

ಬಹುಮುಖಿ : ಒಡ್ಡೋಲಗ ರಂಗ ಪರ್ಯಟನದ ಹೊಸ ನಾಟಕ
ಸಿದ್ದಾಪುರ. ಪ್ರತಿ ವರ್ಷವೂ ಹೊಸದೊಂದು ನಾಟಕದೊಂದಿಗೆ ತನ್ನ ರಂಗ ಪರ್ಯಟನ ಪ್ರಾರಂಭಿಸುವ ಒಡ್ಡೋಲಗ ರಂಗಪರ್ಯಟನ ಹಿತ್ಲಕೈ ಈ ವರ್ಷ ವಿವೇಕ ಶಾನಭಾಗ ವಿರಚಿತ ಬಹುಮುಖಿ ನಾಟಕವನ್ನು ಬಹು ಆಪ್ಯಾಯಮಾನವಾಗಿ ಪ್ರಸ್ತುತಪಡಿಸಿತು. ಪಟ್ಟಣದ ಶ್ರೀ ಶಂಕರ ಮಠದಲ್ಲಿ ನಡೆದ ಮೊದಲ ಪ್ರದರ್ಶನದ ಸಂದರ್ಭದಲ್ಲಿ ರಂಗ ಸಂಚಾರ ಉದ್ಘಾಟಿಸಿದ ಪತ್ರಕರ್ತ ಹಾಗೂ ಲೇಖಕ ಗಣೇಶ ಅಮ್ಮಿನಗಡ ನಾಟಕದ ಪಠ್ಯ ರಂಗದಲ್ಲಿ ಅಭಿನಯಗೊಳ್ಳುವುದನ್ನು ಪ್ರೇಕ್ಷಕರು ನೋಡಿ ಆನಂದಿಸಬೇಕು.ಅದರಿಂದ ನಮ್ಮ ಮನಸ್ಸು ಆರೋಗ್ಯಕರವಾಗಿರುತ್ತ ದೆ ಎಂದರು. ಕದಂಬ ಸೈನ್ಯದ ಸಂಸ್ಥಾಪಕ ಅಧ್ಯಕ್ಷ ಬೇಕ್ರಿ ರಮೇಶ ಮಂಡ್ಯ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಒಡ್ಡೋಲಗ ತಂಡದ ರಂಗ ಕಾಯಕವನ್ನು ಪ್ರಶಂಸಿದರು.
ಗಂಗಾಧರ ಕೊಳಗಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರಾಚಾರ್ಯ ಎಂ.ಕೆ.ನಾಯ್ಕ ಹೊಸಳ್ಳಿ ಸ್ವಾಗತಿಸಿ ಪರಿಚಯಿಸಿದರು. ಪ್ರಜ್ಞಾ ಹಿತ್ಲಕೈ ವಂದಿಸಿದರು. ಸಂಧ್ಯಾ ಶಾಸ್ತ್ರಿ ನಿರೂಪಿಸಿದರು. ರೋಚಕ ಕತೆಯನ್ನು ಓದುಗರಿಗೆ ಕೊಡಬೇಕೆಂದು ಸುದ್ದಿಯನ್ನು ಬೆನ್ನಟ್ಟಿಹೋಗುವ ಪತ್ರಕರ್ತನಿಗೆ ಎದುರಾಗುವ ಜಗತ್ತು, ನಮ್ಮ ದಿನನಿತ್ಯದ ಬದುಕನ್ನು ಅನೇಕ ವಿಧಗಳಲ್ಲಿ ಪ್ರಭಾವಿಸುವ ಮಾಧ್ಯಮಗಳು ಮುಂತಾದ ವಿಷಯಗಳ ಸುತ್ತ ತಳುಕು ಹಾಕುವ ಬಹುಮುಖಿ ನಾಟಕ ಒಡ್ಡೋಲಗ ತಂಡದ ಗಣಪತಿ ಬಿ ಹಿತ್ಲಕೈ ಅವರ ನಿರ್ದೇಶನದಲ್ಲಿ ಮೊದಲ ಪ್ರಯೋಗದಲ್ಲೆ ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶಸ್ಸು ಕಂಡಿತು. ನಾಗರಾಜ ಬರೂರು, ಮಾಧವ ಶರ್ಮ ಕಲಗಾರ, ಕೇಶವ ಹೆಗಡೆ ಕಿಬ್ಳೆ, ಪುಷ್ಪಾ ರಾಘವೇಂದ್ರ ಸಾಗರ, ಪ್ರಸನ್ನಕುಮಾರ ಎನ್.ಎಮ್. ಸಾಗರ, ಗಣಪತಿ ಬಿ ಹಿತ್ತಲಕೈ, ಶ್ರೀರಾಮ ಗೌಡ ಹೊಸೂರು, ಸಂಧ್ಯಾ ಶಾಸ್ರ್ರಿ ಭೈರುಂಬೆ, ನವೀನಕುಮಾರ ಕುಣಜಿ, ಪ್ರೀತಿ ಹೆಗಡೆ, ನಂದಿತಾ ಭಾಗ್ವತ್ ಯಲ್ಲಾಪುರ, ಯೋಗೇಶ ಕುಣಜಿ, ಸಮರ್ಥ ಹೊನ್ನೆಕೈ ನಾಟಕದ ವಿವಿಧ ಪಾತ್ರಗಳಿಗೆ ಜೀವತುಂಬಿ ಅಭಿನಯಿಸಿದರು.
