

ದೇಶದಲ್ಲಿ ಅತಿ ಹೆಚ್ಚು ಆದಾಯ ತರುವ ಸ್ಮಾರಕವಾಗಿ ಹೊರಹೊಮ್ಮಿದ ತಾಜ್ ಮಹಲ್
ಪ್ರೇಮಸೌಧ ತಾಜ್ ಮಹಲ್ ಪ್ರವಾಸಿಗರ ಆಕರ್ಷಣೆಯಲ್ಲಿ ಮುಂಚೂಣಿಯಲ್ಲಿದ್ದು, ದೇಶದಲ್ಲಿಯೇ ಅತಿ ಹೆಚ್ಚು ಆದಾಯ ತರುವ ಸ್ಮಾರಕವಾಗಿ ಹೊರಹೊಮ್ಮಿದೆ.

ನವದೆಹಲಿ: ಪ್ರೇಮಸೌಧ ತಾಜ್ ಮಹಲ್ ಪ್ರವಾಸಿಗರ ಆಕರ್ಷಣೆಯಲ್ಲಿ ಮುಂಚೂಣಿಯಲ್ಲಿದ್ದು, ದೇಶದಲ್ಲಿಯೇ ಅತಿ ಹೆಚ್ಚು ಆದಾಯ ತರುವ ಸ್ಮಾರಕವಾಗಿ ಹೊರಹೊಮ್ಮಿದೆ.
ಪ್ರವಾಸೋದ್ಯಮ ಸಚಿವಾಲಯದ ಅಂಕಿಅಂಶಗಳ ಪ್ರಕಾರ, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ(ASI) ಮಾರಾಟ ಮಾಡಿದ ಟಿಕೆಟ್ ನಿಂದ ತಾಜ್ ಮಹಲ್ ಈ ವರ್ಷ 81.89 ಕೋಟಿ ರೂಪಾಯಿ ಆದಾಯ ಗಳಿಸಿದೆ.
2022-23ರಲ್ಲಿ ತಾಜ್ ಮಹಲ್ 81.89 ಕೋಟಿ ರೂ ಆದಾಯ ಗಳಿಸಿದೆ. ಇದು ಎಎಸ್‌ಐನ ಒಟ್ಟು ಟಿಕೆಟ್(252.85 ಕೋಟಿ ರೂಪಾಯಿ) ಮಾರಾಟದ ಸುಮಾರು ಮೂರನೇ ಒಂದು ಭಾಗದಷ್ಟು ಎಂದು ಅಂಕಿ ಅಂಶಗಳು ಬಹಿರಂಗಪಡಿಸಿವೆ.
ಆದಾಗ್ಯೂ, ಇದು ಕೋವಿಡ್‌ಗೂ ಮೊದಲು ದಾಖಲಿಸಿದ ಗರಿಷ್ಠ ವಾರ್ಷಿಕ ಆದಾಯ 106.83 ಕೋಟಿಗಿಂತ ಇನ್ನೂ ಕಡಿಮೆಯಾಗಿದೆ. ಸಾಂಕ್ರಾಮಿಕ ರೋಗದಿಂದಾಗಿ 2022-21ರ ಅವಧಿಯಲ್ಲಿ ದೇಶದ ಅತಿ ಹೆಚ್ಚು ಪ್ರವಾಸಿಗರು ಭೇಟಿ ತಾಜ್ ಮಹಲ್ ಆದಾಯ 11.29 ಕೋಟಿಗೆ ಕುಸಿದಿತ್ತು.
ಕೋವಿಡ್ ನಂತರ ಪ್ರೇಮ ಸೌಧಕ್ಕೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದ್ದು, 2022-23ರಲ್ಲಿ ಟಿಕೆಟ್ ಮಾರಾಟದಿಂದ 81.89 ಕೋಟಿ ರೂಪಾಯಿ ಆದಾಯ ಗಳಿಸಿದೆ.
2022-23ರಲ್ಲಿ ಕೇವಲ 15.32 ಕೋಟಿ ರೂ.ಗಳನ್ನು ಸಂಗ್ರಹಿಸುವಲ್ಲಿ ಯಶಸ್ವಿಯಾದ ಅದೇ ನಗರದ ಆಗ್ರಾ ಕೋಟೆ ಆದಾಯ ಗಳಿಕೆಯಲ್ಲಿ ಎರಡನೆ ಸ್ಥಾನದಲ್ಲಿದೆ.
ಮೂರನೇ ಸ್ಥಾನದಲ್ಲಿರುವ ದೆಹಲಿಯ ಕುತುಬ್ ಮಿನಾರ್ 12.97 ಕೋಟಿ ಆದಾಯ ಗಳಿಸಿದೆ. ದೆಹಲಿಯ ಕೆಂಪು ಕೋಟೆ 12.88 ಕೋಟಿ ರೂಪಾಯಿ ಆದಾಯ ಗಳಿಸಿದೆ. (kpc)
