ಸಿದ್ದಾಪುರ,೨೨- ಸರ್ಕಾರದ ಯೋಜನೆಗಳನ್ನು ಬಳ ಸಿಕೊಳ್ಳುವ ಮೂಲಕ ಸದೃಢ ರಾಗುವ ವಿದ್ಯಾರ್ಥಿಗಳು ಮುಖ್ಯವಾಹಿನಿಯ ಇತರರೊಂದಿಗೆ ಸ್ಪರ್ಧಿಸಲು ಸಾಧ್ಯ ಎಂದಿರುವ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್. ನಾಯ್ಕ ರಾಗಿ ಮಿಕ್ಸ್ ವಿದ್ಯಾರ್ಥಿಗಳ ದೈಹಿಕ, ಮಾನಸಿಕ ಬೆಳವಣಿಗೆಗೆ ಸಹಕಾರಿ ಎಂದಿದ್ದಾರೆ.
ನಗರದ mhps ಬಾಲಿಕೊಪ್ಪ ದಲ್ಲಿ ಸರ್ಕಾರದ ನೂತನ ಯೋಜನೆ ರಾಗಿ ಮಿಕ್ಸ್ ವಿತರಣೆ ಕಾರ್ಯಕ್ರಮ ದಲ್ಲಿ ಮಾತನಾಡಿದ ಅವರು ಭವ್ಯ ಭಾರತದ ನಿರ್ಮಾಣಕ್ಕೆ ಸದೃಢ ಯುವ ಶಕ್ತಿ ತಯಾರಿಸಲು ಈ ಯೋಜನೆ ಪೂರಕ ಎಂದರು. ರಾಗಿ ಮಿಕ್ಸ್ ವಿತರಣೆಯ ತಾಲೂಕು ಮಟ್ಟದ ಕಾರ್ಯಕ್ರಮಕ್ಕೆ ಪ.ಪಂ. ಸದಸ್ಯೆ ಚಂದ್ರಕಲಾ ನಾಯ್ಕ ಚಾಲನೆ ನೀಡಿ ಶುಭ ಕೋರಿದರು. ಪ್ರ. ಪೋ. ಅಭಿಯಾನದ ಸಹಾಯಕ ನಿರ್ದೇಶಕ ಭೂಮೇಶ್ ಸರ್ವರನ್ನೂ ಸ್ವಾ ಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶಾಲಾಭಿವೃದ್ಧಿ ಸಮೀತಿ ಅಧ್ಯಕ್ಷ ಕನ್ನೇಶ್ ನಾಯ್ಕ ಕೋಲಶಿರ್ಶಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶಿಕ್ಷಕ ಅರ್ಜುನ್ ಚೌವ್ಹಾಣ್ ನಿರೂ ಪಿಸಿದರು. ಮುಖ್ಯಾಧ್ಯಾಪಕಿ ಸುಜಾತಾ ಶಾನಭಾಗ ವಂದಿಸಿದರು.