



ಸಿದ್ಧಾಪುರ ತಾಲೂಕಿನ ನೂತನ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿ ಎಂ.ಎಚ್. ನಾಯ್ಕ ಇಂದು ಅಧಿಕಾರ ವಹಿಸಿಕೊಂಡರು. ಸಿದ್ಧಾಪುರ ಮೂಲದ ಮಂಜುನಾಥ ಹನುಮಂತ ನಾಯ್ಕ ಕಾನಗೋಡು ಶಿರಸಿ ಶೈಕ್ಷಣಿಕ ಜಿಲ್ಲಾ ಉಪ ನಿರ್ಧೇಶಕರ ಕಛೇರಿಯಲ್ಲಿ ಕ್ಷೇತ್ರಶಿಕ್ಷಣಾಧಿಕಾರಿಗಳ ಹುದ್ದೆ ನಿರ್ವಹಿಸುತಿದ್ದರು.

ಜ.೩೧ ರಂದು ಹಿಂದಿನ ಬಿ.ಇ.ಒ. ಜಿ.ಆಯ್. ನಾಯ್ಕ ನಿವೃತ್ತರಾದ ಹಿನ್ನೆಲೆಯಲ್ಲಿ ಎಂ. ಎಚ್.ನಾಯ್ಕ ಈಗ ಪ್ರಭಾರಿಯಾಗಿ ಈ ಹುದ್ದೆಗೆ ನಿಯೋಜನೆಗೊಂಡಿದ್ದಾರೆ. ಉತ್ತಮ ಆಡಳಿತಾಧಿಕಾರಿ,ಶಿಸ್ತಿನ ಅಧಿಕಾರಿಯಾಗಿರುವ ಎಂ. ಎಚ್. ನಾಯ್ಕ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಇಲ್ಲೇ ಮುಂದುವರಿಯಬೇಕು ಎನ್ನುವ ಬೇಡಿಕೆ ಸಾರ್ವಜನಿಕ ವಲಯದಲ್ಲಿದೆ.
ಶಿವಮೊಗ್ಗ, ಹಾವೇರಿ,ಉತ್ತರ ಕನ್ನಡ ಜಿಲ್ಲೆಗಳಲ್ಲಿ ಕಳೆದ ಎರಡು ದಶಕಗಳಿಂದ ಶಿಕ್ಷಣ ಇಲಾಖೆಯಲ್ಲಿ ನಾನಾ ಹುದ್ದೆಗಳಲ್ಲಿ ಕೆಲಸ ಮಾಡಿರುವ ಅವರಿಗೆ ಉತ್ತಮ ಆಡಳಿಗಾರ ಎನ್ನುವ ಹೆಸರಿದೆ.

