


.
……. ಸಿದ್ದಾಪುರ, ಇಲ್ಲಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಾಂಸ್ಕೃತಿಕ, ಕ್ರೀಡೆ ಮತ್ತು ಇತರ ಘಟಕಗಳ ಉದ್ಘಾಟನಾ ಸಮಾರಂಭ ನಡೆಯಿತು. ಈ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಹಾಯಕ ಕಾರ್ಯಪಾಲಕ ಅಭಿಯಂತರ ವಿ. ಎಂ. ಭಟ್ ವಿದ್ಯಾರ್ಥಿ ಜೀವನ ವ್ಯರ್ಥವಾಗದಂತೆ ಅರ್ಥಪೂರ್ಣವಾಗಿ ಬಳಸಿಕೊಳ್ಳುವ ದಾರಿ ಅನುಸರಿಸಲು ಮಾರ್ಗದರ್ಶನ ಮಾಡಿದರು.
ಮುಖ್ಯ ಅತಿಥಿ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಕನ್ನೇಶ್ ಕೋಲಶಿರ್ಶಿ ಜಾಗತಿಕ ವಿದ್ಯಮಾನಗಳ ನಡುವೆ ಪ್ರಾದೇಶಿಕತೆ, ಸ್ಥಳಿಯತೆ ಮರೆಯಬಾರದು. ನಮ್ಮ ಗುರುತು ನಮ್ಮ ಅನನ್ಯತೆ ಹೇಳಬೇಕು ಎಂದರು. ಪ್ರಾಂಶುಪಾಲ ಡಾ. ಸತೀಶ್ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕ ಈಶ್ವರ ನಾಯ್ಕ ಸ್ವಾಗತಿಸಿದರು. ಲೋಹಿತ್ ನಾಯ್ಕ ವಂದಿಸಿದರು. ಮೇಘನಾ ನಾಯ್ಕ ನಿರೂಪಿಸಿದರು. ತಾ.ಪಂ. ಮಾಜಿ ಸದಸ್ಯೆ ಗಿರಿಜಾ ಗೌಡ ಇದ್ದರು.

