ಸಿದ್ಧಾಪುರದ ಮೂರನೇ ಮಂತ್ರ ಮಾಂಗಲ್ಯ ಮದುವೆ ಇಂದು ಇಲ್ಲಿಯ ಐಗೋಡಿನಲ್ಲಿ ನಡೆಯಿತು. ನಿವೃತ್ತ ಶಿಕ್ಷಕ ರಾಮಚಂದ್ರ ಪಿ ನಾಯ್ಕರ ಏಕೈಕ ಪುತ್ರ ಹರ್ಷವರ್ಧನ್ ರವೀಂದ್ರ ನಗರದ ಮಮತಾರ ಸರಳ ಮಂತ್ರ ಮಾಂಗಲ್ಯ ವಿವಾಹ ಸಮಾರಂಭಕ್ಕೆ ನೂರಾರು ಜನರು ಸಾಕ್ಷಿಯಾದರು.
ಕಾವಂಚೂರು ಹಿತ್ತಲಕೊಪ್ಪದ ಸಿ.ಎ. ಶಂಕರ್ ನಂತರ ಪತ್ರಕರ್ತ ಕನ್ನೇಶ್ ಕೋಲಶಿರ್ಸಿ ಹಿಂದೆ ಮಂತ್ರಮಾಂಗಲ್ಯ ಪದ್ಧತಿಯಲ್ಲಿ ವಿವಾಹವಾಗಿದ್ದರು.
ಇಂದಿನ ಮಂತ್ರಮಾಂಗಲ್ಯ ವಿವಾಹ ಸಮಾರಂಭದಲ್ಲಿ ಮಂತ್ರ ಮಾಂಗಲ್ಯ ಭೋದಿಸಿದ ಹಿರಿಯ ಹೋರಾಟಗಾರ ರಾಜಪ್ಪ ಮಾಸ್ತರ್ ಸೊರಬಾ ತಮ್ಮ ಮಂತ್ರಮಾಂಗಲ್ಯ ವಿವಾಹ(ದ) ಸ್ಮರಿಸಿ ಜಾಗೃತಿಯ ಮಾತುಗಳನ್ನಾಡಿದರು.
ನಂತರ ಕನ್ನೇಶ್ ಕೋಲಶಿರ್ಸಿ ಮತ್ತು ಸುಮತಿ ನಾಯ್ಕ ಕಟ್ರನ್ ಶುಭಾಶಯ ತಿಳಿಸಿದರು. ಹೋರಾಟಗಾರ ನಾಗಪ್ಪಮಾಸ್ತರ್ ಪ್ರಾಸ್ಥಾವಿಕ ಮಾತುಗಳನ್ನಾಡಿ ಮಂತ್ರಮಾಂಗಲ್ಯದ ಮಹತ್ವ ತಿಳಿಸಿದರು. ಮದುವೆಗೆ ಶುಭ ಕೋರಿದ ನೂರಾರು ಜನರು ಮಂತ್ರಮಾಂಗಲ್ಯ ಮದುವೆ ಪದ್ಧತಿ ಬಗ್ಗೆ ಮೆಚ್ಚುಗೆಯ ಮಾತನಾಡಿದರು.