ಉತ್ತರ ಕನ್ನಡ ಜಿಲ್ಲೆಯಲ್ಲಿ ಬಿ.ಜೆ.ಪಿ.ಯ ಮೂರ್ನಾಲ್ಕು ಬಣಗಳ ರಾಜಕಾರಣ ಪಕ್ಷಕ್ಕೆ ತಲೆನೋವಾಗಿದೆ. ಅನಂತಕುಮಾರ ಹೆಗಡೆಯವರನ್ನು ಉದ್ದೇಶಪೂರ್ವಕವಾಗಿ ಮೂಲೆಗುಂಪು ಮಾಡಲು ಹೊರಟಿರುವ ಬಿ.ಜೆ.ಪಿ. ಮಾಜಿ ಸ್ಫೀಕರ್ ಕಾಗೇರಿಯವರನ್ನು ಅವರ ವಿರುದ್ಧ ಎತ್ತಿ ಕಟ್ಟಿ ಮಜಾ ನೋಡುತ್ತಿದೆ. ಬ್ರಾಹ್ಮಣರ ಓಲೈಕೆಯೇ ಶಾಪವಾಗಿರುವ ಬಿ.ಜೆ.ಪಿ.ಗೆ ಕೋಣೆಮನೆ ಅಭ್ಯರ್ಥಿಯಾದರೆ ಅನಂತಕುಮಾರ ಮತ್ತು ವಿಶ್ವೇಶ್ವರ ಹೆಗಡೆಗಳು ಅವರ ವಿರುದ್ಧ ಕೆಲಸಮಾಡುವುದರಿಂದ ಕೋಣೆಮನೆ ವಿರುದ್ಧ ಕಾಂಗ್ರೆಸ್ ಗೆಲ್ಲುವ ಲಕ್ಷಣಗಳು ಗರಿಗೆದರಿವೆ. ಒಟ್ಟಾರೆ ಬಿ.ಜೆ.ಪಿ.ಗೆ ಬ್ರಾಹ್ಮಣರ ಒಲೈಕೆಯೇ ಶಾಪವಾದರೆ…ಕಾಂಗ್ರೆಸ್ ಗ್ಯಾರಂಟಿ, ಅಹಿಂದ ಮತಗಳಿಂದ ಗೆಲುವನ್ನು ಖಾತರಿಪಡಿಸಿಕೊಳ್ಳುತ್ತಿದೆ ಎನ್ನುವ ವಿಶ್ಲೇಷಣೆಗಳಿವೆ.
ಕೇಂದ್ರದಲ್ಲಿ ಮೋದಿ ಸುಳ್ಳಿನ ಸಾಂಮ್ರಾಜ್ಯ ಕಟ್ಟುತಿದ್ದಾರೆ ಇದಕ್ಕೆ ದೃಷ್ಟಾಂತ ಅವರ ಒ.ಬಿ.ಸಿ. ನಾಟಕ ಎನ್ನುವ ಚರ್ಚೆ ನಡೆಯುತ್ತಿದೆ.
ಜಾತಿ ಹುಟ್ಟಿನಿಂದ ನಿರ್ಧಾರವಾಗುವುದರಿಂದ ೨೦೦೦ ನೇ ಇಸ್ವಿಗಿಂತ ಮೊದಲು ಬ್ರಾಹ್ಮಣ/ ಬನಿಯಾ ಆಗಿದ್ದ ಮೋದಿ ಹಿಂದುಳಿದವರೆನ್ನುವುದು ಬಿ.ಜೆ.ಪಿ. ಸಹಸ್ರಾರು ಸುಳ್ಳುಗಳಲ್ಲಿ ಒಂದ ಅಷ್ಟೇ.
ರಾಜ್ಯದಲ್ಲಿ ಗುಂಡು ಹೊಡೆದುಕೊಂಡೇ ಮಾತನಾಡುವಂತಿರುವ ಈಶ್ವರಪ್ಪ ಆಡಿದ ಗುಂಡು ಹೊಡೆಯುವ ಮಾತು ಅವರ ಅಪದ್ಧಗಳ ಸಾಲಿಗೆ ಸೇರಿದ ನೂರಾರು ಹೇಳಿಕೆಗಳಲ್ಲಿ ಒಂದಷ್ಟೇ.
ಇಷ್ಟರ ನಡುವೆ ಜಿಲ್ಲಾ ಮಟ್ಟಕ್ಕೆ ಬರುವುದಾದರೆ ಉತ್ತರ ಕನ್ನಡ ಲೋಕಸಭೆ ಕ್ಷೇತ್ರಕ್ಕೆ ಬಿ.ಜೆ.ಪಿ. ಯಿಂದ ರೂಪಾಲಿ ನಾಯ್ಕ, ಕಾಂಗ್ರೆಸ್ ನಿಂದ ಅಂಜಲಿ ನಿಂಬಾಳ್ಕರ್ ಅಭ್ಯರ್ಥಿಗಳಾಗುವ ವಿಚಾರದಲ್ಲಿ ಸ್ಫರ್ಧೆ ನಡೆಯುತ್ತಿದೆ.
ಶಿವಮೊಗ್ಗದಲ್ಲಿ ಗೀತಾ ಶಿವರಾಜ್ ಕುಮಾರರಿಗೆ ಕಾಂಗ್ರೆಸ್ ಟಿಕೇಟ್ ನೀಡುವ ಮೂಲಕ ಈಡಿಗ ಮತ್ತು ಮಹಿಳಾ ಕೋಟಾ ಮುಗಿಸುವ ಹುನ್ನಾರದಲ್ಲಿರುವ ಕಾಂಗ್ರೆಸ್ ಉತ್ತರ ಕನ್ನಡದಲ್ಲಿ ಅಂಜಲಿ ನಿಂಬಾಳ್ಕರ್ ರಿಗೆ ಟಿಕೇಟ್ ನೀಡಬಹುದು ಎನ್ನುವ ಸಾಧ್ಯತೆ ಕಡಿಮೆ.
ಕಿತ್ತೂರು ಮತ್ತು ಖಾನಾಪುರ ವಿಧಾನಸಭಾ ಕ್ಷೇತ್ರಗಳನ್ನು ಸೇರಿಸಿಕೊಂಡಿರುವ ಉತ್ತರ ಕನ್ನಡ ಲೋಕಸಭಾ ಕ್ಷೇತ್ರಕ್ಕೆ ಈಡಿಗರಿಗೆ ಅವಕಾಶ ನೀಡಿದರೆ ಗೆಲ್ಲುವ ಸಾಧ್ಯತೆ ಹೆಚ್ಚು. ಬಹುಸಂಖ್ಯಾತ ಈಡಿಗರ ಪ್ರಬಲ ಸ್ಫರ್ಧೆ ಇಲ್ಲದ ಕಳೆದ ಆರೇಳು ಲೋಕಸಭಾ ಚುನಾವಣೆಗಳಲ್ಲಿ ಅನಂತಕುಮಾರ ಅನಾಯಾಸವಾಗಿ ಗೆದ್ದಿರುವ ಹಿಂದೆ ಕಾಂಗ್ರೆಸ್ ನ ಅಲ್ಪಸಂಖ್ಯಾತರ ರಾಜಕಾರಣಕ್ಕೆ ಉತ್ತರ ಕನ್ನಡಿಗರು ಕೊಟ್ಟ ಏಟು ಕಾರಣ ಎನ್ನುವ ವಿಶ್ಲೇಷಣೆಗಳಿವೆ.
ಅಂಜಲಿ ನಿಂಬಾಳ್ಕರ್ ತವರಾಗಿರುವ ಬೆಳಗಾವಿ ಜಿಲ್ಲೆಯ ಕಿತ್ತೂರು, ಖಾನಾಪುರಗಳಲ್ಲಿ ಅನಂತಕುಮಾರ ಬೇಡ ಎನ್ನುವ ಅಭಿಯಾನ ಶುರುವಾಗಿದೆ. ಅನಂತ ಬದಲು ಅಂಜಲಿ ನಿಂಬಾಳ್ಕರ್ ನಿಮ್ಮ ಆಯ್ಕೆಯಾಗಬಹುದೆ ಎಂದರೆ…. ಅಂಜಲಿ ಬೆಳಗಾಂವ ನ್ಯಾಗೆ ಎಲ್ಲಿ ಇರತಾರ್ರಿ ಅವರನ್ನು ಹುಡ್ಕಾಕ್ ಬೆಂಗಳೂರಿಗೆ ಹೋಗಬೇಕ್ರಿ ಎನ್ನುವ ಸಾರ್ವಜನಿಕರ ಮಾತು ಅನಂತಕುಮಾರ ಹೆಗಡೆ ಮತ್ತು ಅಂಜಲಿ ನಿಂಬಾಳ್ಕರ್ ವಿರುದ್ಧ ಕಿತ್ತೂರು, ಖಾನಾಪುರ ಇರುವುದಕ್ಕೆ ಖಾತ್ರಿ.
ಇದರ ಮಧ್ಯೆ ಉತ್ತರ ಕನ್ನಡದ ಬಿ.ಜೆ.ಪಿ. ಅಭ್ಯರ್ಥಿ ಎಂದು ಬಿ.ಜೆ.ಪಿ. ತೇಲಿಬಿಡುತ್ತಿರುವ ಹೆಸರುಗಳು ಈಗಾಗಲೇ ಒಂದು ಡಜನ್ ತಲುಪಿವೆ. ಇವುಗಳಲ್ಲಿ ತೇಜಸ್ವಿ ಸೂರ್ಯ, ಚಕ್ರವರ್ತಿ ಸೂಲಿಬೆಲೆ, ಅಜಿತ್ ಹನುಮಕ್ಕನವರ್, ಕೋಣೆಮನೆ ಎನ್ನುವ ಹೆಸರುಗಳಿರುವುದು ಚುನಾವಣೆ ಮೊದಲೇ ಬಿ.ಜೆ.ಪಿ. ಸೋಲು ಖಾತ್ರಿ ಪಡಿಸಿಕೊಳ್ಳುವಂತಿದೆ.
ಇದರ ಮಧ್ಯೆ ಮರಾಠರಾಗಿರುವ ಬಿ.ಜೆ.ಪಿ. ರೂಪಾಲಿ ವಿರುದ್ಧ ಕಾಂಗ್ರೆಸ್ ನ ದೀವರು, ನಾಮಧಾರಿಗಳ ಅಭ್ಯರ್ಥಿಯಾದರೆ ಚುನಾವಣೆಗೆ ಕಳೆ ಬರಲಿದೆ ಎನ್ನುವ ಮಾತು ಕೇಳಿ ಬರುತ್ತಿದೆ.
ಬಿ.ಜೆ.ಪಿ. ವಿರುದ್ಧ ಕಾಂಗ್ರೆಸ್ ನ ಬ್ರಾಹ್ಮಣ ಸ್ಫರ್ಧಿಗಳಾದರೆ ಉತ್ತಮ ಎನ್ನುವವರು ದೇಶಪಾಂಡೆ,ಶಿವರಾಮ್ ಹೆಬ್ಬಾರ್ ಅಥವಾ ದೀಪಕ್ ದೊಡ್ಡೂರು ಅಂಥವರು ಉತ್ತಮ ಎನ್ನುತಿದ್ದಾರೆ. ಆದರೆ ದೇಶಪಾಂಡೆಯವರಿಗೆ ಆಸಕ್ತಿ ಇಲ್ಲ, ಶಿವರಾಮ್ ಹೆಬ್ಬಾರ್ ಕಾಂಗ್ರೆಸ್ ಸೇರುವ ಖಾತ್ರಿ ಇಲ್ಲ. ದೀಪಕ್ ಧೈರ್ಯ ಮಾಡುತ್ತಿಲ್ಲ ಎನ್ನುತಿದ್ದಾರೆ.
ಈ ವರ್ಷ ಹುರುಪು ತೋರಿಸುತ್ತಿರುವವರಲ್ಲಿ ಮಾಜಿ ಸ್ಫೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಉದ್ಯಮಿ ಅನಂತಮೂರ್ತಿ ಹೆಗಡೆ, ಶಿರಸಿಯ ಎ. ರವೀಂದ್ರ, ಸಿದ್ಧಾಪುರದ ಜಿ.ಟಿ. ನಾಯ್ಕ ಸೇರಿದ್ದಾರೆ. ಆದರೆ ತಾನೊಂದು ಬಗೆದರೆ ದೈವವೊಂದು ಬಗೆಯಿತು ಎನ್ನುವಂತೆ ಎರಡೂ ಪಕ್ಷಗಳಲ್ಲಿ ಈಗ ಚಾಲ್ತಿಯಲ್ಲಿರುವ ಹೆಸರುಗಳ ಬದಲು ಅನ್ಯರು ಸ್ಫರ್ಧಿಗಳಾಗುವ ಸಾಧ್ಯತೆ ತಳ್ಳಿಹಾಕುವಂತಿಲ್ಲ ಎನ್ನುವ ವರ್ತಮಾನವಿದೆ. ಈ ಕ್ಷಣಕ್ಕೆ ಬಿ.ಜೆ.ಪಿ. ಮತ್ತು ಕಾಂಗ್ರೆಸ್ ಗಳಿಂದ ನಾಮಧಾರಿ ವಿರುದ್ಧ ಮರಾಠ ಅಥವಾ ಮರಾಠ ವಿರುದ್ಧ ದೀವರು/ ನಾಮಧಾರಿ ಆದರೆ ಸ್ಫರ್ಧೆಯ ರೋಚಕತೆ ಹೆಚ್ಚು ಎನ್ನುವ ಅಭಿಪ್ರಾಯ ವ್ಯಾಪಕವಾಗಿದೆ.