ಜ.೨೮ ರಂದು ಶಿರಸಿ -ಸಿದ್ಧಾಪುರಗಳಲ್ಲಿ ನಾಮಧಾರಿ ಸಮಾಜದ ಗುರುವಂದನೆ, ಅಭಿನಂದನಾ ಸಭೆಗಳು ನಡೆಯಲಿವೆ.
ಸಿದ್ಧಾಪುರ- ಸಿದ್ಧಾಪುರ ತಾಲೂಕಾ ಕೆ.ಎಸ್.ಆರ್ .ಟಿ.ಸಿ. ನಾಮಧಾರಿ ನೌಕರರ ಸಂಘದಸ್ನೇಹ ಸಮ್ಮೇಳನ ಹಾಗೂ ಸನ್ಮಾನ ಕಾರ್ಯಕ್ರಮ ಸಿದ್ಧಾಪುರ ಲಯನ್ಸ್ ಬಾಲಭವನದಲ್ಲಿ ಜ.೨೮ ರ ಬೆಳಿಗ್ಗೆ ೧೦ ಗಂಟೆಗೆ ನಡೆಯಲಿದೆ.
ಸಿಗಂದೂರು ದೇವಸ್ಥಾನ ಧರ್ಮದರ್ಶಿ ರಾಮಪ್ಪನವರ ಗೌರವ ಉಪಸ್ಥಿತಿಯಲ್ಲಿ ಶಾಸಕ ಭೀಮಣ್ಣ ನಾಯ್ಕ ಉದ್ಘಾಟಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಎಂ. ಎಂ. ನಾಯ್ಕ ಹಸ್ವಂತೆ, ಸೌಮ್ಯ ಚಂದ್ರಶೇಖರ್ ನಾಯ್ಕ ಹಾಗೂ ಚಿತ್ತಾರ ಕಲಾವಿದ ಈಶ್ವರ ನಾಯ್ಕ ಹಸ್ವಂತೆಯವರಿಗೆ ಸನ್ಮಾನ ನಡೆಯಲಿದೆ.
ಶಿರಸಿಯಲ್ಲಿ ಗುರುವಂದನೆ-
ಶಿರಸಿ ದೇವನಳ್ಳಿಯಲ್ಲಿ ಶಿರಸಿ ತಾಲೂಕಾ ಗ್ರಾಮೀಣ ವಿಭಾಗದ ಈಡಿಗ,ನಾಮಧಾರಿ ಬಿಲ್ಲವ ಸಮಾಜದ ಗುರುವಂದನೆ ಮತ್ತು ಅಭಿನಂದನಾ ಕಾರ್ಯಕ್ರಮ ಜ.೨೮ ರ ಬೆಳಿಗ್ಗೆ ನಡೆಯಲಿದೆ. ಈ ಕಾರ್ಯಕ್ರಮವನ್ನು ಸಚಿವ ಮಧು ಬಂಗಾರಪ್ಪ ಉದ್ಘಾಟಿಸಲಿದ್ದು ಶಾಸಕ ಭೀಮಣ್ಣ ನಾಯ್ಕ ಅಧ್ಯಕ್ಷತೆ ವಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಅನೇಕರಿಗೆ ಸನ್ಮಾನ ನೆರವೇರಲಿದೆ.