ರಾಮ ಬಂದ….ಅಯೋಧ್ಯೆಯಲ್ಲಿ….. (ಒಂದು ಲಹರಿ)

ಅಯೋಧ್ಯೆಯಲ್ಲಿ ತಳಿರು ತೋರಣಗಳಿಂದ ಶೃಂಗಾರಗೊಂಡ ಬೀದಿಯಲ್ಲಿ ಹೂವುಗಳು ಅರಳಿನಿಂತಂತೆ ಭಾಸವಾಗುತಿತ್ತು. ಅದೆಷ್ಟೋ ದಿನಗಳಿಂದ ತಯಾರಿಯಲ್ಲಿ ತೊಡಗಿದ್ದ ಸಹಸ್ರಾರು ಜನರು ದುಗಡದಲ್ಲಿದ್ದರು. ಉದ್ದೇಶಿತ ಕಾರ್ಯಕ್ಕೆ ಶಾಸ್ತ್ರೋ ಕ್ತವಾಗಿ ಮಾಡಬೇಕಿದ್ದ ಕಾರ್ಯಗಳೆಲ್ಲಾ ನಡೆಯುತಿದ್ದರೂ ಅಪೂರ್ಣ ದೇವಾಲಯದಲ್ಲಿ ಬಲರಾಮನನ್ನು ಪ್ರತಿಷ್ಠಾಪಿಸಲು ಗಡಿಬಿಡಿ ಮಾಡುತಿದ್ದ ಭಕ್ತರ ತಲೆಯಲ್ಲಿ ಚುನಾವಣೆಯ ತಯಾರಿಯ ಸಂಬ್ರಮವಿತ್ತು.

ಶಂಕರಾಚಾರ್ಯರ ಮಠಗಳ ತಕರಾರಿನ ನಡುವೆ ರಾಷ್ಟ್ರದ ಪ್ರಧಾನ ತನ್ನ ಲಾಗಾಯ್ತಿನ ಸರ್ವಾಧಿಕಾರಿ ಮನೋಭಾವದಿಂದ ಸಾಂಪ್ರದಾಯಿಕ ಟೀಕಾಕಾರರು, ನೂತನ ಶಂಕರಾಚಾರ್ಯರ ಯತಿಗಳೆಡೆಗೆ ಉಪೇಕ್ಷೆಯ ನೋಟ ಬೀರಿ ಎಂಥೆಂಥಾ ವಿರೋಧಗಳನ್ನೆಲ್ಲಾ ಅರಗಿಸಿಕೊಂಡಿದ್ದೇನೆ. ನನ್ನ ಪ್ರಾಂತದಲ್ಲಿ ಬಹುಸಂಖ್ಯಾತರಲ್ಲದ ಜನರ ಹೆಣಗಳ ಮೇಲೆ ರುದ್ರನರ್ತನ ಆಡಿದ್ದಾಗ ನಮ್ಮ ಬೀಷ್ಮರೇ ರಾಜ್ಯಧರ್ಮ ಪಾಲಿಸು ಎಂದು ಆದೇಶಿಸಿದ್ದರು.

ಸಾರ್ವಜನಿಕರು, ಗುರುಗಳ ಹಿತಾಸಕ್ತಿ ಕಾಯುವುದು ಫ್ರಧಾನನ ಕೆಲಸವಲ್ಲ. ಪ್ರಧಾನನೆಂದರೆ ಮಂಡಲ್‌ ಪಂಚಾಯತ್‌ ಪ್ರಧಾನನಾಗಲಿ, ಪರಿವಾರದ ಪ್ರಧಾನನಾಗಲಿ, ದೇಶದ ಪ್ರಧಾನನಾಗಲಿ ಅವರಿಗೆ ಹಿಟ್ಲರ್‌ ಮಾದರಿಯಾದರೆ ಪರಿವಾರಕ್ಕೆ ಸಮಾಧಾನವಾದರೆ ಸಾಕು. ಪರಿವಾರದಲ್ಲಿ ರಾಜಧರ್ಮವಿಲ್ಲ ಅಲ್ಲೇನಿದ್ದರೂ ಮುನುಧರ್ಮ.

ಪ್ರಧಾನ ತನ್ನ ಹುಸಿನಗೆಯಲ್ಲಿ ಯಜಮಾನನ ಪಾತ್ರವಹಿಸಿದ ಶುಭ್ರಬಟ್ಟೆ ಬಿಟ್ಟರೆ ಮತ್ತೇನೂ ಶುಭ್ರವಿರಬೇಕೆಂದು ಬಯಸದ ಯಜಮಾನ ಬಲರಾಮನ ಪ್ರಾಣಪ್ರತಿಷ್ಠೆಯ ಧಾರ್ಮಿಕ ಕಾರ್ಯ ನೆರವೇರಿಸುತಿದ್ದ ಯತಿಗಳೆಡೆಗೆ ನೋಡಿದ ಯತಿಗಳೇ ಸತ್ಯವೋ? ಧರ್ಮವೋ? ನಾನೇನೂ ಕಾಣೆ ಆದರೆ ನಿಮ್ಮ ಭಕ್ತಿ ಇದೆಯಲ್ಲ ಇದು ಹನುಮಂತನ ಶೃದ್ಧಾ ಭಕ್ತಿ ಮೀರಿದ್ದು.

ಶ್ರೀರಾಮ ಪರವಶರಾದ ನಿಮಗೆ ಅಲೌಕಿಕ ಜ್ಞಾನವಿರಬಹುದು ಆದರೆ ನೀವೂ ಕೂಡಾ ನನ್ನಂತೆ ನಟಿಸುವವರೇ ದೇಶದಾದ್ಯಂತ ಕರಸೇವೆ ಮಾಡಿದ ಲಕ್ಷಾಂತರ ಜನರಿಗೆ ಬಿಡಿಗಾಸಿನ ನಿರೀಕ್ಷೆ ಇಲ್ಲ ಆದರೆ ನಾನು ನೀವು?

ರಾಮನ ದೆಸೆಯಿಂದ ಬರುವ ದಾನ, ಧರ್ಮಗಳೆ ನಮಗೆ ಕೊಟ್ಯಾಂತರ ಮೌಲ್ಯದ್ದು ಮೇಲಿಂದ ಗೌರವ ಕಾಣಿಕೆ ಈ ಬಗ್ಗೆ ರಾಜಧರ್ಮದಲ್ಲಿ ನೀತಿಸಂಹಿತೆ ಇರಬಹುದು ಆದರೆ ನಮ್ಮ ಮನುಧರ್ಮದಲ್ಲಿ ರಾಜ, ಪುರೋಹಿತರ ತಪ್ಪು, ದೋಷಗಳಿಗೆಲ್ಲಾ ಮಾಪಿ. ನಿಮ್ಮ ರಾಮ ನಮ್ಮನ್ನು ಬಿಡಬಹುದೆ?ನಮ್ಮ ಭೀಷ್ಮರ ರಾಜಧರ್ಮದ ಎಚ್ಚರಿಕೆ ನೆನಪಾಗುತ್ತದೆ. ಆಳುವವರು ಪ್ರಜೆಗಳನ್ನು ಸಮಾಧಾನದಲ್ಲಿರಿಸಬೇಕು ಅಷ್ಟೆ. ಅಭಿವೃದ್ಧಿ, ಸಂತೃಪ್ತಿ, ಕಾಲ್ಪನಿಕ ರಾಮ ರಾಜ್ಯದ ರೀತಿ ನಾವು ನಮ್ಮ ದೇಶದ ಜನರನ್ನು ಸಮಾಧಾನದಲ್ಲಿಡಲು ಸಾಧ್ಯವಿಲ್ಲ. ಆದರೆ ಸಂತೃಪ್ತಿ ಸಮಾಧಾನಗಳನ್ನು ಧಾರ್ಮಿಕ ನಶೆಯ ಮೂಲಕವೂ ತುಂಬಬಹುದು ಈಗ ಹೇಳು ರಾಮ ನಿಜದ ಸಂತೃಪ್ತಿ,ರಾಮರಾಜ್ಯ ಮಾಡಲು ಸಾಧ್ಯವಿಲ್ಲದ ನಾವು ಭಕ್ತಿಯ ನಶೆಯ ಸಂತೃಪ್ತಿ ಪ್ರಾಪ್ತಿಸಿ ನಮ್ಮ ಉದ್ದೇಶ ಸಾಧಿಸಿಕೊಳ್ಳುವುದು ತಪ್ಪೆ?

ಸ್ವಗತದಲ್ಲಿ ಯಜಮಾನ ಧ್ಯಾನಿಸುತ್ತಿರುವುದು ಮೇಲ್ನೋಟಕ್ಕೆ ಧ್ಯಾನ, ರಾಮಧ್ಯಾನವಾಗಿ ಕಂಡರೂ ಆಧ್ಯಾತ್ಮಿಕ ಸಾಧಕರೂ,ನಿಜಧ್ಯಾನಿಗಳೂ ಆದ ಕೆಲವು ಸಾಧಕರಿಗೆ ಈ ಯಜಮಾನನ ನಾಟಕ ಫೇಕುತನ, ಕಪಟತನಗಳ ಪರಿಚಯವಾಗಿ ರಾಷ್ಟ್ರದ ಆಧ್ಯಾತ್ಮಿಕ ಔನ್ಯತ್ಯದಲ್ಲಿ ಎಂಥಾ ಅಪಶಕುನ ನೇತೃತ್ವವಹಿಸಿದೆಯಲ್ಲ ಅನಿಸಿತು. ಅದೆಷ್ಟನೆ ಸಲವೋ ಮತ್ತೆ ಸಾಧಕರು ಮೌನವಾದರು.

ಉತ್ತಮ ಕೆಲಸಕ್ಕೆ ತಾತ್ಕಾಲಿಕ ಅನ್ಯಾಯವನ್ನೂ ಸಹಿಸಬೇಕಂತೆ ಬಲರಾಮ ಅಪೂರ್ಣ ಕಟ್ಟಡದಲ್ಲಿ ಜೀವತುಂಬಿಕೊಳ್ಳಬೇಕಾದರೆ ಆಗುತ್ತಿರುವ ಅಪಚಾರ, ಅಪಶಕುನಗಳನ್ನೂ ಸಹಿಸುತ್ತಾ ಕೂತಿದ್ದಾನೆ. ಒಂದೂವರೆ ಕೋಟಿಲಕ್ಷ ಜನರನ್ನೇ ಮೂರ್ಖನಾಗಿಸಿದ ಯಜಮಾನ ಪರಿವಾರದ ನೆರವು ಪಡೆದುಕೊಂಡಿದ್ದಾನೆ. ಇದೇನಾಗುತ್ತಿದೆ. ವಿಶ್ವಾಮಿತ್ರರು ಕಾಡಿನ ಸನ್ಯಾಸಿಯ ಕಾಮಧೇನು ಬಯಸಿ ರಾಜ್ಯ ಬಿಟ್ಟುಕೊಡಲು ಮುಂದಾಗಿದ್ದರಲ್ಲವೆ? ಋಷಿ, ತಪಸ್ವಿಗಳಿಗೆ ಆಗು- ಹೋಗುಗಳೇ ಕಣ್ಮುಂದೆ ಕಾಣುತ್ತಿ ರುವಾಗ ಇಲ್ಲಿರುವ ತಪಸ್ವಿಗಳಿಗೆ ಈ ಅಪಶಕುನ ಕಾಣುತ್ತಿಲ್ಲವೆ?

ಅಯೋಧ್ಯೆಯಲ್ಲಿ ಎಲ್ಲವೂ ಸಾಂಗವಾಗಿ ನಡೆಯುತ್ತಿರುವಂತೆ ಭಾಸವಾಗುತ್ತಿದೆ. ಸಮೂಹಸನ್ನಿಸಗೆ ಒಳಗಾದ ಪ್ರಜೆಗಳು ಸಮ್ಮತಿಯಲ್ಲಿ ಅಜ್ಞಾನದಲ್ಲಿ, ಅಂಧಕಾರದಲ್ಲಿ ದೇಶಾದ್ಯಂತ ರಾಮಧ್ಯಾನದಲ್ಲಿ ತೇಲುತಿದ್ದಾರೆ. ಎಲ್ಲವೂ ಸಾಂಗವಾಗಿ ನಡೆಯಲಿ ಎಂದು ಪುರೋಹಿತರು ಯಜಮಾನನಿಗೆ ದಾನ ನೀಡುತಿದ್ದಾರೆ. ಯಜಮಾನ ಪುರೋಹಿತರಿಗೆ ದಾನ ನೀಡುತಿದ್ದಾನೆ!.

ದಾನ-ಧರ್ಮಗಳ ವ್ಯಹಾರದಲ್ಲಿ ರಾಜಧರ್ಮ ಕಾಣುತ್ತಿಲ್ಲ ಇದುವೇ ರಾಮರಾಜ್ಯ ಎಂದು ಯಜಮಾನ ಭ್ರಾಂತಿಗೊಳಗಾಗಿದ್ದಾನೆ. ರಾಮನ ವಾನರ ಸೇನೆಯಂತೆ ಪರಿವಾರ ಯಜಮಾನನನ್ನು ಹಿಂಬಾಲಿಸುತ್ತಿದೆ. ಯಜಮಾನ ಪರಿವಾರ ಪರಸ್ಪರ ಹಿಂಬಾಲಿಸುತ್ತಾ ಲೋಕ ಭ್ರಾಂತಿಗೊಳಗಾಯಿತು ಎಂದು ಸಂಭ್ರಮಿಸುತಿದ್ದಾರೆ.

ಎಲ್ಲವೂ ಮುಗಿದ ಮೇಲೆ ರಾಮನ ಪ್ರಾಣಪಕ್ಷಿ ಬಂತು ಎಲ್ಲೆಲ್ಲೂ ಅಪಚಾರವಾಗಿದೆಯಲ್ಲ ೨೦೨೪ ರ ಚುನಾವಣೆ ದರ್ಧಿಗೆ ಒಂದು ವರ್ಷ ಮೊದಲೇ ನನ್ನ ಪ್ರಾಣ ಪ್ರತಿಷ್ಠಾಪನೆಗೆ ಹೊರಟಿದ್ದೀರಿ. ರಾಮ ಬಂದನೋ ಎಂದೂ ನೋಡುತ್ತಿಲ್ಲ ಇನ್ನಷ್ಟು ಬೇಕೆನಗೆ ಹೃದಯಕ್ಕೆ ರಾಮ ಎನ್ನುವ ನಿಜ ಮುಗ್ಧ ರಾಮ ಭಕ್ತರ ಮನದಲ್ಲಿ ನಾನು ನೆಲೆಸಬೇಕೋ? ನಿಮ್ಮ ಶ್ರೀಮಂತಿಕೆಯ ಆಡಂಬರದ ರಾಜಕೀಯ ಅಬ್ಬರದ ತೋರಿಕೆ ಭಕ್ತಿಗೆ ಮೆಚ್ಚಬೇಕೋ?

ಯಜಮಾನ ನನ್ನ ನೆಪ, ಹೆಸರಲ್ಲಿ ಎಷ್ಟು ಕೆಡುಕು ಮಾಡಿದೆ. ನಿಮ್ಮ ಭೀಷ್ಮರೆ ನಿನಗೆ ರಾಜಧರ್ಮ ತಿಳಿಸಿದಾಗ ಅಹಂಕಾರದಿಂದ ಉಪೇಕ್ಷಿ ಸಿದೆ. ಈಗ ನಿನ್ನ ಪಾಪದ ಕೊಡ ತುಂಬುತ್ತಿದೆ. ನೀನು ಮನೆಯ ಬಂಗಾರ ಕದ್ದು ಓಡಿಹೋಗಿದ್ದಾಗ ಕ್ಷಮಿಸಿದೆ. ಚಾ ಮಾರಿದೆ, ದೇವರ ಹುಡುಕಿದೆ ಎಂದೆಲ್ಲಾ ಸುಳ್ಳುಹೇಳಿದೆ ನಿನ್ನ ಹತ್ತಾರು ತಪ್ಪುಗಳನ್ನು ನಾನು ಕ್ಷಮಿಸಿದೆ.

ರಾಜಧರ್ಮ ಮರೆದು ಧರ್ಮಾಂಧನಾಗಿ ಪ್ರಜೆಗಳ ಮಾರಣ ಹೋಮ ನಡೆಸಿದೆ ನೋಡು ಆಗ ನನಗೆ ಗಾಬರಿಯಾಯಿತು. ಅಷ್ಟರಲ್ಲಿ ನಿಮ್ಮ ಪರಿವಾರ ನನ್ನನ್ನು ಅಣು, ತೃಣ ಕಾಷ್ಠಗಳಲ್ಲಿ ಬಂಧಿಸಿ ಮುಖಕಟ್ಟಿತ್ತು. ಈಗ ಸ್ವತಂತ್ರನಾಗುತಿದ್ದೇನೆ ನಿಮ್ಮ ಆಡಂಬರದ ಉದ್ಘೋಷದ ಸಮಯಸಾಧಕತನ ನನಗೆ ಅರ್ಥವಾಗಿದೆ. ಇದೇ ಕೊನೆ ನಿನಗೆ, ನಿನ್ನ ಪರಿವಾರಕ್ಕೆ ನನ್ನ ದೇಶವನ್ನು ಅಡವಿಡಲಾರೆ. ಅಪಶಕುನ ಇದೇ ದಶಕದಲ್ಲಿ ತೀರಲಿದೆ. ನಾನು ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ ಎನ್ನುವವರ ಎದೆಯಲ್ಲೇ ನೆಲೆಸುತ್ತೇನೆ ಶ್ರೀಮಂತಿಕೆ, ಅಧಿಕಾರ ದಾಹದ ಭಕ್ತಿ, ಸೋಗಿಗೆ ನನ್ನ ಮನ ರೋಸಿದೆ. ನಾನಿನ್ನು ಹೋಗಿ ಬರುವ ಮಾತಿಲ್ಲ ಇಲ್ಲೇ ನೆಲೆಸಿ ಈವರೆಗಿನ ಪಾಪ ತೊಳೆದು ನನ್ನ ದೇಶಕ್ಕೆ ಒಳಿತು ಮಾಡುತ್ತೇನೆ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಮತ್ತೆ ಅಮೇರಿಕಾ! ಅಮೇರಿಕಾ…. ಮತ್ತೆ ರಮೇಶ್!‌

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್! 1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್,...

atm ಗೆ ನುಗ್ಗಿದ ಖಾಸಗಿ ಬಸ್…..‌ ಬಚಾವಾದ ಅಂಗಡಿಕಾರರು!

ಸಿದ್ಧಾಪುರ,ಮೇ ೧೭- ಈ ವರ್ಷದ ಸಂಭವನೀಯ ಇನ್ನೊಂದು ಅಪಘಾತದಿಂದ ಸಿದ್ಧಾಪುರ ಪಾರಾಗಿದೆ. ಇದೇ ವರ್ಷದ ಇಲ್ಲಿಯ ಅಯ್ಯಪ್ಪ ಜಾತ್ರೆಯಲ್ಲಿ ಅನಾಹುತವಾದ ಮೇಲೆ ಇಂದು ಕೂಡಾ...

ನೌಕರರು ಗಮನಿಸಲೇಬೇಕಾದ ಮಾಹಿತಿ ಇದು… ( only for employees)

*In..come Tax Act 1961 ಸೆಕ್ಷನ್ 80CCD ಅಡಿಯಲ್ಲಿ ಉದ್ಯೋಗದಾತರ NPS ಕೊಡುಗೆಯ ಕಡಿತದ ಕುರಿತು..* *(Clarification of deductions available for NPS...

ಮಳೆ ಬಂತು… ಸಿದ್ಧರಾಗಿ… ಶಾಸಕರ ಸೂಚನೆ

ಸರ್‌, ನಾವು ಮುಗದೂರಿನ ಜನ ಸಿದ್ಧಾಪುರದಿಂದ ಕೂಗಳತೆ ದೂರದಲ್ಲಿದ್ದೇವೆ ಕಳೆದ ೧೫-೨೦ ವರ್ಷಗಳಿಂದ ಈ ಗ್ರಾಮದಲ್ಲಿ ಯಾವ ಅಭಿವೃದ್ಧಿ ಕೆಲಸಗಳೂ ಆಗಿಲ್ಲ, ಚರಂಡಿ ಸ್ವಚ್ಛತೆ,...

ಅಭಿವೃದ್ಧಿಯೇ ಉತ್ತರ ಎಂದ ಭೀಮಣ್ಣ…ಯಾರ ಹೆಸರನ್ನೂ ಹೇಳದೆ ರಾಜಕೀಯ ವಿರೋಧಿಸಿದ ಶಾಸಕ!

ಪಕ್ಷ, ರಾಜಕೀಯ ಚುನಾವಣೆಯ ಭಾಗ ಅಭಿವೃದ್ಧಿಗೆ ಪಕ್ಷ, ರಾಜಕೀಯ ಅಡ್ಡಿ ಆಗಬಾರದು ಎಂದು ಶಿರಸಿ-ಸಿದ್ಧಾಪುರ ಶಾಸಕ ಭೀಮಣ್ಣ ನಾಯ್ಕ ಹೇಳಿದರು. ಸಿದ್ಧಾಪುರದಲ್ಲಿ ಪ.ಪಂ. ನ...

Latest Posts

ಮತ್ತೆ ಅಮೇರಿಕಾ! ಅಮೇರಿಕಾ…. ಮತ್ತೆ ರಮೇಶ್!‌

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್! 1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್, ಅಕ್ಷಯ್ ಆನಂದ್ ಮತ್ತು ಹೇಮಾ ಪಂಚಮುಖಿ ನಟಿಸಿದ್ದರು. ಈ ಚಿತ್ರವು ಸೂಪರ್ ಹಿಟ್ ಚಿತ್ರವಾಗಿ ಹೊರಹೊಮ್ಮಿತ್ತು. ನಾಗತಿಹಳ್ಳಿ ಚಂದ್ರಶೇಖರ್ – ರಮೇಶ್ ಅರವಿಂದ್ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಸದ್ಯ...

Recommended For You

About the Author: Kanneshwar Naik

Leave a Reply

Your email address will not be published. Required fields are marked *