಿಯಲ್ಲಿರುವುದು ವಿಶೇಶ.
ಬಿ.ಜೆ.ಪಿ. ಯ ಮೇಲ್ಜಾತಿ, ಮೇಲ್ವರ್ಗದ ಓಲೈಕೆ ವಿಚಾರ ಮುನ್ನೆಲೆಗೆ ಬಂದು ಹಿಂದುಳಿದ ವರ್ಗಗಳ ಮುಖಂಡರು ಹಿಂದುಳಿದ ವರ್ಗಗಳಿಗೆ ಅವಕಾಶ ಕೇಳಿರುವುದರಿಂದ ಮೇಲ್ವರ್ಗ, ಮೇಲ್ಜಾತಿ ಪರವಾಗಿ ವಕಾಲತ್ತು ವಹಿಸುವ ಹಿಂದುಳಿದವರ ಹೆಸರುಗಳಲ್ಲಿ ಹೊನ್ನಾವರದ ಮಿಥುನ್ ಸೇಟ್ ಅಲಿಯಾಸ್ ಚಕ್ರವರ್ತಿ ಸೂಲಿಬೆಲೆ ಹೆಸರು ಮುನ್ನೆಲೆಗೆ ಬಂದಿದ್ದು ದಿಕ್ಸೂಚಿ ಭಾಷಣದ ಮೂಲಕ ಹಿಂದುಳಿದವರ ಅವಕಾಶ ಕೀಳಲು ಬಂದಿರುವ ಈ ಸೋಗಲಾಡಿ ಸುಳ್ಳುಕೋರ ಅತ್ತ ವೈದಿಕರ ಆಯ್ಕೆಯೂ ಆಗದೆ ಇತ್ತ ಹಿಂದುಳಿದವರ ಆಯ್ಕೆಗೂ ಸಲ್ಲದೆ ತನ್ನ ಎಡಬಿಡಂಗಿ ಸ್ಥಾನಕ್ಕೇ ತೃಪ್ತಿ ಪಟ್ಟುಕೊಂಡಿದ್ದು ವೈಯಕ್ತಿಕ ವರ್ಚಸ್ಸಿಲ್ಲದ ತಾಕತ್ತಿಲ್ಲದ ಇವರೆಲ್ಲರಲ್ಲಿಯೂ ಅಭ್ಯರ್ಥಿ ಯಾರಾದರಾಗಲಿ ಚಿನ್ಹೆ ಮಾತ್ರ ಕಮಲ ಎನ್ನುವ ಅನಿವಾರ್ಯತೆಯನ್ನು ಸಾಮೂಹಿಕವಾಗಿ ಒಪ್ಪಿಕೊಂಡಿರುವಂತಿದೆ.!
ಜಾತಿ ಬೇಡ ಧರ್ಮ ಬೇಕು ಎನ್ನುವ ಬಿ.ಜೆ.ಪಿ. ನೀತಿ ಕೇವಲ ಬಾಯುಪಚಾರದ ಮಾತಾಗಿದ್ದು ಮೇಲ್ವರ್ಗದವರು ಅಥವಾ ಮೇಲ್ವರ್ಗದ ದಾಸರು ಬಿಟ್ಟು ಕಡರ್ ಅಭ್ಯರ್ಥಿಗಳು ಬಿ.ಜೆ.ಪಿ. ಯಲ್ಲಿ ಅವಕಾಶ ಪಡೆಯುವುದಿಲ್ಲ ಎನ್ನುವ ವಾಸ್ತವದ ವಿದ್ಯಮಾನದ ನಡುವೆ ಸಿದ್ಧಾಪುರದ ಕೆ.ಜಿ.ನಾಯ್ಕ, ಕಾರವಾರದ ವಸಂತ ಅಸ್ನೋಟಿಕರ್, ಕುಮಟಾದ ಸೂರಜ್ ನಾಯ್ಕ, ಹಳಿಯಾಳದ ಸುನಿಲ್ ಹೆಗಡೆ ಈ ಬಾರಿ ಮೈತ್ರಿ ಅಭ್ಯರ್ಥಿಗಳಾಗಲು ಅರ್ಹರಿದ್ದು ಇವರನ್ನು ಬಿಟ್ಟು ಅನ್ಯರನ್ನು ಆಯ್ಕೆ ಮಾಡಿದರೆ ಬಿ.ಜೆ.ಪಿ. ಸತತ ಐದು ಅವಧಿಯ ನಂತರ ಈ ಕ್ಷೇತ್ರವನ್ನು ಕಳೆದುಕೊಳ್ಳಲಿದೆ ಎನ್ನುವ ವಿಶ್ಲೇಶಣೆಗಳಿವೆ.