ಯಾವುದು ಸುದ್ದಿ, ಸುದ್ದಿಯಲ್ಲ ಎನ್ನುವುದಕ್ಕೊಂದು ಲಾಗಾಯ್ತಿನ ಮಾನದಂಡವಿದೆ. ನಾಯಿ ಮನುಷ್ಯನಿಗೆ ಕಚ್ಚಿದರೆ ಅದು ವಿದ್ಯಮಾನವಾದರೂ ತೀರಾ ಪ್ರಸಾರವಾಗಲೇಬೇಕಾದ ಸುದ್ದಿಯೇನಲ್ಲ ಆದರೆ ಮನುಷ್ಯ ನಾಯಿಗೆ ಕಚ್ಚಿದರೆ ಅದು ನಿಶ್ಚಿತವಾಗಿ ಪ್ರಸಾರಯೋಗ್ಯ, ಪ್ರಚಾರಯೋಗ್ಯ ಸುದ್ದಿ.
ಈಗ ರಾಮಮಂದಿರದ ಸುದ್ದಿ ಎಲ್ಲೆಡೆ ಪ್ರಸಾರ, ಪ್ರಚಾರ ಪಡೆಯುತ್ತಿವೆ. ಮುಂದುವರಿದು ಮೋದಿ ವೃತ ಮಾಡಿದರು, ದೇವಾಲಯದ ಕಸ ಹೊಡೆದರು. ಇತ್ಯಾದಿ ಸುದ್ದಿಗಳು ಮಾಧ್ಯಮಗಳಿಗೆ ಆಹಾರವಾಗಿವೆ.
ಹಿಂದೆ ಪ್ರಧಾನಿ, ರಾಷ್ಟ್ರಪತಿ, ಮಂತ್ರಿಗಳಿಗೆ ದೇವಾಲಯ ಪ್ರವೇಶ ಮಾಡಲು ಅವಕಾಶ ನೀಡದಿದ್ದರೆ ಸುದ್ದಿಯಾಗುತಿತ್ತು. ಈಗ ರಾಷ್ಟ್ರಪತಿ ದ್ರೌಪದಿ ಮುರ್ಮು ಸೆಂಟ್ರಲ್ ವಿಲ್ಲಾ ಉದ್ಘಾಟನೆ ಮಾಡಲು ಅವಕಾಶವಿಲ್ಲ, ರಾಷ್ಟ್ರಪತಿಗಳಿಗೆ ರಾಮ್ ಲಲ್ಲಾ ಲೋಕಾರ್ಪಣೆಗೂ ಅವಕಾಶವಿಲ್ಲ. ಇವೆಲ್ಲಾ ಮಾಧ್ಯಮಗಳಲ್ಲಿ ಸುದ್ದಿಯೇ ಆಗುತ್ತಿಲ್ಲ!.
omg ಇಂಡಿಯಾ ಯಾವಾಗ ಬದಲಾಯ್ತು? ಇಂಡಿಯಾವನ್ನು ಭಾರತ ಎಂದು ದಿಢೀರನೆ ಹೆಸರು ಬದಲಾಯಿಸಿ ಭಾರತ ಎಂದು ಬರೆಸಿದ್ದು, ಕೊರೆಸಿದ್ದು ಇದಕ್ಕೇನಾ? ಸುದ್ದಿಯ ಮಾನದಂಡ ಬದಲಾದಂತಿಲ್ಲ ಆದರೆ ಸುದ್ದಿ ಮಾಡುವವರು, ಸುದ್ದಿಸಂಸ್ಥೆಗಳ ಮಾಲಕರು ಬದಲಾಗಿದ್ದಾರೆ.