ಕಾಂಗ್ರೆಸ್ ಈ ಶತಮಾನದ ಉತ್ತಮ ತೀರ್ಮಾನ ಎನ್ನುವಂತೆ ಉತ್ತರ ಕನ್ನಡ ಜಿಲ್ಲೆಯ ಲೋಕಸಭಾ ಕ್ಷೇತ್ರಕ್ಕೆ ಕುಮಟಾದ ಸೂರಜ್ ನಾಯ್ಕ ಸೋನಿಯವರನ್ನು ಅಭ್ಯರ್ಥಿಯನ್ನಾಗಿಸಲು ನಿರ್ಧರಿಸಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲಬೇಕಾದ ಸೂರಜ್ ಸೋನಿಯನ್ನು ಹಿಕಮತ್ತಿನಿಂದ ಸೋಲಿಸುವಲ್ಲಿ ಯಶಸ್ವಿಯಾದ ಬಿ.ಜೆ.ಪಿ. ಕೇವಲ ೫೦೦ ಮತಗಳಿಗಿಂತ ಕಡಿಮೆ ಅಂತರದಲ್ಲಿ ಗೆದ್ದಿತ್ತು.
ಈ ಗೆಲುವಿನ ಹಿಂದೆ ಬಿ.ಜೆ.ಪಿ. ಕರಾಮತ್ತು ಇರುವ ಬಗ್ಗೆ ಈಗಲೂ ಚರ್ಚೆಯಾಗುತ್ತಿದೆ.
ಆದರೆ ಸೂರಜ್ ಸೋನಿ ಅಲ್ಪಾಂತರದಿಂದ ಸೋತ ನಂತರ ಜೆ.ಡಿ.ಎಸ್. ಬಗ್ಗೆ ಅಥವಾ ಬಿ.ಜೆ.ಪಿ. ಬಗ್ಗೆ ಮಾತನಾಡದೆ ಸುಮ್ಮನಿದ್ದರು. ವಿಧಾನಸಭೆ ಚುನಾವಣೆಯಲ್ಲಿ ಸೋತ ಸೂರಜ್ ನಾಯ್ಕ ಬಗ್ಗೆ ಬರೀ ಕುಮಟಾ ಮಾತ್ರವಲ್ಲದೆ ಜಿಲ್ಲೆ, ರಾಜ್ಯ ಮರಗಿತ್ತು.
ಈಗ ಕಾಲ ಬದಲಾಗಿದೆ. ಜಾತ್ಯಾತೀತ ಶಬ್ಧಕ್ಕೆ ಅಪವಾದವಾದ ಜನತಾದಳ ಎಸ್. ಬಿ.ಜೆ.ಪಿ.ಯಲ್ಲಿ ಲೀನವಾಗಿ ಕಳೆದುಹೋಗಿದೆ.ಐ.ಟಿ. ಈಡಿಗಳಿಗೆ ಹೆದರಿದ ಕುಮಾರಸ್ವಾಮಿ ಮೋದಿಯ ಐಟಿ. ಈಡಿಗಳಿಗೆ ಉತ್ತರ ವಾಗಿ ಕೋಮುವಾದಿಯಾಗಿ ಬದಲಾಗಿದ್ದಾರೆ. ಜೆ.ಡಿ.ಎಸ್. ಇಬ್ಭಾಗವಾಗಿ ಸಮಾನಮನಸ್ಕರು ಬಿ.ಜೆ.ಪಿ. ಜೊತೆಗೆ ಸೇರದಿರಲು ತೀರ್ಮಾನಿಸಿ ಕುಮಾರಸ್ವಾಮಿ ನಿರ್ಣಯಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.
ಹಿಂದೆ ಜೆ.ಡಿ.ಎಸ್. ನಲ್ಲಿದ್ದ ಸೂರಜ್ ಸೋನಿ ಅದಕ್ಕಿಂತ ಮೊದಲು ಬಿ.ಜೆ.ಪಿ.ಯಲ್ಲಿದ್ದರು ಎನ್ನುವುದು ಈಗ ಇತಿಹಾಸ.
ಅನುಕಂಪ ದೊಂದಿಗೆ. ಉತ್ತಮ ಹೆಸರು ಇಟ್ಟುಕೊಂಡಿರುವ ಸೂರಜ್ ನಾಯ್ಕ ಸೋನಿ ಹಿಂದಿನಿಂದಲೂ ಬಂಗಾರಪ್ಪ ಕುಟುಂಬದ ಆಪ್ತರಾಗಿದ್ದು ಈ ಸಂಬಂಧ, ಸಂಪರ್ಕಗಳ ಹಿನ್ನೆಲೆಯಲ್ಲಿ ೨೦೨೪ ರ ಲೋಕಸಭೆ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿಯಾಗಲು ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ. ಇತ್ತೀಚೆಗೆ ಎರಡ್ಮೂರು ಬಾರಿ ಸಚಿವ ಮಧು ಬಂಗಾರಪ್ಪ ಮತ್ತು ಶಾಸಕ ಭೀಮಣ್ಣ ನಾಯ್ಕ ರನ್ನು ಸಂಪರ್ಕಿಸಿರುವ ಸೂರಜ್ ಕಾಂಗ್ರೆಸ್ ಅವಕಾಶ ನೀಡಿದರೆ ಒಂದು ಕೈ ನೋಡೇ ಬಿಡುತ್ತೇನೆ ಎಂದಿದ್ದಾರೆ.
ಅಂತ:ಕಲಹ, ಮೇಲಜಾತಿ ತುಷ್ಟೀಕರಣದ ಬಿ.ಜೆ.ಪಿ. ಹಿಂದುಳಿದ ವರ್ಗಗಳು ಸೇರಿದ ಅಹಿಂದ್ ವಿರೋಧಿ. ಉತ್ತರ ಕನ್ನಡ ಜಿಲ್ಲೆಯಲ್ಲಂತೂ ಮೂರ್ನಾಲ್ಕು ಬಣಗಳಿಂದ ಕಂಗಾಲಾಗಿರುವ ಬಿ.ಜೆ.ಪಿ.ಯಲ್ಲಿ ಲೋಕಸಭೆ ಚುನಾವಣೆಗೆ ತಯಾರಾದ ಅನೇಕರಿದ್ದರೂ ಗೆಲುವು ಅವರಿಗೆ ಸುಲಭವಿಲ್ಲ. ಈಗಿನ ಅಭ್ಯರ್ಥಿ ಅನಂತಕುಮಾರ ಹೆಗಡೆಯವರಿಗೆ ಕ್ಷೇತ್ರದಾದ್ಯಂತ ಆಡಳಿತ ವಿರೋಧಿ ಅಲೆಯ ಜೊತೆಗೆ ಅವರ ಅವಿವೇಕದ ಮಾತು ಮೇಲ್ಜಾತಿ ತುಷ್ಠೀಕರಣದ ಕೋಮುವಾದಿ ಹಿಂದುತ್ವವೇ ಮಾರಕವಾಗಲಿದೆ.
ಅಹಿಂದ ಪರವಿರುವ ಕಾಂಗ್ರೆಸ್ ಗೆ ಉತ್ತರ ಕನ್ನಡ ಲೋಕಸಭಾ ಕ್ಷೇತ್ರ ಸುರಕ್ಷಿತ ಸ್ಥಳ ಆದರೆ ಕಾಂಗ್ರೆಸ್ ನ ಮೇಲ್ಜಾತಿ ರಾಜಕಾರಣ ಕಳೆದ ಮೂವತ್ತು ವರ್ಷಗಳಿಂದ ಕೆನರಾ ಅಥವಾ ಉತ್ತರ ಕನ್ನಡದಲ್ಲಿ ಬಹುಸಂಖ್ಯಾತ ದೀವರು, ಮರಾಠರು ಸ್ಫರ್ಧಿಸಲು ಅವಕಾಶ ನೀಡಿರಲಿಲ್ಲ. ಕಾಂಗ್ರೆಸ್ ನ ಈ ಸೋಗಲಾಡಿ ರಾಜಕಾರಣದ ಫಲವಾಗಿ ನಿರಂತರವಾಗಿ ಗೆದ್ದ ಅನಂತಕುಮಾರ ಹೆಗಡೆ ಸಾಧನೆ ಶೂನ್ಯ. ಅನಂತಕುಮಾರ ಹೆಗಡೆಗಿರುವ ವಿರೋಧದ ಕಾರಣಕ್ಕಾಗಿ ಹೊಸ ಮುಖಕ್ಕೆ ಅವಕಾಶ ನೀಡಲು ಯೋಚಿಸುತ್ತಿರುವ ಬಿ.ಜೆ.ಪಿ. ವಾಸ್ತವ ಅರಿಯದ ಬ್ರಮಾಲೋಕದಲ್ಲಿದೆ. ಕಾಂಗ್ರೆಸ್ ಗ್ಯಾರಂಟಿ ಫಲಾನುಭವಿಗಳು ಬಿ.ಜೆ.ಪಿ. ಧಾರ್ಮಿಕ ನಾಟಕ ನೋಡಿ ಸಾಕಾಗಿದೆ. ಬಿ.ಜೆ.ಪಿ.ಯ ಹಿಂದುತ್ವದ ಸುಳ್ಳಿಗಿಂತ ಕಾಂಗ್ರೆಸ್ ಜನಪರ ಯೋಜನೆಗಳಿಗೆ ನಮ್ಮ ಮತ ಎನ್ನತೊಡಗಿದ್ದಾರೆ. ಈ ಅವಕಾಶ ಬಳಸಿಕೊಳ್ಳಲು ಯೋಚಿಸುತ್ತಿರುವ ಕಾಂಗ್ರೆಸ್ ಬಿ.ಜೆ.ಪಿ., ಜೆ.ಡಿ.ಎಸ್. ಗಳಿಂದ ಮೋಸಹೋಗಿ ಜನರ ಅನುಕಂಪಕ್ಕೀಡಾಗಿರುವ ಸೂರಜ್ ಸೋನಿ ಎಲ್ಲಾ ದ್ರಷ್ಟಿಯಿಂದ ಗೆಲ್ಲುವ ಅಭ್ಯರ್ಥಿ ಎನ್ನುವ ತೀರ್ಮಾನಕ್ಕೆ ಬಂದಿದೆ.
ಸೂರಜ್ ಸೋನಿ ಮತ್ತು ಕಾಂಗ್ರೆಸ್ ನ ಹೊಸ ಲೆಕ್ಕಾಚಾರದ ಪ್ರಕಾರ ನಡೆದರೆ ಉತ್ತರ ಕನ್ನಡ ಜಿಲ್ಲೆಯ ಲೋಕಸಭಾ ಕ್ಷೇತ್ರ ಮೂರು ದಶಕಗಳ ನಂತರ ಕಾಂಗ್ರೆಸ್ ತೆಕ್ಕೆಗೆ ಜಾರಲಿದೆ. ಈ ಲೆಕ್ಕಾಚಾರಗಳ ಹಿನ್ನೆಲೆಯಲ್ಲಿ ಸೂರಜ್ ನಾಯ್ಕ ಸಮರ್ಥ ಯುವ ಅಭ್ಯರ್ಥಿ ಎನ್ನಲಾಗುತ್ತಿದೆ.